ಬೆಂಗಳೂರು : ಕೊರೋನ ಹೆಚ್ಚಳ ಹಿನ್ನಲೆಯಲ್ಲಿ ನಡೆಯಬೇಕಾಗಿದ್ದ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಆದರೆ ಇದರ ಕುರಿತು ಅನೇಕ ವದಂತಿಗಳು ಹರಡುತ್ತಿದ್ದು, ಅವುಗಳನ್ನು ಸಚಿವ ಸುರೇಶ್ ಕುಮಾರ್ ತಳ್ಳಿಹಾಕಿದ್ದಾರೆ.
ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಎರಡನೆ ವರ್ಷದ ಅಂತಿಮ ಪರೀಕ್ಷೆ ರದ್ದುಪಡಿಸಲಾಗಿದೆ ಎಂಬ ವರದಿಗಳನ್ನು ತಳ್ಳಿಹಾಕಿದ್ದು, ಇದರ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಇದು ಕೇವಲ ವದಂತಿಯಾಗಿದೆ, ಪರೀಕ್ಷೆ ರದ್ದುಪಡಿಸುವ ಸಂಬಂಧ ರಾಜ್ಯ ಸರ್ಕಾರ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ ಎಂದು ಅವರು ಹೇಳಿದ್ದಾರೆ .
ವಿದ್ಯಾರ್ಥಿಗಳು ಈ ಕುರಿತು ವಿಚಲಿತಗೊಳ್ಳಬಾರದು . ಅಧ್ಯಯನದ ಮೇಲೆ ಗಮನ ಕೇಂದ್ರೀಕರಿಸಿ ಎಂದು ಸಚಿವ ಸುರೇಶ್ ಕುಮಾರ್ ಮನವಿ ಮಾಡಿಕೊಂಡಿದ್ದಾರೆ.
Laxmi News 24×7