Breaking News

ಭೂಮಿ ಪೂಜೆ ಲೈವ್‌ – ಇಂದಿರಾ ಗಾಂಧಿ ಭಾಷಣದ ವಿಡಿಯೋ ಅಪ್ಲೋಡ್‌ ಮಾಡಿ ಪ್ರಶ್ನೆ ಕೇಳಿದ ಬಿಜೆಪಿ

Spread the love

ನವದೆಹಲಿ: ಅಯೋಧ್ಯೆ ರಾಮ ಮಂದಿರ ಭೂಮಿ ಪೂಜೆಯ ಕಾರ್ಯಕ್ರಮವನ್ನು ಡಿಡಿ ವಾಹಿನಿಯಲ್ಲಿ ಲೈವ್‌ ಪ್ರಸಾರ ಮಾಡವುದಕ್ಕೆ ಟೀಕೆ ವ್ಯಕ್ತವಾಗಿದ್ದಕ್ಕೆ ಬಿಜೆಪಿ ಇಂದಿರಾ ಗಾಂಧಿ ಭಾಷಣದ ವಿಡಿಯೋವನ್ನು ರಿಲೀಸ್‌ ಮಾಡಿ ತಿರುಗೇಟು ನೀಡಿದೆ.

ಆಗಸ್ಟ್‌ 5 ರಂದು ಆಯೋಜನೆಗೊಂಡಿರುವ ರಾಮ ಮಂದಿರದ ಗುದ್ದಲಿ ಪೂಜೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿರುವ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ದೂರದರ್ಶನ ಲೈವ್‌ ಪ್ರಸಾರ ಮಾಡಲು ಸಿದ್ಧತೆ ನಡೆಸುತ್ತಿತ್ತು.ಸರ್ಕಾರದ ವಾಹಿನಿಯಾಗಿರುವ ಡಿಡಿ ಈ ಕಾರ್ಯಕ್ರಮವನ್ನು ಪ್ರಸಾರ ಮಾಡಲು ಮುಂದಾಗಿದ್ದಕ್ಕೆ ಸಿಪಿಐ ಆಕ್ಷೇಪ ವ್ಯಕ್ತಪಡಿಸಿತ್ತು. ಸಿಪಿಐ ಸಂಸದ ಬಿನೊಯ್ ವಿಶ್ವಂ ಅವರು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆಯ ಸಚಿವ ಪ್ರಕಾಶ್‌ ಜಾವಡೇಕರ್‌ ಅವರಿಗೆ ಪತ್ರ ಬರೆದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. 

ಜಾತ್ಯತೀತತೆ ಮತ್ತು ಧಾರ್ಮಿಕ ಸಾಮರಸ್ಯದ ತತ್ವಗಳ ಮೇಲೆ ಸ್ಥಾಪಿತವಾದ ದೇಶಕ್ಕೆ ರಾಷ್ಟ್ರೀಯ ವಾಹಿನಿಯಾಗಿರುವ ದೂರದರ್ಶನ ಆಗಸ್ಟ್ 5 ರಂದು ಅಯೋಧ್ಯೆಯಲ್ಲಿ ಧಾರ್ಮಿಕ ಕಾರ್ಯವನ್ನು ಪ್ರಸಾರ ಮಾಡುವುದು ರಾಷ್ಟ್ರೀಯ ಸಮಗ್ರತೆಯ ಅಂಗೀಕೃತ ಮಾನದಂಡಗಳಿಗೆ ವಿರುದ್ಧವಾಗಿದೆ ಎಂದು ಪತ್ರ ಬರೆದಿದ್ದಾರೆ.

ಈ ಪತ್ರದ ಬೆನ್ನಲ್ಲೇ ಬಿಜೆಪಿ, ಡಿಡಿ ನ್ಯಾಷನಲ್‌ನಲ್ಲಿ 1980ರ ಉತ್ತರ ಪ್ರದೇಶದ ದಿಯೋಬಂದ್‌ ಕಾರ್ಯಕ್ರಮದಲ್ಲಿ ಇಂದಿರಾ ಗಾಂಧಿ ಮಾಡಿದ ಭಾಷಣದ ವಿಡಿಯೋವನ್ನು ಟ್ಚಿಟ್ಟರ್‌ನಲ್ಲಿ ಅಪ್ಲೋಡ್‌ ಮಾಡಿ ಟೀಕಿಸಿದವರಿಗೆ ಪ್ರಶ್ನೆ ಕೇಳಿದೆ.

ಭಾರತ ಮತ್ತು ಜಗತ್ತಿಗೆ ದಾರುಲ್ ಉಲೂಮ್ ನಿಜವಾದ ಇಸ್ಲಾಮಿಕ್ ಸಂಪ್ರದಾಯದ ಸೇವೆ ಸಲ್ಲಿಸುತ್ತಲೇ ಇರುತ್ತದೆ. 1980ರ ದಿಯೋಬಂದ್‌ ಕಾರ್ಯಕ್ರಮದಲ್ಲಿ ಇಂದಿರಾ ಗಾಂಧಿ ಮಾಡಿದ ಭಾಷಣದದ ವಿಡಿಯೋ ಇದಾಗಿದ್ದು, ಭೂಮಿ ಪೂಜೆಯ ಲೈವ್‌ ವಿರೋಧಿಸುವ ಜನರು ಡಿಡಿ ಪ್ರಸಾರ ಮಾಡಿರುವ ಇಂದಿರಾ ಅವರ ದಿಯೋಬಂದ್ ಭೇಟಿಯ ಬಗ್ಗೆ ಏನು ಹೇಳುತ್ತಾರೆ ಎಂದು ಪ್ರಶ್ನಿಸಿದೆ


Spread the love

About Laxminews 24x7

Check Also

‘ಅಂಬರೀಶ್ ಆಶೀರ್ವಾದದಿಂದ ಮಗನ ಸಿನಿಮಾ ಬಿಡುಗಡೆ’: ಅಂಬಿ ಸಮಾಧಿಗೆ ಪೂಜೆ ಸಲ್ಲಿಸಿದ ಸುಮಲತಾ

Spread the love ಮಂಡ್ಯ: ಇಂದು ಕನ್ನಡಿಗರ ಮೆಚ್ಚಿನ ನಟ ಅಂಬರೀಶ್ ಅವರ 5ನೇ ವರ್ಷದ ಪುಣ್ಯಸ್ಮರಣೆ ಹಿನ್ನೆಲೆ, ಮಂಡ್ಯದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ