Breaking News

ಮಗಳು ವಮಿಕಾ ಹೆಸರಿನ ಅರ್ಥ ಹೇಳಿದ ವಿರಾಟ್ ಕೊಹ್ಲಿ

Spread the love

ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ದಂಪತಿಗೆ ಹೆಣ್ಣು ಜನಿಸಿದ ಎಂದು ತಿಳಿದಾಗ ಮಗುವಿಗೆ ಏನೆಂದು ಹೆಸರಿಡಬಹುದು ಎನ್ನುವ ದೊಡ್ಡ ಚರ್ಚೆಯೇ ನಡೆದಿತ್ತು. ಕುತೂಹಲದ ನಡುವೆ ಮಗಳಿಗೆ ‘ವಮಿಕಾ’ ಎಂದು ನಾಮಕರಣ ಮಾಡಿದ್ದರು ತಾರಾ ದಂಪತಿ.

ವಮಿಕಾ ಎಂದು ಹೆಸರಿನ ಒಳ ಅರ್ಥವೇನು? ಯಾವ ಕಾರಣದಿಂದ ಮಗಳಿಗೆ ಅನುಷ್ಕಾ-ಕೊಹ್ಲಿ ದಂಪತಿ ಈ ಹೆಸರಿಟ್ಟರು ಎನ್ನುವುದು ಅಷ್ಟೇ ಚರ್ಚೆಯಾಗಿತ್ತು. ವಿರಾಟ್ ಹೆಸರಿನಿಂದ ‘ವ’, ಅನುಷ್ಕಾ ಹೆಸರಿನಿಂದ ‘ಕಾ’ ಒಳಗೊಂಡು ವಮಿಕಾ ಆಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸಮರ್ಥನೆಗಳು ಹುಟ್ಟಿಕೊಂಡಿದ್ದವು.

ಇದೀಗ, ವಿರಾಟ್ ಕೊಹ್ಲಿ ತಮ್ಮ ಮಗಳ ಹೆಸರಿನ ಅರ್ಥ ಏನೆಂದು ಬಹಿರಂಗಪಡಿಸಿದ್ದಾರೆ. ಶನಿವಾರ ಇನ್ಸ್ಟಾಗ್ರಾಂನಲ್ಲಿ ಅಭಿಮಾನಿಗಳ ಜೊತೆ ಪ್ರಶ್ನೆ-ಉತ್ತರದ ಸಂವಾದ ನಡೆಸಿದ ಕೊಹ್ಲಿಗೆ ”ನಿಮ್ಮ ಮಗಳ ಹೆಸರಿನ ಅರ್ಥವೇನು? ಹೇಗಿದೆ ಮಗು, ಫೋಟೋ, ವಿಡಿಯೋ ಏನಾದರೂ ನೋಡಬಹುದು?” ಎಂದು ಪ್ರಶ್ನೆಯೊಂದು ಎದುರಾಗಿದೆ.

 

ಇದಕ್ಕೆ ಉತ್ತರಿಸಿರುವ ಕೊಹ್ಲಿ ವಮಿಕಾ ಎಂದರೆ ದುರ್ಗ ಮಾತೆಯ ಇನ್ನೊಂದು ಹೆಸರು. ಸಾಮಾಜಿಕ ಜಾಲತಾಣ ಅಂದ್ರೆ ಏನು ಎಂದು ನಮ್ಮ ಮಗುವಿಗೆ ಅರ್ಥವಾಗುವವರೆಗೂ ನಾವು ಸೋಶಿಯಲ್ ಮೀಡಿಯಾಗೆ ಪರಿಚಯಿಸದಿರಲು ನಿರ್ಧರಿಸಿದ್ದೇವೆ” ಎಂದು ತಿಳಿಸಿದ್ದಾರೆ.

ಸದ್ಯ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಮುಂಬೈನಲ್ಲಿ ಕ್ವಾರಂಟೈನ್‌ನಲ್ಲಿದ್ದಾರೆ. ಜೂನ್ ತಿಂಗಳು ಇಂಗ್ಲೆಂಡ್‌ನಲ್ಲಿ ನಡೆಯಲಿರುವ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಷಿಪ್‌ ಫೈನಲ್‌ಗಾಗಿ ಕೊಹ್ಲಿ ಕುಟುಂಬ ಸಮೇತ ತೆರಳಲಿದ್ದಾರೆ.


Spread the love

About Laxminews 24x7

Check Also

ದಾವಣಗೆರೆ, ಬಾಗಲಕೋಟೆ ವಿಧಾನಸಭೆ ಬೈಎಲೆಕ್ಷನ್: ಉಸ್ತುವಾರಿ ಸಮಿತಿ ರಚನೆ; 31 ಜನರಿಗೆ ಜವಾಬ್ದಾರಿ

Spread the loveಬೆಂಗಳೂರು: ದಾವಣಗೆರೆ ಮತ್ತು ಬಾಗಲಕೋಟೆ ವಿಧಾನಸಭೆ ಉಪ ಚುನಾವಣೆ  ಹಿನ್ನೆಲೆ  ಎರಡೂ ಕ್ಷೇತ್ರಕ್ಕೆ ಕಾಂಗ್ರೆಸ್ ಉಸ್ತುವಾರಿ ವೀಕ್ಷಕರ ನೇಮಿಸಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ