ಬೆಳಗಾವಿ: ನಗರದ ಬಿಮ್ಸ್ ಆಸ್ಪತ್ರೆ ಅವ್ಯವಸ್ಥೆಗಳ ಆಗಾರವಾಗಿದ್ದು, ಕಳೆದ 24 ಗಂಟೆಗಳಿಂದ ನೀರು ಬರದೇ ರೋಗಿಗಳು ಪರದಾಡುತ್ತಿದ್ದಾರೆ. ರೋಗಿಗಳು ಶೌಚಕ್ಕೂ ಹೋಗಲಾರದೇ ನರಕ ಯಾತನೆ ಅನುಭವಿಸುಂತಾಗಿದೆ.
ಸರಿ ಸುಮಾರು 40 ಕ್ಕೂ ಹೆಚ್ಚು ಗರ್ಭಿಣಿಯರು ಕೊರೊನಾ ಸೋಂಕಿನಿಂದ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆ ಸೇರಿ ಎರಡು ವಾರಗಳು ಕಳೆದುಹೊಗಿವೆ. ಆದರೆ ಈಗ ಸಿಬ್ಬಂದಿ ಇವರನ್ನು ಡಿಸ್ಚಾರ್ಜ ಮಾಡಲು ಮುಂದಾಗಿದ್ದಾತೆ. ನಿಮ್ಮ ಹತ್ತು ದಿನದ ಚಿಕಿತ್ಸೆ ಅವಧಿ ಮುಗಿದಿದ್ದು, ನಿಮ್ಮನ್ನು ಡಿಸ್ಚಾರ್ಜ್ ಮಾಡುತ್ತೇವೆ ಎಂದು ಹೇಳುತ್ತಾರಂತೆ. ನಾವು ಹೊರಗೆ ಹೋದರೆ ಖಾಸಗಿ ಆಸ್ಪತ್ರೆಯವರು ಕೊರೊನಾ ಟೆಸ್ಟ್ ನೆಗಟಿವ್ ರಿಪೋರ್ಟ ಕೇಳುತ್ತಾರೆ. ದಯವಿಟ್ಟು ರಿಪೋರ್ಟ ನೀಡಿ ಎಂದು ಕೇಳಿದ್ರೂ ನೀಡುತ್ತಿಲ್ಲ ಎಂದು ರೋಗಿಗಳು ಹೇಳುತ್ತಾರೆ.
ಒಂದಾದ ಮೇಲೊಂದು ಎಡವಟ್ಟು ಮಾಡುಕೊಳ್ಳುತ್ತಿರುವ ಬೆಳಗಾವಿ ಬಿಮ್ಸ್ ಮತ್ತೆ ಸುದ್ದಿಯಲ್ಲಿದೆ. ಅಧಿಕಾರಿ ಹಾಗೂ ಸಿಬ್ಬಂದಿ ಸಂಯೊಜನೆ ಹಾಗೂ ಸಮನ್ವಯ ಕೊರತೆಯಿಂದಾಗಿ ಆಸ್ಪತ್ರೆಯಲ್ಲಿ ಸಮಸ್ಯೆಗಳು ಉಂಟಾಗುತ್ತಿವೆ. ಹಲವಾರು ವೈದ್ಯರು, ವಿವಿಧ ವಿಭಾಗಗಳ ಮುಖ್ಯಸ್ಥರು ಕೆಲಸ ನಿರ್ವಹಿಸುತ್ತಿಲ್ಲ. ಆಡಳಿತ ಯಂತ್ರ ಕುಸಿದು ರೋಗಿಗಳು ಕಣ್ಣೀರಿಡುವಂತಾಗಿದೆ.