Breaking News

ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಕೇಸ್; ಸ್ಥಳ ಮಹಜರು ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿಗಳಿಗೆ ಗುಂಡೇಟು

Spread the love

ಬೆಂಗಳೂರು: ಯುವತಿ ಮೇಲೆ ಗ್ಯಾಂಗ್‌ರೇಪ್ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದಾರೆ. ರಿದಾಯ್ ಬಾಬು, ಸಾಗರ್‌ ಕಾಲಿಗೆ ಗುಂಡುಹಾರಿಸಿ ವಶಕ್ಕೆ ಪಡೆದಿದ್ದಾರೆ. ಇಂದು ಬೆಳಗ್ಗೆ ಸ್ಥಳ ಮಹಜರಿಗೆ ಕೆ.ಚನ್ನಸಂದ್ರಕ್ಕೆ ಕರೆದೊಯ್ದಿದ್ದಾಗ ಪೊಲೀಸರ ಮೇಲೆ ದಾಳಿ ನಡೆಸಿ ಪರಾರಿಯಾಗಲು ಆರೋಪಿಗಳು ಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿ ಶಾರಣಾಗುವಂತೆ ಕೇಳಿಕೊಂಡಿದ್ದಾರೆ. ಆದರೆ ಮಾತು ಕೇಳದೆ ಹಲ್ಲೆಗೆ ಮುಂದಾಗಿದ್ದು ಈ ವೇಳೆ ಆರೋಪಿಗಳಾದ ರಿದಾಯ್ ಬಾಬು ಬಲಗಾಲಿಗೆ, ಸಾಗರ್ ಎಡಗಾಲಿಗೆ ಪೊಲೀಸರು ಗುಂಡು ಹಾರಿಸಿ ಅರೆಸ್ಟ್ ಮಾಡಿದ್ದಾರೆ.

ಘಟನೆ ಹಿನ್ನಲೆ
ರಾಜಧಾನಿ ಬೆಂಗಳೂರಿನಲ್ಲಿ ಬಾಂಗ್ಲಾ ದೇಶದ ಯುವತಿ ಮೇಲೆ ಗ್ಯಾಂಗ್ ರೇಪ್ ನಡೆದಿತ್ತು. ಈ ಕೇಸ್ನಲ್ಲಿ ಶಾಮೀಲಾದವರೆಲ್ಲ ಬಾಂಗ್ಲಾ ದೇಶದ ಮೂಲದವರು. ಅಕ್ರಮವಾಗಿ ಭಾರತಕ್ಕೆ ಬಂದು ಬೆಂಗಳೂರಿನ ರಾಮಮೂರ್ತಿ ನಗರದ ಎನ್‌ಆರ್‌ಐ ಕಾಲೋನಿಯಲ್ಲಿ ವಾಸವಾಗಿದ್ರು. ಇಷ್ಟು ದಿನ ಸೈಲೆಂಟಾಗಿ ವೇಶ್ಯಾವಾಟಿಕೆ ಮಾಡಿಕೊಂಡು ದುಡ್ ಮಾಡ್ತಿದ್ರು. ಎಲ್ರು ಖುಷಿಯಾಗೆ ಲೈಫ್ ಎಂಜಾಯ್ ಮಾಡ್ತಿದ್ರು. ಆದ್ರೆ, ಸ್ನೇಹಿತರ ಮಧ್ಯೆ ಅದು ಏನ್ ದ್ವೇಷ ಇತ್ತೋ ಗೊತ್ತಿಲ್ಲ. ಕಳೆದ 10 ದಿನಗಳ ಹಿಂದೆ ಬಾಂಗ್ಲಾ ಮೂಲದ ಯುವತಿ ಮೇಲೆ ಯುವಕರು ಎರಗಿದ್ದಾರೆ. ಅದು ಕೂಡ ಇಬ್ಬರು ಯುವಕರು ಯುವತಿಯ ಕೈ, ಬಾಯಿ ಗಟ್ಟಿಯಾಗಿ ಮುಚ್ಚಿಕೊಂಡಿದ್ರೆ, ಉಳಿದವರು ಅಟ್ಟಹಾಸ ಮೆರೆದಿದ್ದಾರೆ. ಎಲ್ಲವನ್ನೂ ಮೊಬೈಲ್ನಲ್ಲಿ ದೃಶ್ಯ ಸೆರೆ ಹಿಡಿದು, ವೈರಲ್ ಮಾಡಿದ್ದಾರೆ.

ಬಾಂಗ್ಲಾ ಸೇರಿ ಭಾರತದ ಈಶಾನ್ಯ ರಾಜ್ಯಗಳಲ್ಲಿ ದೃಶ್ಯ ವೈರಲ್
ಇನ್ನು, ಮನೆಯೊಳಗೆ ನಡೆದಿದ್ದ ಈ ಪೈಶಾಚಿಕ ಕೃತ್ಯದ ದೃಶ್ಯವನ್ನ ಆರೋಪಿಗಳೇ ವೈರಲ್ ಮಾಡಿದ್ರೋ ಅಥವಾ ಬೇರೆ ಯಾರದ್ರೂ ವೈರಲ್ ಮಾಡಿದ್ರೋ ಗೊತ್ತಿಲ್ಲ. ಆದ್ರೆ, ಬಾಂಗ್ಲಾ ಸೇರಿದಂತೆ ಭಾರತದ ಈಶಾನ್ಯ ರಾಜ್ಯಗಳಲ್ಲಿ ದೃಶ್ಯ ಹರಿದಾಡುತ್ತಿತ್ತು. ಈ ಬಗ್ಗೆ ತಿಳಿದ ಅಸ್ಸಾಂ ರಾಜ್ಯದ ಪೊಲೀಸರು ವಿಡಿಯೋ ಮೂಲ ಕೆದಕಲು ಮುಂದಾಗಿದ್ರು. ಆಗ ಕೃತ್ಯದಲ್ಲಿ ಬಾಂಗ್ಲಾ ದೇಶದ ಪ್ರಜೆಗಳು ಭಾಗಿಯಾರುವುದು ಬೆಳಕಿಗೆ ಬಂದಿತ್ತು. ಈ ಬಗ್ಗೆ ಬಾಂಗ್ಲಾ ದೇಶದ ಪೊಲೀಸರಿಗೂ ಮಾಹಿತಿ ರವಾನಿಸಿದ್ದ ಅಸ್ಸಾಂ ಪೊಲೀಸರು ಕಾಮುಕರ ಸುಳಿವು ನೀಡಿದವರಿಗೆ ಬಹುಮಾನ ನೀಡುವುದಾಗಿ ಪ್ರಕಟಿಸಿದ್ದರು. ಬಳಿಕ ಸಂತ್ರಸ್ಥೆ ಕುಟುಂಬದ ಸದಸ್ಯರನ್ನ ಪತ್ತೆ ಮಾಡಿದ್ದ ಬಾಂಗ್ಲಾ ಪೊಲೀಸರು ಕೃತ್ಯವೆಸಗಿದ ಸ್ಥಳ ಆಧರಿಸಿ ಆರೋಪಿಗಳ ಕುರಿತು ಬೆಂಗಳೂರು ಪೊಲೀಸರಿಗೆ ಮಾಹಿತಿ ನೀಡಿದ್ರು.

ಸ್ನೇಹಿತೆ ಮೇಲೆಯೇ ಎರಗಿದ ಕಾಮುಕರು ಅರೆಸ್ಟ್
ಯಾವಾಗ ವಿಷ್ಯ ಗೊತ್ತಾಯ್ತೋ, ರಾಮಮೂರ್ತಿ ನಗರ ಠಾಣಾ ಪೊಲೀಸರು, ಆವಲಹಳ್ಳಿಯಲ್ಲಿ ಅಡಗಿ ಕೂತಿದ್ದ ಓರ್ವ ಯುವತಿ ಸೇರಿ ಐವರು‌ ಕೀಚಕರನ್ನ ಬಂಧಿಸಿದ್ದಾರೆ. ಇಬ್ಬರು ಪರಾರಿ ಆಗಿದ್ದು, ಅವರಿಗೂ ಬಲೆ ಬೀಸಿದ್ದಾರೆ.

ಸದ್ಯ, ಸಂತ್ರಸ್ತೆಯ ಸುಳಿವು ಯಾರಿಗೂ ಸಿಕ್ಕಿಲ್ಲ.. ಪೊಲೀಸರು ಸುಮೊಟೋ ಕೇಸ್ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಅದೇನೇ ಇರ್ಲಿ, ಕಳ್ ದಾರಿಯಲ್ಲಿ ಭಾರತಕ್ಕೆ ಬಂದಿದ್ದಲ್ಲದೆ, ಈ ಪಿಶಾಚಿಗಳು ದೇಶವೇ ಬೆಚ್ಚಿ ಬೀಳುವಂತಹ, ತಲೆತಗ್ಗಿಸುವಂತಹ ನೀಚಾತಿ ನೀಚ ಕೃತ್ಯ ಎಸಗಿದ್ದಾರೆ.


Spread the love

About Laxminews 24x7

Check Also

ಬೆಂಗಳೂರಲ್ಲಿ ಮುಂಬೈ ಮಾದರಿ ಕೊಳಗೇರಿ ಪ್ರದೇಶಗಳ ಪುನಶ್ಚೇತನಕ್ಕೆ ಸಮಿತಿ ರಚಿಸಿ: ಡಿಸಿಎಂ ಸೂಚನೆ

Spread the love ಬೆಂಗಳೂರು: ಮುಂಬೈ ಮಾದರಿಯಲ್ಲಿ ಕೊಳಗೇರಿ ಪ್ರದೇಶಗಳ ಪುನಶ್ಚೇತನಕ್ಕೆ ಸಮಿತಿ ರಚಿಸಲು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಜಿಬಿಎ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ