ಬೆಂಗಳೂರು: ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ವಿರೋಧಿಸಿ ಕಾಂಗ್ರೆಸ್ ಇಂದಿನಿಂದ ಐದು ದಿನ ರಾಜ್ಯಾದ್ಯಂತ ಐದು ಸಾವಿರ ಪೆಟ್ರೋಲ್ ಬಂಕ್‌ಗಳ ಮುಂದೆ ಹಮ್ಮಿಕೊಂಡಿರುವ ಸರಣಿ ಪ್ರತಿಭಟನೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕೆಪಿಸಿಸಿಯಿಂದ ಜಿಲ್ಲಾವಾರು ಉಸ್ತುವಾರಿಗಳನ್ನು ನೇಮಿಸಲಾಗಿದೆ.
ಶಾಸಕರು, ಮಾಜಿ ಸಚಿವರು ಮತ್ತು ಸಂಸದರು, ಮಾಜಿ ಸಂಸದರಿಗೆ ಜಿಲ್ಲಾವಾರು ಉಸ್ತುವಾರಿ ನೀಡಿದ್ದು, ಪ್ರತಿಯೊಬ್ಬರೂ ಪ್ರತಿಭಟನೆಯ ಮೇಲೆ ಜೂಮ್ ಮೂಲಕ ನಿಗಾ ಇರಿಸಿ ಕೆಪಿಸಿಸಿಗೆ ವರದಿ ನೀಡುವಂತೆ ಸೂಚನೆ ನೀಡಲಾಗಿದೆ. ಪ್ರತಿಭಟನೆಯ ಒಂದು ನಿಮಿಷದ ವೀಡಿಯೊವನ್ನು ಕೂಡ ಕಳುಹಿಸಿಕೊಡಲು ತಿಳಿಸಲಾಗಿದೆ. ಐದು ದಿನ ಜಿಲ್ಲಾ, ತಾಲೂಕು, ಜಿಲ್ಲಾ ಪಂಚಾಯತ್, ಹೋಬಳಿವಾರು 10 ಪೆಟ್ರೋಲ್ ಬಂಕ್‌ಗಳ ಮುಂದೆ ಪ್ರತಿಭಟನೆ ನಡೆಯಲಿದೆ.
Laxmi News 24×7