ಕೋಲ್ಕತ: ಗುರುವಾರ (ಜೂನ್ 10) ಸೂರ್ಯಗ್ರಹಣ ಸಂಭವಿಸಲಿದ್ದು, ಉತ್ತರ ಅಮೆರಿಕ, ಯುರೋಪ್, ಏಷ್ಯಾದ ಭಾಗಗಳಲ್ಲಿ ಕಾಣಲಿದೆ. ಗ್ರಹಣವು ಬೆಳಗ್ಗೆ 11.42ಕ್ಕೆ ಶುರುವಾಗಲಿದೆ. 3.30ರ ಹೊತ್ತಿಗೆ ಖಗ್ರಾಸವಾಗಲಿದ್ದು, 4.52ರ ತನಕ ಮುಂದುವರಿಯಲಿದೆ. 6.41ಕ್ಕೆ ಗ್ರಹಣ ಮುಕ್ತಾಯವಾಗಲಿದೆ ಎಂದು ಕೋಲ್ಕತದ ಎಂಪಿ ಬಿರ್ಲಾ ಪ್ಲಾನೆಟೋರಿಯಂನ ನಿರ್ದೇಶಕ ದೇವಿಪ್ರಸಾದ್ ದುರೈ ಹೇಳಿದ್ದಾರೆ.
ಭಾರತದ ಅರುಣಾಚಲ ಪ್ರದೇಶ ಮತ್ತು ಲಡಾಖ್‌ನ ಕೆಲವು ಪ್ರದೇಶಗಳಲ್ಲಿ ಸೂರ್ಯಾಸ್ತಕ್ಕೆ ಮುನ್ನ 3ರಿಂದ 4 ನಿಮಿಷ ಕಾಲ ಗೋಚರಿಸಲಿದೆ. ಲಡಾಖ್‌ನ ಉತ್ತರ ಭಾಗದಲ್ಲಿ ಸಂಜೆ 6ರ ಹೊತ್ತಿಗೆ ಮತ್ತು ಅರುಣಾಚಲ ಪ್ರದೇಶದ ದಿಬಂಗ್ ವೈಲ್ಡ್ಲೈಫ್ ಸ್ಯಾಂಕ್ಚುರಿಯಲ್ಲಿ ಸಂಜೆ 5.52ರ ಹೊತ್ತಿಗೆ ಗ್ರಹಣ ಕಾಣಲಿದೆ.
Laxmi News 24×7