ಚಿಕ್ಕೋಡಿ : ಕನ್ನಡ ಭಾಷೆಗೆ ಅವಮಾನಿಸಿದ ಸಚಿವ ಶ್ರೀಮಂತ ಪಾಟೀಲರನ್ನು ಸಚಿವ ಸಂಪುಟದಿಂದ ಕೈಬಿಡಬೇಕೆಂದು ಒತ್ತಾಯಿಸಿ ಸೋಮವಾರ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ತಹಸೀಲ್ದಾರ ಮುಖಾಂತರ ಸರಕಾರಕ್ಕೆ ಮನವಿ ಸಲ್ಲಿಸಿದರು.
ಅಥಣಿ ತಾಲೂಕಿನ ಬಾಳಿಗೇರಿ ಗ್ರಾಮದಲ್ಲಿ ಈಚೆಗೆ ನಡೆದ ಸಕ್ಕರೆ ಕಾರ್ಖಾನೆಯ ಅಡಿಗಲ್ಲು ಸಮಾರಂಭದ ವೇದಿಕೆಯಲ್ಲಿ ಮರಾಠಿ ನಾಮಫಲಕ ಹಾಕುವ ಜತೆಗೆ ಸಚಿವ ಶ್ರೀಮಂತ ಪಾಟೀಲರು ಕನ್ನಡ ಭಾಷೆ ಮರೆತು ಮರಾಠಿಯಲ್ಲಿಯೇ ಮಾತನಾಡಿದ್ದಾರೆ. ಇದು ಕನ್ನಡಿಗರಿಗೆ ನೋವುಂಟು ಮಾಡಿದ್ದಾರೆ. ಮರಾಠಿ ಪ್ರೇಮ ಮೆರೆದಿದ್ದಾರೆ. ಆದ ಕಾರಣ ಕೂಡಲೇ ಸಚಿವ ಶ್ರೀಮಂತ ಪಾಟೀಲ ಅವರನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಸಚಿವ ಸಂಪುಟದಿಂದ ಕೈ ಬಿಡುವಂತೆ ಮನವಿ ಮಾಡಿದರು.
ಕೂಡಲೇ ಮರಾಠಿ ಪ್ರೀತಿ ತೋರಿದ ಸಚಿವ ಶ್ರೀಮಂತ ಪಾಟೀಲ ಅವರನ್ನು ಸಚಿವ ಸ್ಥಾನದಿಂದ ಕೆಳಗೀಳಿಸದಿದ್ದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯೂ ರಾಜ್ಯದಾದ್ಯಂತ ಉಗ್ರ ಹೋರಾಟದ ದಾರಿ ತುಳಿಯಬೇಕಾಗುತ್ತದೆ ಎಂದು ಸರಕಾರಕ್ಕೆ ಎಚ್ಚರಿಕೆ ನೀಡಿದರು.
ತಮ್ಮ ಕ್ಷೇತ್ರದಲ್ಲಿ ಕನ್ನಡ ನಾಮಫಲಕಗಳನ್ನು ಅಳವಡಿಸದ ಶಾಸಕ, ಸಚಿವರು, ಜನಪ್ರತಿನಿಧಿಗಳಿಗೆ ಮಸಿ ಬಳಿಯುವ ಬಳಿಯುವ ಕಾರ್ಯಕ್ರಮವನ್ನು ಕರ್ನಾಟಕ ರಕ್ಷಣಾ ವೇದಿಕೆ ಹಮ್ಮಿಕೊಳ್ಳಲಿದೆ ಎಂದು ಕರವೇ ಕಾರ್ಯಕರ್ತರು ಜನಪ್ರತಿನಿಧಿಗಳಿಗೆ ಎಚ್ಚರಿಕೆ ನೀಡಿದರು.
ಕರವೇ ತಾಲೂಕಾ ಅಧ್ಯಕ್ಷ ನಾಗೇಶ ಮಾಳಿ, ಸಂಜು ಬಡಿಗೇರ, ಪ್ರತಾಪ ಪಾಟೀಲ, ಸಂಜು ಲಠ್ಠೆ, ಚನ್ನಪ್ಪ ಬಡಿಗೇರ, ಶಿವಂ ಮದಾಳೆ, ರಾಮಗೌಡ ಪಾಟೀಲ, ಶ್ರೀಕಾಂತ ಅಸೂದೆ, ಸುನೀಲ ಮಾಳಗೆ, ಶುಭಂ ಕದಮ, ರಘುನಾಥ ಪೋತದಾರ, ಅಮುಲ ನಾವಿ ಉಪಸ್ಥಿತರಿದ್ದರು.