Breaking News

ರಾಧೆ’ ಸಿನಿಮಾ, ಬಿಡುಗಡೆ ಆದ ದಿನವೇ ಲೀಕ್!

Spread the love

ಮುಂಬೈ: ಬಾಲಿವುಡ್ ಬಾಕ್ಸ್ ಆಫೀಸ್ ಸುಲ್ತಾನ್ ಸಲ್ಮಾನ್ ಖಾನ್ ನಟನೆಯ ಬಹುನಿರೀಕ್ಷೆಯ ರಾಧೆ: ಯುವರ್ ಮೋಸ್ಟ್ ವಾಂಟೆಡ್ ಭಾಯ್ ಸಿನಿಮಾ ಈದ್ ಹಬ್ಬದ ಪ್ರಯುಕ್ತ ಬಿಡುಗಡೆಯಾಗಿದೆ. ಕೊರೊನಾ ಹಾವಳಿಯ ನಡುವೆಯೂ ಅಭಿಮಾನಿಗಳನ್ನು ರಂಜಿಸಲು ಸಲ್ಲು ರಾಧೆ ಮೂಲಕ ಎಂಟ್ರಿ ಕೊಟ್ಟಿದ್ದಾರೆ.

ಸಲ್ಮಾನ್ ಸಿನಿಮಾ ಅಂದ್ಮೇಲೆ ಅಭಿಮಾನಿಗಳ ನಿರೀಕ್ಷೆ ದುಪ್ಪಟ್ಟಾಗಿರುತ್ತೆ. ರಾಧೆ ನೋಡಲು ತುದಿಗಾಲಿನಲ್ಲಿ ನಿಂತಿದ್ದರು. ಆದರಂತೆ ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗುತ್ತಿದಂತೆ ಅಭಿಮಾನಿಗಳು ಮುಗಿಬಿದ್ದು ವೀಕ್ಷಿಸಿದ್ದಾರೆ. ಚಿತ್ರಕ್ಕೆ ಮೊದಲ ದಿನ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಆದರೆ ಮೊದಲ ದಿನವೇ ರಾಧೆ ಸಿನಿಮಾ ಲೀಕ್ ಆಗಿದೆ. ಲೀಕ್ ಆಗಿರುವ ಹೆಚ್ ಡಿ ಪ್ರಿಂಟ್ ವೈರಲ್ ಆಗಿದೆ. ಲಾಕ್ ಡೌನ್ ಇರುವ ಕಡೆ ಒಟಿಟಿಯಲ್ಲಿ ಚಿತ್ರ ಬಿಡುಗಡೆ ಮಾಡಿದ್ರೆ, ಲಾಕ್ ಡೌನ್ ಇಲ್ಲದೆ ಇರುವ ಕಡೆ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗಿದೆ.

ಆದರೆ ಮೊದಲ ದಿನವೇ ಲೀಕ್ ಆಗಿರುವುದು ಸಲ್ಲು ಅಭಿಮಾನಿಗಳಿಗೆ ಬೇಸರ ತಂದಿದೆ. ತಮಿಳು ರಾಕರ್ಸ್ ಸೇರಿದಂತೆ ಸಾಕಷ್ಟು ವೆಬ್ ಸೈಟ್ ಗಳಲ್ಲಿ ರಾಧೆ ಸಿನಿಮಾ ಸೋರಿಕೆಯಾಗಿದೆ. ರಿಲೀಸ್ ಗೂ ಮುನ್ನ ಸಲ್ಮಾನ್ ಖಾನ್ ಪೈರಸಿ ಮಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದರು. ಆದರೂ ಲೀಕ್ ಆಗಿರುವುದು ಅಭಿಮಾನಿಗಳಿಗೆ ಬೇಸರ ತರಿಸಿದೆ.

ಈ ಬಗ್ಗೆ ಸಲ್ಮಾನ್ ಅಭಿಮಾನಿಗಳ ಸಾಮಾಜಿಕ ಜಾಲತಾಣದ ಮೂಲಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸೋರಿಕೆ ಮಾಡಿದವರ ವಿರುದ್ಧ ಸರಿಯಾದ ಕ್ರಮ ತೆಗೆದುಕೊಳ್ಳಿ ಎಂದು ಒತ್ತಾಯಿಸುತ್ತಿದ್ದಾರೆ. ರಾಧೆ ಲೀಕ್ ಆಗಿರುವ ವೆಬ್ ಸೈಟ್ ಸ್ಕ್ರೀನ್ ಶಾಟ್ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ ಕಠಿಣ ಕ್ರಮಕ್ಕೆ ಆಗ್ರಹಿಸುತ್ತಿದ್ದಾರೆ.


Spread the love

About Laxminews 24x7

Check Also

ಉಪಚುನಾವಣೆಯಲ್ಲಿ ಮೇಟಿ ಕುಟುಂಬದವರಿಗೆ ಟಿಕೆಟ್

Spread the loveಬೆಳಗಾವಿ: ‘ಕಾಂಗ್ರೆಸ್ ಶಾಸಕ ಎಚ್‌.ವೈ. ಮೇಟಿ ನಿಧನದಿಂದ ತೆರವಾಗಿರುವ ಬಾಗಲಕೋಟೆ ವಿಧಾನಸಭೆ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್‌ನಿಂದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ