Breaking News

‘ಸಚಿವ ಸಿ.ಪಿ.ಯೋಗೇಶ್ವರ್’ ‘ಸಚಿವ ಸಂಪುಟ’ದಿಂದ ಔಟ್.?

Spread the love

ಬೆಂಗಳೂರು : ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಸದ್ದು ಜೋರಾಗಿದೆ. ಅದರಲ್ಲೂ ಸ್ವತಹ ಸಿಎಂ ಯಡಿಯೂರಪ್ಪ ವಿರುದ್ಧವೇ ಅವರ ಸಚಿವ ಸಂಪುಟದ ಸಚಿವ ಸಿ.ಪಿ.ಯೋಗೇಶ್ವರ್ ಸಮರ ಸಾರಿದ್ದಾರೆ ಎನ್ನಲಾಗಿತ್ತು. ಹೀಗಾಗಿ ಸಿಎಂ ಯಡಿಯೂರಪ್ಪ ಬದಲಾವಣೆಯನ್ನು ವಿರೋಧಿಸಿ, ಅವರ ಬೆಂಬಲಕ್ಕೆ 18 ಬಿಜೆಪಿ ಶಾಸಕರು ನಿಂತಿದ್ದು, ಯೋಗೇಶ್ವರ್ ಪಕ್ಷಕ್ಕೆ ಆಮದು ಸರಕು, ಸಚಿವ ಸ್ಥಾನದಿಂದ ಕಿತ್ತೊಗೆಯಿರಿ, ನಿಮ್ಮ ಜೊತೆ ನಾವಿದ್ದೇವೆ ಎಂದಿದ್ದಾರೆ ಎನ್ನಲಾಗಿದೆ. ಇದರಿಂದಾಗಿ ಸಚಿವ ಸಂಪುಟದಿಂದ ಸಚಿವ ಸಿ.ಪಿ.ಯೋಗೇಶ್ವರ್ ಔಟ್ ಆಗ್ತಾ ಎಂಬ ಕುತೂಹಲವೂ ಮೂಡಿಸಿದೆ.

 

ರಾಜ್ಯ ರಾಜಕೀಯದಲ್ಲಿ ಸಿಎಂ ಬದಲಾವಣೆಯ ಬಗ್ಗೆ ದಿನಕ್ಕೊಂದು ವಿದ್ಯಮಾನಗಳಿಗೆ ಕಾರಣವಾಗುತ್ತಿದೆ. ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ ಎಂಬುದಾಗಿ ಅನೇಕ ಸಚಿವರು, ಶಾಸಕರು ಸಿಎಂ ಪರವಾಗಿ ಬ್ಯಾಟ್ ಬೀಸಿದ್ದಾರೆ. ಅಲ್ಲದೇ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ, ನಾವ್ ಇದ್ದೇವೆ ಎಂಬುದಾಗಿಯೂ ಹೇಳಿದ್ದಾರೆ.

 

ನಿನ್ನೆ ಶಾಸಕ ಎಂ.ಪಿ.ರೇಣುಕಾಚಾರ್ಯ ನೇತೃತ್ವದಲ್ಲಿ 18 ಶಾಸಕರು ಸಿಎಂ ಯಡಿಯೂರಪ್ಪ ಅವರ ಜೊತೆಗೆ ಕೋವಿಡ್ ಪರಿಸ್ಥಿತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿದ್ದಾರೆ. ಈ ಮೂಲಕ ಸಿಎಂ ಯಡಿಯೂರಪ್ಪ ಅವರ ಬೆಂಬಲಕ್ಕೆ ತಮ್ಮ ಸಪೋರ್ಟ್ ವ್ಯಕ್ತ ಪಡಿಸಿದ್ದಾರೆ ಎನ್ನಲಾಗಿದೆ.

 

ಇದೇ ಸಂದರ್ಭದಲ್ಲಿ ಸಚಿವ ಸಿಪಿ ಯೋಗೇಶ್ವರ್ ಅವರ ವಿರುದ್ಧ ಸಿಎಂ ಎದುರಲ್ಲೇ ವಾಗ್ದಾಳಿ ನಡೆಸಿರುವಂತ ಶಾಸಕರು, ಯೋಗೇಶ್ವರ್ ಪಕ್ಷಕ್ಕೆ ಆಮದು ಸರಕು. ಅವರ ಮೇಲೆ ಪಕ್ಷ ಅವಲಂಬಿತವಾಗಿಲ್ಲ. ನಿಮ್ಮನ್ನು ಬದಲಾವಣೆ ಮಾಡಲು ಅವರು ಯಾರು.? ಏನೇ ಆದ್ರೂ ನಿಮ್ಮ ಪರವಾಗಿದ್ದೇವೆ ಎಂಬುದಾಗಿ ಶಾಸಕರು ಸಿಎಂಗೆ ತಿಳಿಸಿದ್ದಾರೆ ಎನ್ನಲಾಗಿದೆ.

 

ಹೀಗೆ ಸಚಿವ ಯೋಗೇಶ್ವರ್ ವಿರುದ್ಧ ಹರಿಹಾಯ್ದಿರುವಂತ ಶಾಸಕರನ್ನು, ಸಿಎಂ ಯಡಿಯೂರಪ್ಪ ಅವರು, ಸದ್ಯ ಆತುರ ಬೇಡ. ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿಯ ನಿಯಂತ್ರಣದ ಬಗ್ಗೆ ಮಾತ್ರ ಚರ್ಚಿಸೋಣ ಎಂಬುದಾಗಿ ಸಮಾಧಾನಿಸಿದ್ದಾರೆ ಎನ್ನಲಾಗಿದೆ. ಈ ಎಲ್ಲಾ ಕಾರಣದಿಂದಾಗಿ ಸಚಿವ ಸಂಪುಟದಿಂದ ಸಚಿವ ಸಿಪಿ ಯೋಗೇಶ್ವರ್ ಅವರನ್ನು ಕೈಬಿಡುವ ಬಗ್ಗೆ ಅನೇಕರು ಸಿಎಂ ಮೇಲೆ ಒತ್ತಡ ಹೇರಿದ್ದಾರೆ ಎಂದು ಕೂಡ ಹೇಳಲಾಗುತ್ತಿದೆ. ಹೀಗಾಗಿ ಸಚಿವ ಯೋಗೇಶ್ವರ್ ಬಗ್ಗೆ ಸಿಎಂ ಯಡಿಯೂರಪ್ಪ ಏನ್ ನಿರ್ಧಾರ ಕೈಗೊಳ್ಳಲಿದ್ದಾರೆ ಎನ್ನುವುದೇ ಈಗ ಯಕ್ಷ ಪ್ರಶ್ನೆಯಾಗಿದ್ದು, ಆ ಬಗ್ಗೆ ಕಾದು ನೋಡಬೇಕಿದೆ.


Spread the love

About Laxminews 24x7

Check Also

ನಮ್ಮ ಬೆಂಗಳೂರಿನಲ್ಲಿರುವ ಕ್ರಿಕೆಟ್ ಕ್ರೀಡಾಂಗಣದ ಹೆಸರಿರೋದು ಎಂ. ಚಿನ್ನಸ್ವಾಮಿ ಅವರ ಹೆಸರಲ್ಲಿ. ಅಷ್ಟೊಂದು ಘಟಾನುಘಟಿ ಕ್ರಿಕೆಟ್ ಪಟುಗಳಿದ್ದ ನಮ್ಮ ರಾಜ್ಯದಲ್ಲಿ ಇಂತಹ ದೊಡ್ಡ ಕ್ರಿಕೆಟ್ ಸ್ಥಾವರಕ್ಕೆ ಇವರ ಹೆಸರಿರಬೇಕಾದರೆ ಈ ಮಹನೀಯರ ಸಾಮರ್ಥ್ಯ ಎಂತದ್ದಿರಬಹುದು!

Spread the loveಎಂ. ಚಿನ್ನಸ್ವಾಮಿ ನಮ್ಮ ಬೆಂಗಳೂರಿನಲ್ಲಿರುವ ಕ್ರಿಕೆಟ್ ಕ್ರೀಡಾಂಗಣದ ಹೆಸರಿರೋದು ಎಂ. ಚಿನ್ನಸ್ವಾಮಿ ಅವರ ಹೆಸರಲ್ಲಿ. ಅಷ್ಟೊಂದು ಘಟಾನುಘಟಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ