Breaking News

ಕಿಲ್ಲರ್ ಕೊರೊನಾ ಸೋಂಕಿಗೆ ಸ್ಯಾಂಡಲ್ವುಡ್ ನಟ ‘ಅಜಯ್ ರಾವ್’ ಮೇಕಪ್ ಮ್ಯಾನ್ ಬಲಿ

Spread the love

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸಾವಿನ ಸರಣಿ ಮುಂದುವರೆದಿದ್ದು, ಸಾವಿರಾರು ಮಂದಿ ಹೆಮ್ಮಾರಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಇದೀಗ ಕಿಲ್ಲರ್ ಕೊರೊನಾ ಸೋಂಕಿಗೆ ಸ್ಯಾಂಡಲ್ವುಡ್ ನಟ ಅಜಯ್ ರಾವ್ ಮೇಕಪ್ ಮ್ಯಾನ್ ಜಯರಾಮ್ ಮೃತಪಟ್ಟಿದ್ದಾರೆ.

ಈ ಕುರಿತು ನಟ ಅಜಯ್ ರಾವ್ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಜಯರಾಮನ್ ನನ್ನ ಪರ್ಸನಲ್ ಮೇಕಪ್ ಮ್ಯಾನ್ ಆಗಿದ್ದರು, ಕಳೆದ 11 ವರ್ಷಗಳದಿಂದ ನನ್ನ ಜೊತೆ ಕೆಲಸ ಮಾಡುತ್ತಿದ್ದರು. ಅವರು ಇಂದು ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಬಹಳ ನೋವಾಗುತ್ತಿದೆ ಎಂದು ಬರೆದುಕೊಂಡ ಅಜಯ್ ಜಯರಾಮ್ ಜೊತೆಗಿನ ಫೋಟೋವನ್ನು ಹಂಚಿಕೊಂಡಿದ್ದಾರೆ.


Spread the love

About Laxminews 24x7

Check Also

ಕಾಂಗ್ರೆಸ್ ಭವನ ನಿರ್ಮಾಣಕ್ಕೆ ಕೊಟ್ಟಿರೋ ಸಿಎ ಸೈಟ್ ವಾಪಸ್ ಪಡೆಯಬೇಕು: ಬಿಜೆಪಿ ಆಗ್ರಹ

Spread the love ಬೆಂಗಳೂರು: ಕಾಂಗ್ರೆಸ್ ಭವನಕ್ಕೆ ಕಡಿಮೆ ದರದಲ್ಲಿ ಸಿಎ ನಿವೇಶನಗಳನ್ನು (CA Site) ಕೊಟ್ಟಿರೋ ವಿಚಾರ ವಿಧಾನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ