Breaking News

5 ಗಂಟೆ ವಿಚಾರಣೆ ಎದುರಿಸಿದ ನರೇಶ್; ಇಂದು ಏನೆಲ್ಲಾ ನಡೀತು?

Spread the love

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧದ ಸಿಡಿ ಬಹಿರಂಗ ಪ್ರಕರಣದಲ್ಲಿ ಆರೋಪಿಯಾಗಿರುವ ನರೇಶ್​ ಗೌಡನ ವಿಚಾರಣೆ ಇಂದು ಕೂಡ ನಡೆಯಿತು.

ಐದು ಗಂಟೆಗಳ ಕಾಲ ನಡೆದ ಇಂದಿನ ಎಸ್‌ಐಟಿ ವಿಚಾರಣೆ ಅಂತ್ಯವಾಗಿದೆ. ಅದರಂತೆ 2ನೇ ದಿನದ ವಿಚಾರಣೆ ಮುಗಿಸಿ ವಕೀಲರೊಂದಿಗೆ ನರೇಶ್ ಗೌಡ ತೆರಳಿದ್ದಾರೆ. ಸದಾಶಿವನಗರದಲ್ಲಿ ರಮೇಶ್ ಜಾರಕಿಹೊಳಿ ದಾಖಲಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನರೇಶ್​​ನನ್ನ ವಿಚಾರಣೆಗೆ ಕರೆಯಲಾಗಿತ್ತು. ಅಗತ್ಯವಿದ್ದಲ್ಲಿ‌ ವಿಚಾರಣೆಗೆ ಕರೆಯುವುದಾಗಿ ಹೇಳಿ ಎಸ್‌ಐಟಿ ಅಧಿಕಾರಿಗಳ ತಂಡ ವಾಪಸ್ ಕಳುಹಿಸಿದೆ.

ನಾಳೆ ಶ್ರವಣ್​ ವಿಚಾರಣೆ
ಇಂದು ಬೆಳಗ್ಗೆ 11:30ಕ್ಕೆ ಆಡುಗೋಡಿ ಟೆಕ್ನಿಕಲ್ ಸೆಲ್​​ನಲ್ಲಿ ನರೇಶ್ ಗೌಡ ವಿಚಾರಣೆ ನಡೆಯಿತು. ಮತ್ತೊಬ್ಬ ಆರೋಪಿತ ಶ್ರವಣ್ ಕೊಟ್ಟಿರೋ ಹೇಳಿಕೆ ಆಧಾರದ ಮೇಲೆ‌ ತನಿಖಾಧಿಕಾರಿಗಳು ವಿಚಾರಣೆ ನಡೆಸಿದರು. ಮೂಲಗಳ ಪ್ರಕಾರ ಎಸ್​ಐಟಿ ಅಧಿಕಾರಿಗಳು ಸ್ಟಿಂಗ್ ಬಗ್ಗೆ ಹೆಚ್ಚು ವಿಚಾರಣೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಯುವತಿ ಬಗ್ಗೆಯೂ ಶ್ರವಣ್​ನನ್ನ ವಿಚಾರಣೆ ಮಾಡಲಾಗಿದ್ದು, ಸ್ಟಿಂಗ್ ಕ್ಯಾಮೆರಾ ಬಗ್ಗೆ ಬಾಯ್ಬಿಟ್ಟಿದ್ದಾನೆ ಎನ್ನಲಾಗಿದೆ. ಸ್ಟಿಂಗ್ ಮಾಡಲು ಯುವತಿಗೆ ಕ್ಯಾಮೆರಾ ಕೊಡಿಸಿದ್ದು, ಜೊತೆಗೆ ಯುವತಿಗೆ ಬೆದರಿಕೆಯೊಡ್ಡಿ ಸ್ಟಿಂಗ್ ಮಾಡಲು ಹೇಳಿರೋದು ಶ್ರವಣ್ ಅಂತಾ ಹೇಳಲಾಗಿದೆ. ಈ ಬಗ್ಗೆಯೇ ತನಿಖಾಧಿಕಾರಿಗಳು ಆರೋಪಿಗೆ ಪ್ರಶ್ನೆ ಮಾಡಿದ್ದಾರೆ.

ಮೊನ್ನೆ ವಕೀಲರ ಸಲಹೆಯಂತೆ ಉತ್ತರಿಸಿದ್ದ ನರೇಶ್ ಇವತ್ತೂ ಕೂಡ ವಕೀಲರ ಜೊತೆಗೆ ವಿಚಾರಣೆಗೆ ಆಗಮಿಸಿದ್ದ. ಇನ್ನು ನಾಳೆ ಮತ್ತೊಬ್ಬ ಆರೋಪಿ ಶ್ರವಣ್ ವಿಚಾರಣೆ ನಡೆಯಲಿದೆ ಎನ್ನಲಾಗಿದೆ.


Spread the love

About Laxminews 24x7

Check Also

ದಾವಣಗೆರೆ, ಬಾಗಲಕೋಟೆ ವಿಧಾನಸಭೆ ಬೈಎಲೆಕ್ಷನ್: ಉಸ್ತುವಾರಿ ಸಮಿತಿ ರಚನೆ; 31 ಜನರಿಗೆ ಜವಾಬ್ದಾರಿ

Spread the loveಬೆಂಗಳೂರು: ದಾವಣಗೆರೆ ಮತ್ತು ಬಾಗಲಕೋಟೆ ವಿಧಾನಸಭೆ ಉಪ ಚುನಾವಣೆ  ಹಿನ್ನೆಲೆ  ಎರಡೂ ಕ್ಷೇತ್ರಕ್ಕೆ ಕಾಂಗ್ರೆಸ್ ಉಸ್ತುವಾರಿ ವೀಕ್ಷಕರ ನೇಮಿಸಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ