Breaking News

ಬೆಂಗಳೂರು : ಪರಪುರುಷನ ಸಂಗದಿಂದ ಮಕ್ಕಳಿಗೆ ವಿಲನ್ ಆದ ತಾಯಿ : ಸದ್ಯ ಪೊಲೀಸರ ಅತಿಥಿ

Spread the love

ಬೆಂಗಳೂರು : ನಗರದ ರಾಜರಾಜೇಶ್ವರಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜಯಮ್ಮ ಎಂಬಾಕೆ ತನ್ನ ಇಬ್ಬರು ಮಕ್ಕಳ ಪಾಲಿಗೆ ವಿಲನ್ ಆಗಿದ್ದಾಳೆ.ಹೌದು ಜಯಮ್ಮಳದ್ದು ವಯಸ್ಸಲ್ಲ ವಯಸ್ಸಿನಲ್ಲಿ ಮದುವೆಯಾಗಿ ಎರಡು ಹೆಣ್ಣು ಮಕ್ಕಳನ್ನು ಹೊಂದಿದ್ದಾಳೆ. ಹೀಗೆ ಅಪ್ರಾಪ್ತಳನ್ನು ಮದುವೆಯಾಗಿದಕ್ಕೆ ಆಕೆಯ ಗಂಡ ಜೈಲು ಸೇರಿದ್ದಾನೆ.

ಈ ಇಬ್ಬರು ಮಕ್ಕಳೊಂದಿಗೆ ಜೀವನ ನಡೆಸುತ್ತಿದ್ದ ಜಯಮ್ಮ ಜೀವನ ನಿರ್ವಹಣೆಗಾಗಿ ಆಸ್ಪತ್ರೆವೊಂದರಲ್ಲಿ ಕೆಲಸಕ್ಕೆ ಸೇರಿಕೊಂಡು ಅಲ್ಲಿ ಪರಿಚಯವಾದ ಮತ್ತೊಬ್ಬಳ ಗಂಡನೊಂದಿಗೆ ಅಕ್ರಮ ಸಂಬಂಧ ಬೆಳೆಸಿದ್ದಾಳೆ. ಆತನ ಹೆಸರು ಹೇಮಂತ. ಹೆಮಂತ ಜಯಮ್ಮಳೊಂದಿಗೆ ಸರಸವಾಡುವ ಬಗ್ಗೆ ಮಕ್ಕಳು ಜೈಲಿನಲ್ಲಿರುವ ತನ್ನ ತಂದೆ ವಿಷಯ ಮುಟ್ಟಿಸಿದ್ದಾರೆ. ಇದರಿಂದ ಕೋಪಿತಳಾದ ಜಯಮ್ಮ ಹಾಗೂ ಆಕೆಯ ಪ್ರಿಯಕರ ಹೇಮಂತ ಮಕ್ಕಳಿಗೆ ಬರೆ ಹಾಕಿ ಚಿತ್ರ ಹಿಂಸೆ ನೀಡಿದ್ದಾರೆ.

ಮಕ್ಕಳು ಈ ಚಿತ್ರಹಿಂಸೆಯನ್ನು ಸಹಿಸಿಕೊಂಡಿರುವುದನ್ನು ಕಂಡ ಸ್ಥಳೀಯರು ಗುರುವಾರ ಹಲ್ಲೆ ಮಾಡುತ್ತಿದ್ದ ಇಬ್ಬರ ಮಕ್ಕಳನ್ನು ರಕ್ಷಣೆ ಮಾಡಿದ್ದಾರೆ. ಅಲ್ಲದೇ ರಾಜರಾಜೇಶ್ವರಿನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಬಂದ ಪೊಲೀಸರು, ಇಬ್ಬರು ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಮಕ್ಕಳು ಗುಣಮುಖವಾದ ಬಳಿಕ ಸರ್ಕಾರದ ಮಕ್ಕಳ ಕಲ್ಯಾಣ ಕೇಂದ್ರಕ್ಕೆ ಕಳುಹಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಅಮ್ಮನ ಅಕ್ರಮ ಸಂಬಂಧಕ್ಕೆ ಅಡ್ಡಿಪಡಿಸಿದ ಮಕ್ಕಳು ಸದ್ಯ ಅನಾಥವಾಗಿದ್ದಂತೂ ವಿಪರ್ಯಾಸ.


Spread the love

About Laxminews 24x7

Check Also

ಸ್ನೇಹಿತರೊಂದಿಗೆ ಪಾನಿಪುರಿ ತಿನ್ನಲು ಹೋದವನ ಮೇಲೆ ಹಲ್ಲೆ ; ಚಿಕಿತ್ಸೆ ಫಲಿಸದೇ ಸಾವು

Spread the loveಬೆಂಗಳೂರು : ಪಾನಿಪುರಿ ತಿನ್ನಲು ಹೋದಾಗ ಹಲ್ಲೆಗೊಳಗಾಗಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ. ನಂದಿನಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ