Breaking News

ಟೀಂ ಇಂಡಿಯಾ ಕಟ್ಟಿದ್ದು ‘ದಾದ’ ಅಲ್ಲ, ದ್ರಾವಿಡ್: ಕುತೂಹಲ ಕೆರಳಿಸಿದ ರೈನಾ ಮಾತು

Spread the love

ಮುಂಬೈ: ಟೀಂ ಇಂಡಿಯಾ ಮಾಜಿ ಕ್ರಿಕೆಟಿಗರ ಸುರೇಶ್ ರೈನಾ ತಮ್ಮ ಆತ್ಮಕತೆ ‘ಬಿಲೀವ್’ ಪುಸ್ತಕದಲ್ಲಿ ಹಲವು ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ.

ಅದರಲ್ಲೂ ಟೀಂ ಇಂಡಿಯಾ ಕಟ್ಟಿದ್ದು, ಸೌರವ್ ಗಂಗೂಲಿ, ಧೋನಿ ಅಲ್ಲ, ಬದಲಾಗಿ ರಾಹುಲ್ ದ್ರಾವಿಡ್ ಎನ್ನುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ‘ದಾದ’ ಒಬ್ಬರೇ ತಂಡ ಕಟ್ಟಿದರು ಎಂದು ನಾನೆಲ್ಲಿಯೂ ಹೇಳಿಕೊಂಡಿಲ್ಲ ಎಂದ ರೈನಾ ದ್ರಾವಿಡ್ ಬಗ್ಗೆ ವಿಶೇಷವಾಗಿ ಹೊಗಳಿದ್ದಾರೆ.

‘ರಾಹುಲ್ ನಮಗೆ ಕುಟುಂಬ ಸದಸ್ಯರಂತಿದ್ದರು. ಕಿರಿಯ ಆಟಗಾರರಿಗಾಗಿ ಯಾವತ್ತೂ ಫೈಟ್ ಮಾಡ್ತಿದ್ದರು. ಅವರಿಗೆ ಯುವ ಆಟಗಾರರು ಮುಖ್ಯವಾಗಿದ್ದರು. ಅವರ ಅಡಿಯಲ್ಲಿ ಪಳಗಿದ ಆಟಗಾರರನ್ನು ನೋಡಿ. ಮುಂದಿನ ದಶಕದವರೆಗೂ ಅವರು ಟೀಂ ಇಂಡಿಯಾವನ್ನು ಆಳುತ್ತಾರೆ. ಧೋನಿ, ಯುವರಾಜ್, ಶ್ರೀಶಾಂತ್, ಪಿಯೂಷ್ ಚಾವ್ಲಾ ಜೊತೆಗೆ ನಾನೂ ಇದರಲ್ಲಿ ಸೇರಿದ್ದೇನೆ. ನಮ್ಮಂತಹ ಯುವ ಆಟಗಾರರ ಪ್ರಾಮುಖ್ಯತೆ ಅವರಿಗೆ ಗೊತ್ತಿತ್ತು.

ಎಲ್ಲರೂ ಟೀಂ ಇಂಡಿಯಾವನ್ನು ಕಟ್ಟಿದ್ದು ಯಾರು ಎಂಬ ಪ್ರಶ್ನೆಗೆ ಗಂಗೂಲಿ, ಧೋನಿ ಹೆಸರು ಹೇಳುತ್ತಾರೆ. ಆದರೆ ನನ್ನ ಪ್ರಕಾಋ ತಂಡ ಕಟ್ಟಿದ್ದು ದ್ರಾವಿಡ್. ಗಂಗೂಲಿ, ಧೋನಿ ಉತ್ತಮ ನಾಯಕರಾಗಿ ತಂಡವನ್ನು ಮುನ್ನಡೆಸಿದರು. ಆದರೆ ಮೂರೂ ಮಾದರಿಯಲ್ಲಿ ತಂಡ ಕಟ್ಟಿದ್ದು ದ್ರಾವಿಡ್’ ಎಂದು ರೈನಾ ತಮ್ಮ ಪುಸ್ತಕದಲ್ಲಿ ಅಭಿಪ್ರಾಯಪಟ್ಟಿದ್ದಾರೆ.


Spread the love

About Laxminews 24x7

Check Also

ಮಠ’ ಸಿನಿಮಾ ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆ

Spread the love ಬೆಂಗಳೂರು: ಸ್ಯಾಂಡಲ್ ವುಡ್ ನ ಖ್ಯಾತ ನಿರ್ದೇಶಕ, ನಟ ಗುರುಪ್ರಸಾದ್ (52) ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಂಗಳೂರಿನ ಮಾದನಾಯಕನಹಳ್ಳಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ