Breaking News

ಅರ್ಧಕ್ಕೆ ನಿಂತಿದ್ದ ಐಪಿಎಲ್ 2021 ಆವೃತ್ತಿ ಮುಂದುವರಿಕೆ: ಬಿಸಿಸಿಐ

Spread the love

ನವದೆಹಲಿ : ಐಪಿಎಲ್ ಪ್ರಿಯರಿಗೆ ಇಲ್ಲಿದೆ ಒಂದು ಸಂತೋಷದ ಸುದ್ದಿ. ಕೊರೋನಾ ಕಾರಣದಿಂದ ಅರ್ಧಕ್ಕೆ ನಿಂತಿದ್ದ ಐಪಿಎಲ್ 2021 ಆವೃತ್ತಿಯನ್ನು ದುಬೈನಲ್ಲಿ ಮುಂದುವರೆಸಲು ಬಿಸಿಸಿಐ ನಿರ್ಧರಿಸಿದೆ .

2021 ರ ಸೆಪ್ಟೆಂಬರ್ 18 ಅಥವಾ 19 ರಿಂದ ಐಪಿಎಲ್ 14 ಪುನಾರಂಭಗೊಳ್ಳಲಿದ್ದು, ಮೂರು ವಾರಗಳ ಕಾಲ ನಡೆಯಲಿದೆ . ಆವೃತ್ತಿಯ ದ್ವಿತೀಯಾರ್ಧದಲ್ಲಿ 10 ಮುಖಾಮುಖಿ ಪಂದ್ಯಗಳನ್ನು ಆಯೋಜಿಸಲು ಚಿಂತಿಸಲಾಗಿದೆ ಎಂದು ಬಿಸಿಸಿಐ ಉನ್ನತ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ .

ಈ ಸರಣಿಯ ಅಂತಿಮ ಪಂದ್ಯವು ಅಕ್ಟೋಬರ್ 9 ಅಥವಾ 10 ರಂದು ನಡೆಯಬಹುದು ಎಂದು ಹೇಳಲಾಗಿದೆ . ಹೀಗಾಗಿ ಮೇ 4 ರಂದು ಅರ್ಧಕ್ಕೆ ನಿಂತಿದ್ದ ಪಂದ್ಯ ಈಗ ಮತ್ತೆ ಆರಂಭಗೊಳ್ಳುವುದು ಖಚಿತವಾಗಿದೆ .


Spread the love

About Laxminews 24x7

Check Also

ಮಹಿಳೆಯರು ಅಭಿವೃದ್ಧಿಯಾದರೆ ಮನೆ, ದೇಶ ಅಭಿವೃದ್ಧಿಯಾದಂತೆ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌

Spread the love ಮಹಿಳಾ ವಿಚಾರ ಗೋಷ್ಠಿ ಉದ್ಘಾಟಿಸಿದ ಸಚಿವರು  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ