Breaking News

ನಿತ್ಯಾನಂದ ಭಾರತದಲ್ಲಿ ಕಾಲಿಟ್ಟ ಬಳಿಕವೇ ಕೊರೊನಾ ನಿರ್ಮೂಲನೆ; ಕೈಲಾಸವಾಸಿ ಭವಿಷ್ಯವಾಣಿ..!

Spread the love

ನವದೆಹಲಿ: ಭಾರತ ಕೊರೊನಾ ಎರಡನೇ ಅಲೆಯ ವಿರುದ್ಧ ಹೋರಾಟ ನಡೆಸುತ್ತಿದ್ದರೆ ಸ್ವಯಂ ಘೋಷಿತ ದೇವ ಮಾನವ ಮತ್ತೊಮ್ಮೆ ವಿವಾದತ್ಮಾಕ ಹೇಳಿಕೆ ನೀಡಿ ಸುದ್ದಿಯಾಗಿದ್ದಾರೆ.

2019ರಲ್ಲಿ ಭಾರತದಿಂದ ಪರಾರಿಯಾಗಿದ್ದ ಅತ್ಯಾಚಾರ ಆರೋಪಿ ನಿತ್ಯಾನಂದ ಸದ್ಯ ಈಕ್ವೆಡಾರ್​ ದ್ವೀಪವೊಂದನ್ನು ಖರೀದಿ ಮಾಡಿ ಅದಕ್ಕೆ ಕೈಲಾಸ ಎಂದು ನಾಮಕರಣ ಮಾಡಿ ಅಲ್ಲಿಯೇ ನೆಲೆಸಿದ್ದಾರೆ. ಈ ನಡುವೆ ನಿತ್ಯಾನಂದ ತನ್ನ ಹೊಸ ವೀಡಿಯೊ ಒಂದನ್ನ ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ನಾನು ಭಾರತಕ್ಕೆ ಕಾಲಿಟ್ಟರೆ ಮಾತ್ರ ದೇಶದಲ್ಲಿ ಮಹಾಮಾರಿ ಕೊರೊನಾ ನಿರ್ಮೂಲನೆಯಾಗುತ್ತೆ ಎಂದು ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಹೇಳಿಕೊಂಡಿದ್ದಾರೆ.

ನಿತ್ಯಾನಂದನ ಶಿಷ್ಯರೊಬ್ಬರು ಕೋವಿಡ್-19 ಯಾವಾಗ ಭಾರತವನ್ನು ತೊರೆಯುತ್ತದೆ ಎಂದು ಕೇಳಿದರು. ಇದಕ್ಕೆ ಉತ್ತರಿಸುವಾಗ ನಿತ್ಯಾನಂದನು, ಅಮ್ಮನ್ ದೇವಿಯು ತನ್ನ ಆಧ್ಯಾತ್ಮಿಕ ದೇಹವನ್ನು ಪ್ರವೇಶಿಸಿದ್ದಾಳೆ, ನಾನು ಭಾರತದ ನೆಲದ ಮೇಲೆ ಕಾಲಿಟ್ಟಾಗ ಮಾತ್ರ ಕೋವಿಡ್-19 ಭಾರತವನ್ನು ತೊರೆಯುತ್ತಾಳೆ ಎಂದು ಹೇಳಿಕೆ ನೀಡಿದ್ದಾರೆ..


Spread the love

About Laxminews 24x7

Check Also

ಮಹಿಳೆಯರು ಅಭಿವೃದ್ಧಿಯಾದರೆ ಮನೆ, ದೇಶ ಅಭಿವೃದ್ಧಿಯಾದಂತೆ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌

Spread the love ಮಹಿಳಾ ವಿಚಾರ ಗೋಷ್ಠಿ ಉದ್ಘಾಟಿಸಿದ ಸಚಿವರು  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ