Breaking News

ರಘುನಾಥ್ ಮೊಹಪಾತ್ರ ಸಾವಿನ ಬೆನ್ನಲ್ಲೇ ಮಕ್ಕಳೂ ಕೊರೊನಾಗೆ ಬಲಿ

Spread the love

ಭುವನೇಶ್ವರ: ರಾಜ್ಯಸಭೆಯ ಮಾಜಿ ಸದಸ್ಯ, ಖ್ಯಾತ ಶಿಲ್ಪಿ ರಘುನಾಥ್ ಮೊಹಪಾತ್ರ ಕೋವಿಡ್ ಗೆ ಬಲಿಯಾದ ಬೆನ್ನಲ್ಲೇ ಅವರ ಇಬ್ಬರು ಮಕ್ಕಳು ಕೂಡ ಕೊರೊನಾ ಸೋಂಕಿಗೆ ಸಾವನ್ನಪ್ಪಿದ್ದಾರೆ.

ಮೇ 9ರಂದು ರಘುನಾಥ್ ಮೊಹಪಾತ್ರ ಭುವನೇಶ್ವರ ಏಮ್ಸ್ ಆಸ್ಪತ್ರೆಯಲ್ಲಿ ಕೋವಿಡ್ ನಿಂದ ಮೃತಪಟ್ಟಿದ್ದರು. ಇದೇ ಆಸ್ಪತ್ರೆಯಲ್ಲಿ ಕೋವಿಡ್ ಗೆ ಚಿಕಿತ್ಸೆ ಪಡೆಯುತ್ತಿದ್ದ ಅವರ ಕಿರಿಯ ಮಗ ಒಡಿಶಾ ಕ್ರಿಕೆಟ್ ತಂಡದ ನಾಯಕ ಪ್ರಶಾಂತ್ ಮೊಹಪಾತ್ರ ಕೂಡ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದರು. ಇದೇ ವೇಳೆ ರಘುನಾಥ್ ಅವರ ಹಿರಿಯ ಮಗ ಜಶೋಬಂತ ಮೊಹಾಪಾತ್ರ ಅವರಿಗೂ ಸೋಂಕು ತಗುಲಿದ್ದರಿಂದ ಒಡಿಶಾ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಅವರೂ ಕೂಡ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.


Spread the love

About Laxminews 24x7

Check Also

ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಹಾರಾಟ ಕಡಿಮೆ: ರಾಜ್ಯಸಭೆಯಲ್ಲಿ ಸಂಸದ ಈರಣ್ಣ ಕಡಾಡಿ ಆಕ್ರೋಶ

Spread the loveನವದೆಹಲಿ: ಕರ್ನಾಟಕದ ಎರಡನೇ ರಾಜಧಾನಿ ಎಂದೇ ಖ್ಯಾತವಾದ ಬೆಳಗಾವಿ  ನಗರವು ಶಿಕ್ಷಣ, ಉದ್ಯಮ ಹಾಗೂ ರಕ್ಷಣಾ ಕ್ಷೇತ್ರಗಳಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ