Breaking News

ಕಡಹೆಮ್ಮಿಗೆ: ಶಿಥಿಲಗೊಂಡ ನೀರಿನ ಟ್ಯಾಂಕ್‌; ಆತಂಕದಲ್ಲಿ ಜನರು

Spread the love

ಕಿಕ್ಕೇರಿ: ಹೋಬಳಿಯ ಕಡಹೆಮ್ಮಿಗೆ ಗ್ರಾಮದಲ್ಲಿನ ಕುಡಿಯುವ ನೀರಿನ ಟ್ಯಾಂಕ್ ಶಿಥಿಲಗೊಂಡಿದ್ದು, ಕುಸಿಯುವ ಹಂತ ತಲುಪಿದೆ.

ಹೋಬಳಿಯ ಗಡಿಯಂಚಿನ ಗ್ರಾಮವಾದ ಆನೆಗೊಳ ಗ್ರಾ.ಪಂ ವ್ಯಾಪ್ತಿಗೆ ಈ ಗ್ರಾಮ ಸೇರಿದೆ. ಗ್ರಾಮದ ಜೊತೆಗೆ ಕಡಹೆಮ್ಮಿಗೆ ಕೊಪ್ಪಲು ಗ್ರಾಮ ಹೊಂದಿಕೊಂಡಿದೆ. ಸುಮಾರು 1,480 ಜನಸಂಖ್ಯೆ ಇದೆ. ಎರಡು ಗ್ರಾಮಗಳಿಗೆ ಈ ಟ್ಯಾಂಕಿನಿಂದ ನೀರು ಸರಬರಾಜು ಆಗುತ್ತಿದೆ. ಆದರೆ, ಶುಚಿತ್ವವೂ ಇಲ್ಲ. ಟ್ಯಾಂಕ್‌ನ ಪ್ಲಾಸ್ಟರಿಂಗ್‌ ಕಳಚಿ ಬೀಳುತ್ತಿದೆ. ಕಬ್ಬಿಣಗಳು ಹೊರಗೆ ಕಾಣಿಸುತ್ತಿದ್ದು, ತುಕ್ಕು ಹಿಡಿಯುತ್ತಿವೆ. ಕೆಲವೆಡೆ ನೀರು ಸೋರಿಕೆ ಆಗುತ್ತಿದೆ.

ಗ್ರಾಮಕ್ಕೆ ತುಸು ದೂರದಲ್ಲಿಯೇ ಹೇಮಾವತಿ ನದಿ ಇದ್ದರೂ ನೀರು ಪೂರೈಕೆಗೆ ವ್ಯವಸ್ಥೆ ಮಾಡಿಲ್ಲ. ಗ್ರಾಮ
ದಲ್ಲಿ ನಾಲ್ಕು ನೀರಿನ ತೊಂಬೆಗಳಿವೆ. ಆದರೆ, ಸಮರ್ಪಕ ವಿದ್ಯುತ್ ನೀಡದ ಕಾರಣ ನೀರು ಪೂರೈಕೆಗೂ ತೊಡಕಾಗಿದೆ.

ಟ್ಯಾಂಕ್‌ ಅನ್ನು ನಿಯಮಿತವಾಗಿ ಸ್ವಚ್ಛಗೊಳಿಸುತ್ತಿಲ್ಲ. ಅಶುದ್ಧ ನೀರಿನ ಸೇವನೆಯಿಂದ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ರೋಗಗಳ ಭೀತಿಯಲ್ಲಿ ಗ್ರಾಮಸ್ಥರು ಇದ್ದಾರೆ. ಕೆಲವರು ಅಕ್ಕಪಕ್ಕದ ಜಮೀನಿನಿಂದ ಕುಡಿಯುವ ನೀರು ತರುತ್ತಿದ್ದಾರೆ.

***

ಹೊಸ ಟ್ಯಾಂಕ್‌ ನಿರ್ಮಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕು.

-ರಮೇಶ್, ಗ್ರಾ.ಪಂ ಸದಸ್ಯ, ಕಡಹೆಮ್ಮಿಗೆ

 

ಗ್ರಾಮದ ನೀರಿನ ಟ್ಯಾಂಕ್‌ ಅನ್ನು ಪರಿಶೀಲಿಸಲಾಗಿದೆ. ಹೊಸದಾಗಿ ಟ್ಯಾಂಕ್ ನಿರ್ಮಿಸುವ ಸಂಬಂಧ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ.

-ಚಂದ್ರಶೇಖರ್, ತಾ.ಪಂ ಇಒ


Spread the love

About Laxminews 24x7

Check Also

ಜನರಲ್ಲಿ ವೈಚಾರಿಕತೆ, ವೈಜ್ಞಾನಿಕತೆ ಬೆಳೆಯದಿದ್ದರೆ, ಕೇವಲ ಮೌಢ್ಯ ನಿಷೇಧ ಕಾನೂನಿನ ಮೂಲಕ ನಿರೀಕ್ಷಿತ ಬದಲಾವಣೆ ಸಾಧ್ಯವಿಲ್ಲ ಎಂದ ಸಿಎಂ

Spread the loveಬೆಂಗಳೂರು: ”ದ್ವಿಭಾಷಾ ಸೂತ್ರ ನನ್ನ ಅಭಿಪ್ರಾಯವಾಗಿದೆ. ಅದನ್ನು ಸರ್ಕಾರದ ಅಭಿಪ್ರಾಯ ಮಾಡುವ ದಿಕ್ಕಿನಲ್ಲಿ ಪ್ರಯತ್ನಿಸುತ್ತೇನೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ