Breaking News

ತಮಿಳುನಾಡಿನಲ್ಲಿ’ಮಮತಾ ಬ್ಯಾನರ್ಜಿʼಯನ್ನು ಮದುವೆಯಾದ ‘ಸೋಶಿಯಲಿಸಂʼ

Spread the love

ಚೆನ್ನೈ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಎಡ ಪಕ್ಷಗಳೊಂದಿಗೆ ಉತ್ತಮ ಸಂಬಂಧ ಹೊಂದಿಲ್ಲದಿದ್ದರೂ, ಮಮತಾ ಬ್ಯಾನರ್ಜಿ ಎಂಬ ಹೆಸರಿನ ಯುವತಿಯನ್ನು ಸೋಶಿಯಲಿಸಂ ಹೆಸರಿನ ಯುವಕನೋರ್ವ ಮದುವೆಯಾದ ಘಟನೆ ತಮಿಳುನಾಡಿನ ಸೇಲಂನಲ್ಲಿ ನಡೆದಿದೆ. ಹೆಸರಿನ ಕಾರಣದಿಂದಾಗಿ ಈ ಮದುವೆ ವಿಚಾರ ರಾಷ್ಟ್ರಾದ್ಯಂತ ಸುದ್ದಿಯಾಗಿದೆ.

ವಧು ಪಿ. ಮಮತಾ ಬ್ಯಾನರ್ಜಿ ಇಂಗ್ಲಿಷ್‌ ಸಾಹಿತ್ಯದಲ್ಲಿ ಪದವಿ ಪಡೆದಿದ್ದಾರೆ. ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸುವ ಕುಟುಂಬದಿಂದ ಬಂದ ವಧುವಿನ ಹೆಸರನ್ನು ಈಗ ಪಶ್ಚಿಮ ಬಂಗಾಳ ಮುಖ್ಯಮಂತ್ರಿಯಾಗಿರುವ ಮಮತಾ ಬ್ಯಾನರ್ಜಿಯವರ ಹೆಸರನ್ನು ಅವರು ಕಾಂಗ್ರೆಸ್‌ ಪಕ್ಷದಲ್ಲಿದ್ದ ಸಂದರ್ಭದಲ್ಲಿ ನಾಮಕರಣ ಮಾಡಲಾಗಿತ್ತು ಎಂದು ತಿಳಿದು ಬಂದಿದೆ.

“ನಾನು 9ನೇ ತರಗತಿಯಲ್ಲಿರುವಾಗ ನನ್ನ ಸ್ನೇಹಿತರ ಮಾತುಕತೆಯ ಮೂಲಕ ನನ್ನ ಹೆಸರಿನ ಹಿನ್ನೆಲೆಯ ಬಗ್ಗೆ ತಿಳಿಯಿತು” ಎಂದು ವಧು ಹೇಳಿದ್ದಾರೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕುರಿತು ನಿಮ್ಮ ಅಭಿಪ್ರಾಯವೇನು ಎಂದು ಪ್ರಶ್ನಿಸಿದ್ದಕ್ಕೆ, “ನಾನು ಆಕೆಯನ್ನು ತುಂಬಾ ಸಲ ನ್ಯೂಸ್‌ ನಲ್ಲಿ ನೋಡಿದ್ದೇನೆ. ಅವರೋರ್ವ ದಿಟ್ಟ ಮಹಿಳೆ. ಈ ಬಗ್ಗೆ ನನಗೆ ಹೆಮ್ಮೆಯಿದೆ” ಎಂದು ಹೇಳಿಕೆ ನೀಡಿದ್ದಾರೆ.

ಯುವಕ ʼಸೋಶಿಯಲಿಸಂʼ ನ ತಂದೆ ಸೇಲಂ ಸಿಪಿಐ ನ ಜಿಲ್ಲಾ ಕಾರ್ಯದರ್ಶಿಯಾಗಿದ್ದಾರೆ. ಸೋವಿಯತ್‌ ಯೂನಿಯನ್‌ ಕುಸಿಯುತ್ತಿದ್ದ ಸಂದರ್ಭ ಮಗನಿಗೆ ಸೋಶಿಯಲಿಸಂ ಎಂದು ನಾಮಕರಣ ಮಾಡಿದ್ದರು. ತನ್ನ ಇತರ ಇಬ್ಬರು ಪುತ್ರರಿಗೆ ಕಮ್ಯೂನಿಸಂ ಮತ್ತು ಲೆನಿನಿಸಂ ಎಂದು ನಾಮಕರಣ ಮಾಡಿದ್ದಾಗಿ ತಿಳಿದು ಬಂದಿದೆ. “ನಾನು ಮಕ್ಕಳು ಹುಟ್ಟುವ ಮೊದಲೇ ಹೆಸರು ಸಿದ್ಧಪಡಿಸಿದ್ದೆ” ಎಂದು ವರನ ತಂದೆ ಮೋಹನ್‌ ಹೇಳುತ್ತಾರೆ.

ಕುಟುಂಬದ ಆಪ್ತರ ಸಮ್ಮುಖದಲ್ಲಿ ಸೇಲಂನಲ್ಲಿ ಸರಳವಾಗಿ ವಿವಾಹ ನೆರವೇರಿದೆ.


Spread the love

About Laxminews 24x7

Check Also

ಹಾವೇರಿ: ಶರಣ ಚೌಡಯ್ಯ ಐಕ್ಯ ಮಂಟಪಕ್ಕೆ ಜಲದಿಗ್ಬಂಧನ, ತೆಪ್ಪದಲ್ಲಿ ತೆರಳಿ ಭಕ್ತರಿಂದ ಪೂಜೆ

Spread the loveಹಾವೇರಿ: ಸಂತರ, ಶರಣರ ಮತ್ತು ದಾರ್ಶನಿಕರ ಜಿಲ್ಲೆ ಹಾವೇರಿ. ಇಲ್ಲಿ ಸರ್ವಜ್ಞ, ಅಂಬಿಗರ ಚೌಡಯ್ಯ, ಕನಕದಾಸರು, ಶಿಶುನಾಳ ಶರೀಫರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ