Breaking News

ವಧು ಯಾಮಿಯನ್ನ ರಾಧೆ ಮಾಗೆ ಹೋಲಿಸಿದ ನಟ – ಚಪ್ಪಲಿ ಕೇಳಿದ ಕಂಗನಾ

Spread the love

ಮುಂಬೈ: ವಧು ಯಾಮಿ ಗೌತಮಿಯನ್ನ ರಾಧೆ ಮಾಗೆ ನಟ ವಿಕ್ರಾಂತ್ ಮೆಸ್ಸಿ ಹೋಲಿಕೆ ಮಾಡಿದ್ದಕ್ಕೆ ನಟಿ ಕಂಗನಾ ರಣಾವತ್ ಕೆಂಡಾಮಂಡಲವಾಗಿದ್ದಾರೆ. ನಟನ ಕಮೆಂಟ್ ಗೆ ರಿಪ್ಲೈ ಮಾಡಿರುವ ಕಂಗನಾ, ನನ್ನ ಚಪ್ಪಲಿ ಕೊಡು ಎಂದು ಕಮೆಂಟ್ ಮಾಡಿದ್ದಾರೆ.

ಜೂನ್ 4ರಂದು ಯಾಮಿ ಹಿಮಾಚಲ ಪ್ರದೇಶದಲ್ಲಿ ಉರಿ ಚಿತ್ರದ ನಿರ್ದೇಶಕ, ರೈಟರ್ ಆದಿತ್ಯ ಅವರ ಜೊತೆ ವೈವಾಹಿಕ ಬಂಧನಕ್ಕೆ ಕಾಲಿಟ್ಟಿದ್ದರು. ಕೊರೊನಾ ಹಿನ್ನೆಲೆ ಆಪ್ತರ ಸಮ್ಮುಖದಲ್ಲಿ ಈ ಮದುವೆ ನಡೆದಿತ್ತು. ಫೋಟೋಗಳು ವೈರಲ್ ಬಳಿಕ ಅಭಿಮಾನಿಗಳಿಗೆ ಮದುವೆ ವಿಷಯ ತಿಳಿದಿತ್ತು. ಅಭಿಮಾನಿಗಳು ಸೇರಿದಂತೆ ಸ್ಟಾರ್ ಗಳು ಸೋಶಿಯಲ್ ಮೀಡಿಯಾ ಮೂಲಕವೇ ನಟಿಗೆ ಮದುವೆ ವಿಷಯ ತಿಳಿಸಿದ್ದರು.

ಅದೇ ರೀತಿ ಕಂಗನಾ ರಣಾವತ್, ಹಿಮಾಚಲ ಪ್ರದೇಶದ ವಧು ಗಾರ್ಜಿಯಸ್ ಮತ್ತು ನೋಡಲು ದೇವಿಯ ರೀತಿಯಲ್ಲಿ ಕಾಣುತ್ತಿದ್ದಾರೆ ಎಂದು ಯಾಮಿ ಫೋಟೋಗೆ ಕಮೆಂಟ್ ಮಾಡಿದ್ದರು. ಇದೇ ಫೋಟೋಗೆ ವಿಕ್ರಾಂತ್ ಮೆಸ್ಸಿ, ಶುದ್ಧ ಮತ್ತು ಪವಿತ್ರ, ನೋಡಲು ಅಚ್ಚು ರಾಧೆ ಮಾ.. ಎಂದು ಬರೆದುಕೊಂಡಿದ್ದರು. ಈ ಕಮೆಂಟ್ ಗೆ ಪ್ರತಿಕ್ರಿಯಿಸಿರುವ ಕಂಗನಾ, ಎಲ್ಲಿಂದ ಬಂತು ಈ ಜಿರಳೆ, ನನ್ನ ಚಪ್ಪಲಿಯನ್ನ ಕೊಡಿ ಎಂದು ಹೇಳಿದ್ದಾರೆ.

ರಾಧೆ ಮಾ ಸ್ವಯಂ ಘೋಷಿತ ದೇವತೆ. ಹಲವು ವಿವಾದಗಳಿಂದಲೇ ರಾಧೆ ಮಾ ಸುದ್ದಿಯಲ್ಲಿದ್ದರು. ರಾಧೆ ಮಾ ಸಹ ಕೆಂಪು ಬಣ್ಣದ ಸೀರೆ ಧರಿಸಿ ಕಾಣಿಸಿಕೊಳ್ಳುತ್ತಿದ್ದರು. ಇದೀಗ ಯಾಮಿ ಸಹ ಕೆಂಪು ಬಣ್ಣದ ಸೀರೆ ಧರಿಸಿ, ಸಿಂಧೂರವಿಟ್ಟ ಫೋಟೋ ವೈರಲ್ ಆಗಿದೆ.


Spread the love

About Laxminews 24x7

Check Also

ಔತಣ ಕೂಟದಲ್ಲಿ ಪಾಲ್ಗೊಂಡು, ಡಿಕೆಶಿಗೆ ಅಭಿನಂದಿಸಿದ ಹೆಬ್ಬಾಳಕರ್, ಹಟ್ಟಿಹೊಳಿ

Spread the loveಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿ 6 ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಖಾಸಗಿ ಹೊಟೇಲ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ