Breaking News

ಕೋವಿಡ್-19 ನಿರ್ವಹಣೆಯ ಹೆಸರಿನಲ್ಲಿಎರಡು ಸಾವಿರ ಕೋಟಿಗೂ ಹೆಚ್ಚು ಹಣ ಲೂಟಿ

Spread the love

ದಾವಣಗೆರೆ: ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಛೇರಿಯಲ್ಲಿ ಇವತ್ತು ಕರ್ನಾಟಕದ ಬಿಜೆಪಿ ಸರ್ಕಾರ ಕೋವಿಡ್-19 ನಿರ್ವಹಣೆಯ ಹೆಸರಿನಲ್ಲಿ ಮುಖ್ಯಮಂತ್ರಿ ಶ್ರೀ ಬಿ ಎಸ್ ಯಡಿಯೂರಪ್ಪನವರ ನೇತೃತ್ವದಲ್ಲಿ ಎರಡು ಸಾವಿರ ಕೋಟಿಗೂ ಹೆಚ್ಚು ಹಣವನ್ನು ಲೂಟಿ ಹೊಡೆದಿದ್ದು, ಸತ್ಯಾಸತ್ಯತೆ ಪರಿಶೀಲನೆಗೆ ಹೈಕೋರ್ಟ್ ನ್ಯಾಯಮೂರ್ತಿಗಳಿಂದ ನ್ಯಾಯಾಂಗ ತನಖೆ ಮಾಡಿಸಬೇಕು ಹಾಗೂ ಇದರ ಬಗ್ಗೆ ಚರ್ಚಿಸಲು ಕೂಡಲೇ ವಿಧಾನ‌ಮಂಡಲದ ಅಧಿವೇಶನವನ್ನು ಕರೆಯಬೇಕು ಎನ್ನುವುದರ ಸಲುವಾಗಿ ಇವತ್ತು ಕೇಂದ್ರದ ಮಾಜಿ ಸಚಿವರು ಹಾಗೂ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸದಸ್ಯರಾದ ಶ್ರೀ ಕೆ ಎಚ್ ಮುನಿಯಪ್ಪರವರೊಂದಿಗೆ ಪತ್ರಿಕಾಗೋಷ್ಠಿಯನ್ನು ನಡೆಸಿ ಮಾತನಾಡಲಾಯಿತು.

‘ರಾಜ್ಯದಲ್ಲಿ ಕೋವಿಡ್-19 ನಿರ್ವಹಣೆಗೆ ರೂ, 4,167 ಕೋಟಿ ವೆಚ್ಚ ಮಾಡಲಾಗಿದೆ. ರೂ, 324 ಕೋಟಿ ಮಾತ್ರ ಖರ್ಚು ಮಾಡಲಾಗಿದೆ ಎಂದು ಸಚಿವರೊಬ್ಬರು ಹೇಳಿಕೆ ನೀಡಿದ್ದಾರೆ, ಮತ್ತೊಬ್ಬ ಸಚಿವರು ರೂ, 780 ಕೋಟಿ ವೆಚ್ಚವಾಗಿದೆ ಎಂಬ ಮಾಹಿತಿಯನ್ನು ಮಾಧ್ಯಮಕ್ಕೆ ನೀಡಿದ್ದಾರೆ. ಆದರೆ, ಸರ್ಕಾರ ರೂ, 2,128 ಕೋಟಿಗೆ ಲೆಕ್ಕ ನೀಡಿದೆ. ಹಾಗಾದರೆ ಕೋವಿಡ್-19 ನಿರ್ವಹಣೆಗೆ ಖರ್ಚು ಮಾಡಿದ ನೈಜ ಹಣವೆಷ್ಟು??

ಕೇಂದ್ರ ಸರ್ಕಾರ ರೂ 4 ಲಕ್ಷಕ್ಕೆ ಒಂದರಂತೆ 50 ಸಾವಿರ ವೆಂಟಿಲೇಟರಗಳನ್ನು ಖರಿದಿಸಿದೆ. ತಮಿಳುನಾಡು ಸರ್ಕಾರ ಪ್ರತಿ ವೆಂಟಿಲೇಟರ್ ಗೆ ರೂ, 4.78 ಲಕ್ಷ ವೆಚ್ಚ ಮಾಡಿದೆ. ಕರ್ನಾಟಕದಲ್ಲಿ ರೂ, 18 ಲಕ್ಷ ನೀಡಿ ವೆಂಟಿಲೇಟರ್ ಖರೀದಿಸಲಾಗಿದೆ. ಇದನ್ನು ಭ್ರಷ್ಟಾಚಾರವೆಂದು ಹೇಳಿದರೆ ಬಿಜೆಪಿ ನೋಟಿಸ್ ನೀಡುತ್ತದೆ. ಧೈರ್ಯವಿದ್ದರೆ ಸರ್ಕಾರದ ಮುಖ್ಯ ಕಾರ್ಯದರ್ಶಿ ನೋಟಿಸ್ ನೀಡಲಿ.

ಪಿಪಿಇ ಕಿಟ್ ಖರೀದಿಯಲ್ಲಿ ಆರೋಗ್ಯ ಇಲಾಖೆ ಅವ್ಯವಹಾರ ನಡೆಸಿದೆ. ರೂ 330 ಬೆಲೆಯ ಪಿಪಿಇ ಕಿಟ್ ಗೆ ರೂ,2,117 ಬಿಲ್ ಮಾಡಿದೆ. ರೂ, 50 ಕ್ಕೆ ಸಿಗುವ ಮಾಸ್ಕ್ ಗೆ 150 ದರ ನೀಡಲಾಗಿದೆ. ಆಮ್ಲಜನಕ ಪೂರೈಕೆ ಉಪಕರಣವನ್ನು ಕೇರಳ ರಾಜ್ಯ ಸರ್ಕಾರ ರೂ, 2.6 ಲಕ್ಷಕ್ಕೆ ಖರೀದಿಸಿದೆ. ಕರ್ನಾಟಕ ಸರ್ಕಾರ ಇದೇ ಉಪಕರಣಕ್ಕೆ ರೂ, 4.36 ಲಕ್ಷ ನೀಡಿದೆ. ರೂ, 650 ಕ್ಕೆ ಸಿಗುವ ಥರ್ಮಲ್ ಸ್ಕ್ಯಾನರ್ ರೂ, 2,200 ಬೆಲೆ ತತ್ತಿದೆ. ಸಮಾಜ ಕಲ್ಯಾಣ‌ ಇಲಾಖೆ ಥರ್ಮಲ್ ಸ್ಕ್ಯಾನರ್ ಒಂದಕ್ಕೆ ರೂ, 9 ಸಾವಿರ ವೆಚ್ಚ ತೋರಿಸಿದೆ. ಇದು ಕೋವಿಡ್-19 ನೆಪದಲ್ಲಿ ಮಾಡಿದ ಲೂಟಿ ಅಲ್ಲವೇ?

https://youtu.be/uf_VgRz9V20

 

ಆರೋಗ್ಯ ಸಚಿವ ಬಿ‌ ಶ್ರೀರಾಮುಲು ಸುತ್ತ ಹೈದ್ರಾಬಾದ್ ಗುಂಪೊಂದು ನಿರ್ಮಾಣವಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರತಿ ವ್ಯವಹಾರವನ್ನು ಈ ಗುಂಪು ನಿರ್ವಹಿಸುತ್ತದೆ. ಜನರ ಆರೋಗ್ಯ ಕಾಪಾಡುವಲ್ಲಿ ಸಚಿವರು ಸಕ್ರಿಯರಾಗಿ ಕೆಲಸ ಮಾಡಬೇಕಿತ್ತು, ಆದರೆ ಅವರು ಅನ್ಯ ಕೆಲಸದಲ್ಲಿ ತಲ್ಲೀನರಾಗಿದ್ದಾರೆ.

ಪತ್ರಿಕಾಗೋಷ್ಠಿಯ ಸಂದರ್ಭದಲ್ಲಿ ಮಾಜಿ ಸಚಿವರಾದ ಗೌರವಾನ್ವಿತ ಶ್ರೀ ಶಾಮನೂರು ಶಿವಶಂಕರೆಪ್ಪನವರು, ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸದಸ್ಯರಾದ ಶ್ರೀ ಕೆ ಎಚ್ ಮುನಿಯಪ್ಪನವರು, ಮಾಜಿ ಎಂ ಎಲ್ ಸಿ ಗಳಾದ ಶ್ರೀ ಅಬ್ದುಲ್ ಜಬ್ಬಾರ, ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಹೆಚ್ ಬಿ ಮಂಜಪ್ಪ, ಜಿಲ್ಲಾ ಪಂಚಾಯತ್ ಅಧ್ಯಕ್ಷರು, ಮಾಜಿ ಶಾಸಕರಾದ ಶ್ರೀ ಡಿ ಜಿ ಶಾಂತಾಗೌಡರು, ಮಾಜಿ ಶಾಸಕರಾದ ಶ್ರೀ ರಾಜೇಶ, ಶಾಸಕರಾದ ಎಸ್ ರಾಮಪ್ಪ, ದಾವಣಗೆರೆ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆಯಾದ ಅನಿತಾ ಹಾಗೂ ಪಕ್ಷದ ಕಾರ್ಯಕರ್ತರು, ಮಾಧ್ಯಮದ ಮಿತ್ರರು ಹಾಗು ಇತರರು ಉಪಸ್ಥಿತರಿದ್ದರು..!


Spread the love

About Laxminews 24x7

Check Also

ದಾವಣಗೆರೆ ಜಿಲ್ಲಾ ಆಸ್ಪತ್ರೆಯ ನೂತನ ಕಟ್ಟಡಗಳಿಗಿಲ್ಲ ಉದ್ಘಾಟನೆ ‘ಭಾಗ್ಯ’

Spread the love ದಾವಣಗೆರೆ: ಇಲ್ಲಿನ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಮಹಿಳೆಯರ ಮತ್ತು ಮಕ್ಕಳ ವಿಭಾಗ ಹಾಗೂ ತುರ್ತು ಚಿಕಿತ್ಸಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ