ವದೆಹಲಿ: ಚೀನಾದ 59 ಅಪ್ಲಿಕೇಶನ್‌ಗಳು ನಿಷೇಧಿಸಿ ಭಾರತ ಸರ್ಕಾರ ಆದೇಶ ಹೊರಡಿಸಿದ ಬಳಿಕ ಮೊದಲ ಬಾರಿಗೆ ಗೂಗಲ್ ಪ್ರತಿಕ್ರಿಯೆ ನೀಡಿದೆ.
ಭಾರತ ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ಡೆವಲಪರ್‌ಗಳಿಗೆ ಮಾಹಿತಿ ನೀಡಿದ್ದು, ಈ ಅಪ್ಲಿಕೇಶನ್‌ಗಳನ್ನು ತಾತ್ಕಾಲಿಕವಾಗಿ ಬ್ಲಾಕ್ ಮಾಡಿದ್ದೇವೆ ಎಂದು ಗೂಗಲ್ ವಕ್ತಾರರು ತಿಳಿಸಿದ್ದಾರೆ.
ಗೂಗಲ್ ವಕ್ತಾರರು ಎಷ್ಟು ಅಪ್ಲಿಕೇಶನ್ ಬ್ಲಾಕ್ ಮಾಡಲಾಗಿದೆ ಎಂಬುದರ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಲಿಲ್ಲ. ಆದರೆ ಡೆವಲಪರ್‌ಗಳೇ ಕೆಲ ಅಪ್ಲಿಕೇಶನ್‌ಗಳನ್ನೆ ಪ್ಲೇ ಸ್ಟೋರ್‌ನಿಂದ ತೆಗೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಹೀಗಿದ್ದರೂ ಕೆಲವೊಂದು ಅಪ್ಲಿಕೇಶನ್‌ಗಳು ಈಗಲೂ ಪ್ಲೇ ಸ್ಟೋರ್‌ನಲ್ಲಿದೆ. ವಿಬೋ, ಎಸ್ ಫೈಲ್ ಎಕ್ಸ್‌ಪ್ಲೋರರ್, ಯುಕ್ಯಾಮ್ ಮೇಕ್, ಕ್ಯೂಕ್ಯೂ ಆ್ಯಪ್‌ಗಳು ಈಗಲೂ ಪ್ಲೇ ಸ್ಟೋರ್‌ನಲ್ಲಿದೆ. ಈ ಅಪ್ಲಿಕೇಶನ್‌ಗಳು ಡೌನ್‌ಲೋಡ್ ಮಾಡಿದರೆ ಪೂರ್ಣವಾಗಿ ಕೆಲಸ ಮಾಡುತ್ತದೋ ಇಲ್ಲವೋ ಎನ್ನುವುದು ಸ್ಪಷ್ಟವಾಗಿಲ್ಲ.
ಅಪ್ಲಿಕೇಶನ್‌ಗಳ ಮೂಲಕ ಚೀನಾ ಭಾರತ ಪ್ರಜೆಗಳ ಮಾಹಿತಿಗಳನ್ನು ಕದಿಯುತ್ತಿದೆ. ಹೀಗಾಗಿ ಸುರಕ್ಷತೆಯ ದೃಷ್ಟಿಯಿಂದ 52 ಅಪ್ಲಿಕೇಶನ್‌ಗಳನ್ನು ನಿಷೇಧಿಸಿ ಎಂದು ಗುಪ್ತಚರ ಇಲಾಖೆ ಸರ್ಕಾರಕ್ಕೆ ತಿಳಿಸಿತ್ತು. ಈ ಅಪ್ಲಿಕೇಶನ್‌ಗಳ ಮೂಲಕ ಚೀನಾ ಸ್ಪೈವೇರ್ ಅಥವಾ ದುರುದ್ದೇಶಪೂರಿತ ತಂತ್ರಾಂಶಗಳನ್ನು ಸೇರಿಸಿ ಡೇಟಾವನ್ನು ಕದಿಯಬಹುದು ಎಂಬ ಗಂಭೀರ ಆರೋಪ ಈಗ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆ, ಭಾರತದ ರಕ್ಷಣೆ, ರಾಜ್ಯದ ಸುರಕ್ಷತೆಯ ಕಾರಣ ನೀಡಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಟಿಕ್‌ಟಾಕ್ ಸೇರಿದಂತೆ 59 ಚೀನಿ ಅಪ್ಲಿಕೇಶನ್‌ಗಳನ್ನು ನಿಷೇಧಿಸಿದೆ.
ಈ ಬಗ್ಗೆ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಪ್ರತಿಕ್ರಿಯಿಸಿ, ದೇಶದ ಜನಗಳ ಡೇಟಾ ಭದ್ರತೆಗಾಗಿ ಚೀನಿ ಅಪ್ಲಿಕೇಶನ್‌ಗಳನ್ನು ನಿಷೇಧಿಸಿದ್ದೇವೆ. ಇದು ಡಿಜಿಟಲ್ ಸ್ಟ್ರೈಕ್. ನಮ್ಮ ದೇಶದ ಜನಗಳ ಮೇಲೆ ಕೆಟ್ಟ ದೃಷ್ಟಿ ಇರಿಸಿದರೆ ನಾವು ಸರಿಯಾಗಿಯೇ ತಿರುಗೇಟು ನೀಡುತ್ತೇವೆ ಎಂದು ತಿಳಿಸಿದ್ದಾರೆ.