Breaking News

ಸಚಿವ ಸಿಪಿ ಯೋಗೇಶ್ವರ್ ಅವರನ್ನು ಅರೆಸ್ ಮಾಡಿ – ಶಾಸಕ ಎಂ.ಪಿ.ರೇಣುಕಾಚಾರ್ಯ ಗುಡುಗು

Spread the love

ಹೊನ್ನಾಳ್ಳಿ : ವಿಜಯೇಂದ್ರ, ಸಿಎಂ ಯಡಿಯೂರಪ್ಪ ಅವರನ್ನು ಹಿಂಭಾಗಿಲಿನಿಂದ ಕಾಲು ಹಿಡಿದು, ಗೋಗರೆದು, ಕಣ್ಣೀರಿಟ್ಟು ಸಚಿವರಾದಂತವರು ಸಿಪಿ ಯೋಗೀಶ್ವರ್. ಮೆಗಾ ಸಿಟಿ ಹಗರಣದಲ್ಲಿ ಏನೆಗ್ಗಾ ಹಗರಣ ಮಾಡಿದ್ದಾರೆ ಎಂಬುದು ನನಗೆ ಗೊತ್ತು. ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರನ್ನು ಆಗ್ರಹಿಸುತ್ತೇನೆ. ಅವರನ್ನು ಮೊದಲು ಬಂಧಿಸಿ ಎಂಬುದಾಗಿ ಸಿಎಂ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಆಗ್ರಹಿಸಿದ್ದಾರೆ.

ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಅವನ್ಯಾರ್ ರೀ.. ನನ್ನ ಬಗ್ಗೆ ಮಾತನಾಡೋಕೆ.. ಅವನೇನ್ ಬಿಜೆಪಿ ಲೀಡರ್ ಆ..? ತಾಕತ್ತಿದ್ದರೇ ಬಂದ್ರೆ.. ಬರಲಿ.. ನನ್ನ ವಿರುದ್ಧ ಮಾತನಾಡಲಿ. ಹಿಂಭಾಗಿಲಿನಿಂದ ಬಂದು ಸಚಿವರಾಗಿರೋರು. ಕೊರೋನಾ ಸೋಂಕಿನ ಸಂದರ್ಭದಲ್ಲಿ ಜನರ ಸೇವೆ ಮಾಡೋದು ಬಿಡ್ಡು ರಾಜಕೀಯ ಮಾಡ್ತಾ ಇದ್ದಾರೆ ಎಂದರು.

ಖಡಾ ಕಂಡಿತವಾಗಿ ನಾನು ಸಿಪಿ ಯೋಗೀಶ್ವರ್ ಅವರನ್ನು ಬಿಜೆಪಿ ಸಚಿವ ಎಂದು ಒಪ್ಪಿಕೊಳ್ಳೋದಿಲ್ಲ. ಎಲ್ಲಾ ಪಕ್ಷ ಸುತ್ತಾಡಿ ಬಂದಂತವನು ಅವನು. ಮೆಗಾ ಸಿಟಿ ಹಗರಣದ 420 ಕಳ್ಳ ಸಿಪಿ ಯೋಗೀಶ್ವರ್. ನಾನು ನಿಷ್ಠಾವಂತ ಕಾರ್ಯಕರ್ತ. ಎರಡು ಬಾರಿ ಜೈಲಿಗೆ ಹೋಗಿ ಬಂದಿದ್ದೇನೆ. ಈಗ ಕೊರೋನಾ ಕಾಲದಲ್ಲಿ ಸೋಂಕಿತರಾಗುತ್ತಿರುವಂತ ಜನರ ಸೇವೆ ಮಾಡುತ್ತಿದ್ದೇನೆ. ಹೀಗೆ ಅವನ ಹಾಗೇ ಬಿಟ್ಟಿಯಾಗಿ ಮಂತ್ರಿಯಾಗಿಲ್ಲ ಎಂಬುದಾಗಿಯೇ ಸಚಿವ ಸಿಪಿ ಯೋಗೀಶ್ವರ್ ವಿರುದ್ಧ ಶಾಸಕ ಎಂ.ಪಿ ರೇಣುಕಾಚಾರ್ಯ ಕಿಡಿಕಾರಿದ್ದಾರೆ.


Spread the love

About Laxminews 24x7

Check Also

ಬೆಂಗಳೂರಲ್ಲಿ ಮುಂಬೈ ಮಾದರಿ ಕೊಳಗೇರಿ ಪ್ರದೇಶಗಳ ಪುನಶ್ಚೇತನಕ್ಕೆ ಸಮಿತಿ ರಚಿಸಿ: ಡಿಸಿಎಂ ಸೂಚನೆ

Spread the love ಬೆಂಗಳೂರು: ಮುಂಬೈ ಮಾದರಿಯಲ್ಲಿ ಕೊಳಗೇರಿ ಪ್ರದೇಶಗಳ ಪುನಶ್ಚೇತನಕ್ಕೆ ಸಮಿತಿ ರಚಿಸಲು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಜಿಬಿಎ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ