Breaking News

ದೇಸೂರು ಗ್ರಾಮಕ್ಕೆ ​ಲಕ್ಷ್ಮೀ ತಾಯಿ ಫೌಂಡೇಷನ್ ಹಾಗೂ ಹರ್ಷ ಶುಗರ್ಸ್ ವತಿಯಿಂದ​ ಉಚಿತ ಅಂಬ್ಯುಲೆನ್ಸ್

Spread the love

ಬೆಳಗಾವಿ– ಬೆಳಗಾವಿ​ ಗ್ರಾಮೀಣ​ ವಿಧಾನಸಭಾ ಕ್ಷೇತ್ರದ ದೇಸೂರು ಗ್ರಾಮಕ್ಕೆ ​ಲಕ್ಷ್ಮೀ ತಾಯಿ ಫೌಂಡೇಷನ್ ಹಾಗೂ ಹರ್ಷ ಶುಗರ್ಸ್ ವತಿಯಿಂದ​ ಉಚಿತ ಅಂಬ್ಯುಲೆನ್ಸ್ ವಾಹನದ ಸೇವೆಯನ್ನು ಒದಗಿಸ​ಲಾಗಿದೆ.
ಕೊರೋನಾ ಈ ಸಂಕಷ್ಟದ ಸಮಯದಲ್ಲಿ ಸೋಂಕಿನಿಂದಾಗಿ ಜನರು ತತ್ತರಿಸಿದ್ದು, ಜನರ ಆರೋಗ್ಯದ ವಿಶೇಷ ಕಾಳಜಿಯಡಿ ​ಈ ಸೇವೆ ಒದಗಿಸಲಾಗಿದೆ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ತಿಳಿಸಿದ್ದಾರೆ.
​ ಜನರು ಭಯಪಡದೇ ಹೆಚ್ಚಿನ ಪ್ರಮಾಣದಲ್ಲಿ ಗಂಟಲು ದ್ರವಗಳ ಮಾದರಿಯ​ ನೀಡಿ ಪರೀಕ್ಷಿಸಿಕೊಳ್ಳಬೇಕು. ಜೊತೆಗೆ ಕೋವಿಡ್ ಲಸಿಕೆಗಳನ್ನು (ವ್ಯಾಕ್ಸಿನೇಷನ್‌) ತ್ವರಿತಗತಿಯಲ್ಲಿ ಹಾಕಿಸಿಕೊಳ್ಳ​ಬೇಕು. ಅಲ್ಲದೆ ಮಾಸ್ಕ್, ಸ್ಯಾನಿಟೈಜರ್ ಗಳ​ನ್ನು ಕಡ್ಡಾಯವಾಗಿ ಬಳಸಬೇಕು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಮೂಲಕ ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾ ವಹಿಸ​ಬೇ​ಕು​ ಹಾಗೂ ಚಿಕ್ಕ ಮಕ್ಕಳ ಬಗ್ಗೆ ಜಾಗ್ರತೆ ಇರಲಿ​ ಎಂದು ಲಕ್ಷ್ಮಿ ಹೆಬ್ಬಾಳಕರ್ ಕ್ಷೇತ್ರದ ಜನರಲ್ಲಿ ವಿನಂತಿಸಿದ್ದಾರೆ.
ಅಂಬುಲೆನ್ಸ್ ಹಸ್ತಾಂತರಿಸುವ ವೇಳೆ ಗ್ರಾಮಸ್ಥರು, ಮ್ರಣಾಲ ಹೆಬ್ಬಾಳಕರ್, ಸ್ಥಳೀಯ ಜನಪ್ರತಿನಿಧಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು

Spread the love

About Laxminews 24x7

Check Also

ತವಂದಿ ಘಾಟನಲ್ಲಿ ಕಂದಕಕ್ಕೆ ಬಿದ್ದ ಕಂಟೇನರ್ ವಾಹನ

Spread the love ನಿಪ್ಪಾಣಿಯ ತವಂದಿ ಘಾಟನಲ್ಲಿ ಕಂದಕಕ್ಕೆ ಬಿದ್ದ ಕಂಟೇನರ್ ವಾಹನ ಚಿಕ್ಕೋಡಿ:ನಿಪ್ಪಾಣಿ ತಾಲೂಕಿನ ತವಂದಿ ಘಾಟ್‌ನಲ್ಲಿ ಕಂಟೇನರ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ