ಹುಬ್ಬಳ್ಳಿ, – ಲಾಕ್‍ಡೌನ್ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಸಂಚಾರ ಸ್ಥಗಿತಗೊಳಿಸಿದ್ದ ಸ್ಟಾರ್ ಏರ್ ವಿಮಾನ ಆಗಸ್ಟ್ 16ರಿಂದ ಬೆಂಗಳೂರು- ಹುಬ್ಬಳ್ಳಿ- ದೆಹಲಿ (ಹಿಂಡಾನ್) ನಡುವೆ ಸಂಚಾರ ಪುನರಾರಂಭಿಸಲಿದೆ.
ವಾರದಲ್ಲಿ ನಾಲ್ಕು ದಿನ ಸೋಮವಾರ, ಮಂಗಳವಾರ, ಶುಕ್ರವಾರ ಹಾಗೂ ಭಾನುವಾರ ವಿಮಾನ ಸಂಚರಿಸಲಿದೆ. ಈಗಾಗಲೇ ಆನ್‍ಲೈನ್ ಬುಕ್ಕಿಂಗ್ ಶುರು ಮಾಡಲಾಗಿದೆ. ಶೀಘ್ರದಲ್ಲೇ ಮುಂಬೈ, ಅಹಮದಾಬಾದ್ ಸಂಚಾರ ಆರಂಭಿಸುವ ಸಾಧ್ಯತೆ ಇದೆ.
ಲಾಕ್‍ಡೌನ್‍ಗೂ ಮುನ್ನ ನಿತ್ಯ 14 ವಿಮಾನ ಹಾರಾಡುತ್ತಿದ್ದವು. ಬಳಿಕ ಎಲ್ಲ ಸ್ಥಗಿತಗೊಂಡಿದ್ದವು. ಮೇ 25ರಿಂದ ಸ್ಟಾರ್ ಏರ್ ವಿಮಾನ ಸೇವೆ ಆರಂಭಿಸಿತಾದರೂ ಪ್ರಯಾಣಿಕರ ಕೊರತೆಯಿಂದ ಮತ್ತೆ ಸ್ಥಗಿತಗೊಳಿಸಿತು.
ಸದ್ಯ ಇಂಡಿಗೋ ಸಂಸ್ಥೆಯ ವಿಮಾನ ಬೆಂಗಳೂರು ಮತ್ತು ಕಣ್ಣೂರು ಮಧ್ಯೆ ಹಾರಾಟ ನಡೆಸುತ್ತಿದ್ದು, ಶೇ. 50ರಷ್ಟು ಪ್ರಯಾಣಿಕರ ಲಭ್ಯತೆ ಇದೆ. ನಿಲ್ದಾಣದಲ್ಲಿ ಪ್ರಯಾಣಿಕರ ಸುರಕ್ಷತೆ ಮತ್ತು ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ.ಸೆಪ್ಟೆಂಬರ್ ವೇಳೆಗೆ ವಿಮಾನ ಸೇವೆ ಮೊದಲಿನಂತಾಗುವ ಭರವಸೆ ಇದೆ ಎಂದು ವಿಮಾನ ನಿಲ್ದಾಣದ ನಿರ್ದೇಶಕ ಪ್ರಮೋದಕುಮಾರ ಠಾಕರೆ ಭರವಸೆ ನೀಡಿದ್ದಾರೆ.