ಬೆಂಗಳೂರು: ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರ ಒಂದು ವರ್ಷದ ಅವಧಿ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಸರ್ಕಾರ ಕಮಲ್ ಪಂಥ್ ಅವರನ್ನು ನೂತನ ಆಯುಕ್ತರನ್ನಾಗಿ ನೇಮಿಸಿ ಆದೇಶ ನೀಡಿದೆ.
ಭಾಸ್ಕರ್ ರಾವ್ ಅವರನ್ನು ಆಂತರಿಕ ಭದ್ರತಾ ವಿಭಾಗದ ಎಡಿಜಿಪಿ ಆಗಿ ವಗಾವಣೆ ಮಾಡಲಾಗಿದೆ. ಉಳಿದಂತೆ ಕಮಲ್ ಪಂಥ್ ಜಾಗಕ್ಕೆ ದಯಾನಂದ ಅವರನ್ನು ಗುಪ್ತಚರ ಇಲಾಖೆಯ ಎಡಿಜಿಪಿ ಆಗಿ ನೇಮಕ ಮಾಡಲಾಗಿದೆ.
ಆ.1ಕ್ಕೆ ಭಾಸ್ಕರ್ ರಾವ್ ಅವರು ಆಯುಕ್ತರಾಗಿ ಒಂದು ವರ್ಷ ಪೂರ್ಣಗೊಳ್ಳಲಿದ್ದಾರೆ. ಭಾಸ್ಕರ್ ರಾವ್ ಅವರು ಅಧಿಕಾರ ವಹಿಸಿಕೊಂಡ ಬಳಿಕ ಹಲವು ಸವಾಲುಗಳನ್ನು ಎದುರಿಸಿದ್ದು, ಕಾಶ್ಮೀರ 370 ಕಾಯ್ದೆ ರದ್ದು, ರಾಮ ಮಂದಿರ ತೀರ್ಪು, ಸಿಎಎ ಮತ್ತು ಎನ್‌ಆರ್‌ಸಿಗೆ ಸಂಬಂಧ ಹಲವು ಸಂದರ್ಭಗಳನ್ನು ಸಮರ್ಥವಾಗಿ ಎದುರಿಸಿ ಕಾರ್ಯನಿರ್ವಹಿಸಿದ್ದರು.
ಅಂದಹಾಗೇ ನೂತನವಾಗಿ ಆಯ್ತುಕರಾಗಿರುವ ಕಮಲ್ ಪಂಥ್ ಅವರು ಭಾಸ್ಕರ್ ರಾವ್ ಅವರ ಆತ್ಮೀಯರಾಗಿದ್ದು, ಒಂದೇ ಬ್ಯಾಚ್ ಅಧಿಕಾರಿಗಳಾಗಿದ್ದಾರೆ. ಈ ಹಿಂದೆಯೇ ಕಮಲ್ ಪಂಥ್ ಅವರ ಹೆಸರು ಆಯುಕ್ತರ ಆಯ್ಕೆಯ ರೇಸ್‍ಬಲ್ಲಿತ್ತು. ಆದರೆ ಸಿಎಂ ಬಿಎಸ್ ಯಡಿಯೂರಪ್ಪ ಅವರು ಭಾಸ್ಕರ್ ರಾವ್ ಅವರನ್ನು ಆಯುಕ್ತರನ್ನಾಗಿ ನೇಮಿಸಿದ್ದರು. ಈ ಬಾರಿ ಕಮಲ್ ಪಂಥ್ ಅವರನ್ನು ಆಯುಕ್ತರನ್ನಾಗಿ ನೇಮಿಸಲಾಗಿದೆ.