Breaking News

7 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ಭೀಕರ ದಾಳಿ.. ಪರಿಹಾರಕ್ಕಾಗಿ ಒತ್ತಾಯ

Spread the love

ದಾವಣಗೆರೆ: 7 ವರ್ಷದ ಬಾಲಕಿ ಮೇಲೆ ಬೀದಿ ನಾಯಿಗಳು ಭೀಕರವಾಗಿ ದಾಳಿ ನಡೆಸಿರೋ ಶಾಕಿಂಗ್ ಘಟನೆ ದಾವಣಗೆರೆಯ ಆಜಾದ್ ನಗರದಲ್ಲಿ ನಡೆದಿದೆ.

ಸಲಾಮ್ ಹಾಗೂ ತಬಸುಬ ಬಾನು ಎಂಬವರ ಮಗಳು ಕನೋಸ್ ಫಾತಿಮಾ ದಾಳಿಗೊಳಗಾದ ಬಾಲಕಿ. ಮಧ್ಯ ರಾತ್ರಿ ಮೂರು ಗಂಟೆ ಸುಮಾರಿಗೆ ಫಾತಿಮಾ ಮೇಲೆ ನಾಯಿಗಳು ದಾಳಿ ನಡೆಸಿವೆ. ಇದರಿಂದ ಬಾಲಕಿಯ ಕಾಲು, ತಲೆ ಸೇರಿದಂತೆ ಮೈತುಂಬಾ ಗಂಭೀರ ಗಾಯಗಳಾಗಿವೆ.

ಫಾತಿಮಾಳನ್ನ ಸದ್ಯ ಬಾಪುಜಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗ್ತಿದ್ದು, ಆಕೆಯ ಸ್ಥಿತಿ ಚಿಂತಾಜನಕವಾಗಿದೆ. ಬಾಲಕಿಗೆ ಪರಿಹಾರ ನೀಡಬೇಕೆಂದು ಆಜಾದ್ ನಗರದ ಜನರು ಪ್ರತಿಭಟನೆ ನಡೆಸಿದ್ದಾರೆ.


Spread the love

About Laxminews 24x7

Check Also

ಕಾಗವಾಡ ತಾ.ಶೇಡಬಾಳದ ಬಿಎಸ್ಎಫ್ ಯೋಧ ಅನಾರೋಗ್ಯದಿಂದ ನಿಧನ

Spread the love ಕಾಗವಾಡ ತಾ.ಶೇಡಬಾಳದ ಬಿಎಸ್ಎಫ್ ಯೋಧ ಅನಾರೋಗ್ಯದಿಂದ ನಿಧನ ಬಿಎಸ್ಎಫ್ ಯೋಧ ದಗಡು ಪೂಜಾರಿ ರಜೆಯ ಮೇಲೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ