Breaking News

ದೇವಸ್ಥಾನಗಳ ಅರ್ಚಕರಿಗೆ ಆಹಾರದ ಕಿಟ್ ಮತ್ತು ಶಾಸಕರ ನಿಧಿಯಿಂದ 3 ಅಂಬುಲನ್ಸ್ ನೀಡಿದ ಆನಂದ ಮಾಮನಿ

Spread the love

ಸವದತ್ತಿ– .  ವಿಧಾನಸಭೆ ಉಪಸಭಾಪತಿ ಆನಂದ ಮಾಮನಿ ಶ್ರೀಕ್ಷೇತ್ರ ಯಲ್ಲಮ್ಮನ ಗುಡ್ಡದಲ್ಲಿ ತಾಲೂಕಿನ ದೇವಸ್ಥಾನಗಳ ಅರ್ಚಕರಿಗೆ ಆಹಾರದ ಕಿಟ್ ಮತ್ತು ಶಾಸಕರ ಸ್ಥಳೀಯ ಪ್ರದೇಶಾಭಿವೃದ್ದಿ ನಿಧಿ ಅನುದಾನದಡಿ ೪೪ ಲಕ್ಷ ರೂ ವೆಚ್ಚದಲ್ಲಿ ಯರಗಟ್ಟಿ, ಮುನವಳ್ಳಿ, ಸವದತ್ತಿ ಸರ್ಕಾರಿ ಆಸ್ಪತ್ರೆಗಳಿಗೆ ೩ ಅಂಬ್ಯುಲೆಸ್ಸ್ ವಾಹನ ಲೋಕಾರ್ಪಣೆಗೊಳಿಸಿದರು.

 

 

 

 

 

ಸರ್ಕಾರ ಬಡವರ ಜತೆಗಿದ್ದು ಯಾವುದೇ ಬಡ ಕುಟುಂಬಗಳು ಹಸಿವಿನಿಂದ ಮಲಗಬಾರದು ಎಂದು ಪ್ರತಿ ತಿಂಗಳು ಉಚಿತ ಪಡಿತರವನ್ನು ದೀಪಾವಳಿವರೆಗೂಕೊಡಲಿದೆ. ದುಡಿಯುವ ಕೈಗಳಿಗೆ ರಾಷ್ಟ್ರೀಯ ಉದ್ಯೋಗಖಾತ್ರಿ ಯೋಜನೆ ಅಡಿ ಪ್ರತಿಯೊಬ್ಬರಿಗೆ ಕೆಲಸ ನೀಡಿದೆ. ಕೋವಿಡ್-೧೯ ಮೂರನೆ ಅಲೆಯಲ್ಲಿ ಮಕ್ಕಳಿಗೆ ಹಾನಿಯಾಗದಂತೆ ಲಸಿಕೆ ತಯಾರು ಆಗುತ್ತಿದ್ದು ಜನರು ಆತಂಕ ಪಡುವ ಅಗತ್ಯವಿಲ್ಲ, ಕರೋನಾ ತೊಲಗಿಸಲು ಪ್ರತಿಯೊಬ್ಬರು ಭಯ ಪಡದೆ ಲಸಿಕೆ ಹಾಕಿಸಿಕೊಳ್ಳಿ, ೧೮ ವರ್ಷ ಮೇಲ್ಪಟ್ಟವರಿಗೆ ಜೂ ೨೧ ರಿಂದ ಪ್ರತಿಯೊಬ್ಬರಿಗೂ ಉಚಿತ ಲಸಿಕೆ ನೀಡುವುದಾಗಿ ಪ್ರಧಾನ ಮಂತ್ರಿಗಳು ಘೋಷಿಸಿದ್ದು ಇದರ ಲಾಭ ಪಡೆದುಕೊಳ್ಳಬೇಕೆಂದು ಕರೆ ನೀಡಿದ ಅವರು ಬೆಗ ಕರೋನಾ ತೊಲಗಲಿ ಎಂದರು.

 

 

 

 

 

ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿ ರವಿ ಕೋಟಾರಗಸ್ತಿ ಮಾತನಾಡಿ ತಾಲೂಕಿನ ದೇವಸ್ಥಾನ ಅರ್ಚಕರು, ಸಿಬ್ಬಂದಿ ಮತ್ತು ಜನತೆ ಧೈರ್ಯದಿಂದ ಕರೋನಾ ಸಂಕಷ್ಟದ ಸಂದರ್ಭವನ್ನು ಎದುರಿಸಿ ಜಯಿಸಿ ಕರೋನಾ ತೊಲಗಿಸಬೇಕು ಎಂದರು.

ಶ್ರೀಕ್ಷೇತ್ರ ಯಲ್ಲಮ್ಮನ ದೇವಸ್ಥಾನ ಅಧಿಕಾರಿಗಳಿಗೆ ಹಾಗೂ ದೇವಸ್ಥಾನ ಅರ್ಚಕರು ಮತ್ತು ಸಿಬ್ಬಂದಿಗೆ ಶಾಸಕರು ಸೆನಿಟೈಜರ ಹಾಗು ಮಾಸ್ಕ್‌ಗಳನ್ನು ನೀಡಿದರು.

ತಹಶೀಲ್ದಾರ ಪ್ರಶಾಂತ ಪಾಟೀಲ, ಯರಗಟ್ಟಿ ತಹಶೀಲ್ದಾರ ಮಠದ, ತಾಪಂ ಇಓ ಯಶವಂತಕುಮಾರ, ಸವದತ್ತಿ ಪುರಸಭೆ ಮುಖ್ಯಾಧಿಕಾರಿ ಪ್ರಕಾಶ ಚನ್ನಪ್ಪನವರ, ತಹಶೀಲ್ದಾರ ಗ್ರೇಡ್-೨ ಎಮ್ ವಿ ಗುಂಡಪ್ಪಗೊಳ, ತಾಲೂಕಾ ವೈಧ್ಯಾಧಿಕಾರಿ ಮಹೇಶ ಚಿತ್ತರಗಿ, ಸಿ ಎಸ್ ಪಟ್ಟಣಶೆಟ್ಟಿ, ದೇವಸ್ಥಾನ ಅಭಿಯಂತರ ಎ ವಿ ಮುಳ್ಳೂರ, ಡಿ ಆರ್ ಚವ್ಹಾಣ, ದೇವಸ್ಥಾನ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ನಾಗರತ್ನಾ ಚೋಳಿನ ಮತ್ತು ಅರವಿಂದ್ರ ಮಾಳಗೆ, ಕೊಳ್ಳಪ್ಪಗೌಡ ಗಂದಿಗವಾಡ, ಸಿಪಿಆಯ್ ಮಂಜುನಾಥ ನಡುವಿನಮನಿ, ಪಿಎಸ್‌ಆಯ್ ಶಿವಾನಂದ ಗುಡಗನಟ್ಟಿ, ಯಲ್ಲಪ್ಪ ಕಾಳಪ್ಪನವರ, ಪಂಡಿತ ಯಡೂರಯ್ಯ, ಪರಸನಗೌಡ ಕಾಳಿಂಗೌಡ್ರ, ಬಸನಗೌಡ ಶೆಟ್ಟಿನಗೌಡ್ರ, ಜಗದನಗೌಡ ಪೊಲೇಶಿ, ಮತ್ತು ತಾಲೂಕಾ ಅಧಿಕಾರಿಗಳು ಅರ್ಚಕರು ಇತರರು ಇದ್ದರು.


Spread the love

About Laxminews 24x7

Check Also

2ಎ ಅಡಿಯಲ್ಲಿ ಮೀಸಲಾತಿಗೆ ಆಗ್ರಹಿಸಿಚಿಕ್ಕೋಡಿಯ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ

Spread the loveಪಂಚಮಸಾಲಿ ಸಮಾಜಕ್ಕೆ ಪ್ರವರ್ಗ 2ಎ ಅಡಿಯಲ್ಲಿ ಮೀಸಲಾತಿಗೆ ಆಗ್ರಹಿಸಿ ಡಿ.10ರಂದು ಬೆಳಗಾವಿಯ ಸುವರ್ಣಸೌಧಕ್ಕೆ ಮುತ್ತಿಗೆ ಹಾಕುವ ಮೂಲಕ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ