ಕೊಪ್ಪಳ: ಕೊರೊನಾ ಸೋಂಕಿತ ವ್ಯಕ್ತಿಯನ್ನ ನಡೆದುಕೊಂಡು ಮನೆಗೆ ಹೋಗಿ ಎಂದು ಆರೋಗ್ಯ ಇಲಾಖೆ ಸಿಬ್ಬಂದಿ ಹೇಳುವ ಮೂಲಕ ಅಮಾನವೀಯವಾಗಿ ವರ್ತಿಸಿರುವ ಘಟನೆ ಕೊಪ್ಪಳದಲ್ಲಿ ಬೆಳಕಿಗೆ ಬಂದಿದೆ.
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಮುದೇನೂರ ಗ್ರಾಮದ ನಿವಾಸಿಗೆ ಸಿಬ್ಬಂದಿ ಕೊರೊನಾ ಇರುವುದನ್ನು ದೃಢಪಡಿಸಿದ್ದಾರೆ. ಅಲ್ಲದೆ ಮನೆಗೆ ನಡೆದುಕೊಂಡು ಹೋಗಿ ಎಂದು ಹೇಳಿ ಕಳಿಸಿದ್ದಾರೆ ಎಂದು ಸೋಂಕಿತ ಆರೋಪಿಸುತ್ತಿದ್ದಾರೆ.
ಮುದೇನೂರ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಈ ರೀತಿ ಅಮಾನವಿಯ ರೀತಿಯಲ್ಲಿ ನಡೆದುಕೊಂಡಿದ್ದಾರೆ ಎಂದು ಹೇಳಿಕೊಂಡ ಸೋಂಕಿತ, ಅವರ ಮಾತಿನಂತೆ ನಾಲ್ಕು ಕಿಲೋಮೀಟರ್ ನಡೆದುಕೊಂಡೇ ಹೊರಟಿದ್ದಾನೆ. ಊಟ-ತಿಂಡಿ ಇಲ್ಲದೆ ಆಯಾಸಪಟ್ಟು ಸೋಂಕಿತ ರಸ್ತೇ ಪಕ್ಕದ ಹಳ್ಳದಲ್ಲಿದ್ದ ನೀರು ಕುಡಿದು ನಡೆದುಕೊಂಡೇ ಮನೆಗೆ ಹೋದೆ. ಸ್ಥಳೀಯರು ಕುಡಿಯಲು ನೀರು ಸಹಾಯ ಮಾಡಿದ್ದಾರೆ ಎಂದು ಸೋಂಕಿತ ಹೇಳಿದ್ದಾರೆ.