Breaking News

ಜನ್ಮದಿನಕ್ಕೆ ಬಟ್ಟೆ ಕೊಡಿಸಲಿಲ್ಲ ಅಂತ ನವವಿವಾಹಿತೆ ಆತ್ಮಹತ್ಯೆ: ಕೊಲೆ ಕೇಸು ದಾಖಲು!

Spread the love

ಹುಟ್ಟುಹಬ್ಬಕ್ಕೆ ಬಟ್ಟೆ ಕೊಡಿಸದೇ ಗಂಡ ರೇಗಾಡಿದ್ದರಿಂದ ನೊಂದ ನವ ವಿವಾಹಿತೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲೂಕು ಗ್ರಾಮದಲ್ಲಿ ನಡೆದಿದೆ.

ಗೌರಿಬಿದನೂರು ತಾಲ್ಲೂಕಿನ ಬೇವಿನಹಳ್ಳಿ ಗ್ರಾಮದ ರಾಜು ಅವರ ಪುತ್ರಿ ಮಮತಾ (17) ಆತ್ಮಹತ್ಯೆ ಮಾಡಿಕೊಂಡ ಯುವತಿ.

ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ಪಟ್ಟಣದ ಯುವಕ ಮಹದೇವ ಅಲಿಯಾಸ್ ಮಣಿಕಂಠ ಮೂರು ತಿಂಗಳ ಅಪ್ರಾಪ್ತೆಯಾಗಿದ್ದ ಮಮತಾಳನ್ನು ಅಪಹರಿಸಿ ಮದುವೆಯಾಗಿದ್ದ.

ಜನ್ಮದಿನವಾದ ಇಂದು ಹೊಸಬಟ್ಟೆ ಕೊಡಿಸುವಂತೆ ಗಂಡ ಮಣಿಕಂಠನಿಗೆ ಕೇಳಿದ್ದಾಳೆ. ಆದರೆ ನನ್ನತ್ರ ದುಡ್ಡಿಲ್ಲ ಅಂತ ಆಕೆ ಪತಿ ರೇಗಾಡಿದ್ದಾನೆ. ಇದಿರಿಂದ ಖಿನ್ನತೆಗೊಳಗಾದ ಮಮತಾ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

2020 ಜನವರಿಯಲ್ಲಿ ಗೌರಿಬಿದನೂರು ತಾಲ್ಲೂಕಿನ ಆಲಿಪುರದ ಸರ್ಕಾರಿ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿನಿಯಾಗಿದದ ಮಮತಾಳನ್ನು ಮಹದೇವ ಅಲಿಯಾಸ್ ಮಣಿಕಂಠ ಪ್ರೀತಿ ಪ್ರೇಮದ ಹೆಸರಲ್ಲಿ ಅಪಪರಿಸಿ ಮದುವೆ ಆಗಿದ್ದಾನೆ ಎಂದು ಮಮತಾ ಪೋಷಕರು ಮಂಚೇನಹಳ್ಳಿ ಪೊಲೀಸರಿಗೆ ದೂರು ನೀಡಿದ್ದರು.

ಮಮತಾಳನ್ನ ಸಾಂತ್ವಾನ ಕೇಂದ್ರದಲ್ಲಿ ಬಿಟ್ಟು ಬಳಿಕ ಪೋಷಕರು ಮನೆಗೆ ಕರೆದುಕೊಂಡು ಬಂದಿದ್ದರು. ಆದರೆ ಮಣಿಕಂಠ ಜೊತೆ ಮಮತಾ 3 ತಿಂಗಳ ಹಿಂದೆ ಮದುವೆ ಆಗಿದ್ದು, ಈ ಬಗ್ಗೆ ಬಾಯಿಬಿಟ್ಟರೆ ಮಮತಾಳನ್ನು ಸಾಯಿಸುವುದಾಗಿ ಪೋಷಕರಿಗೆ ಬೆದರಿಸಿದ್ದನಂತೆ.

ಮಗಳ ಸಾವಿನಿಂದ ಆಘಾತಗೊಂಡಿರುವ ಮಮತಾಳ ಪೋಷಕರು, ಗಂಡ ಮತ್ತು ಅವರ ಕುಟುಂಬದವರು ಕೊಲೆ ಮಾಡಿದ್ದಾರೆಂದು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಸಂಬಂಧ ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಮತ ಗಂಡ ಮಣಿಕಂಠ, ಅತ್ತೆ ಮಾವನನ್ನ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ


Spread the love

About Laxminews 24x7

Check Also

ರಾಜಕಾರಣಿಗಳು, ಸಹಚರರ ಜೊತೆ ಮಲಗು ಎಂದು ಪೀಡಿಸುವ ಗಂಡ! 6 ಬಾರಿ ತಲಾಖ್, ಅಬಾರ್ಷನ್

Spread the loveಬೆಂಗಳೂರು, ಜುಲೈ 1: ಗಂಡನಾದವನೇ ಹೆಂಡತಿಯನ್ನು ಬೇರೆಯವರ ಜತೆ ಮಲಗುವಂತೆ ಪೀಡಿಸಿದರೆ, ಅದಕ್ಕಾಗಿ ಹಿಂಸಿಸಿದರೆ ಮಹಿಳೆಯ ಸ್ಥಿತಿ ಹೇಗಾಗಬಹುದು! …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ