Breaking News

Old Is Gold : ನಿಮ್ಮ ಬಳಿ ಈ ʼ1 ರೂಪಾಯಿ ನೋಟಿದ್ಯಾʼ? ಲಾಟರಿ ಹೊಡೀತು ಅನ್ಕೊಳ್ಳಿ, ನೀವು ʼಲಕ್ಷಾಧಿಪತಿʼಯಾಗೋದು ಪಕ್ಕಾ

Spread the love

ನವದೆಹಲಿ: ನಿಮಗೆ ಹಳೆಯ ನಾಣ್ಯ, ನೋಟುಗಳನ್ನ ಕೂಡಿಡುವ ಆಭ್ಯಾಸವಿದ್ಯಾ? ಹಾಗಾದ್ರೆ, ಈ ಆಭ್ಯಾಸವೇ ನಿಮ್ಮನ್ನ ಶ್ರೀಮಂತರನ್ನಾಗಿಸ್ಬೋದು. ಹೌದು, ಹಳೆಯ ನಾಣ್ಯಗಳಿದ ಸಧ್ಯ ಬಂಗಾರದ ಬೆಲೆ ಸಿಕ್ತಿದ್ದು, ಲಕ್ಷ, ಕೋಟಿಗಳಲ್ಲಿ ಖರೀದಿಸ್ತಿದ್ದಾರೆ. ಅದ್ರಂತೆ, ಸಧ್ಯ ಹಳೆಯ ಒಂದು ರೂಪಾಯಿ ನೋಟಿಗೆ ಬಂಪರ್‌ ಬೆಲೆ ಬಂದಿದೆ.

ಹೌದು, ಈ ಹಳೆಯ ಒಂದು ರೂಪಾಯಿ ನೋಟಿನ ಬೆಲೆ ಸುಮಾರು 45,000 ರೂಪಾಯಿ ಆಗಿದ್ದು, ಆಸಕ್ತ ವ್ಯಕ್ತಿಗಳು ಆನ್ ಲೈನ್ ನಲ್ಲಿ ಖರೀದಿಸಬಹುದು. ನಮ್ಮಲ್ಲಿ ಅನೇಕರು ಹಳೆಯ ಕರೆನ್ಸಿ ನೋಟುಗಳು ಮತ್ತು ನಾಣ್ಯಗಳನ್ನು ಸಂಗ್ರಹಿಸಲು ಇಷ್ಟಪಡುತ್ತಾರೆ. ಆದಾಗ್ಯೂ, ಅಂತಹ ಹಳೆಯ ನೋಟುಗಳು ಮತ್ತು ನಾಣ್ಯಗಳನ್ನ ಪಡೆಯಲು ಕೆಲವರು ಭಾರಿ ಮೊತ್ತವನ್ನು ಪಾವತಿಸುತ್ತಿದ್ದಾರೆ.

1 ರೂಪಾಯಿ ನೋಟ್ ಮೌಲ್ಯ 45,000 ..! ಹಳೆಯ ಒಂದು ರೂಪಾಯಿ ನೋಟು.. ಅಂದ್ರೆ, 1957ರ ಫ್ರಿಂಟ್‌ ಆದಾ, ಕೇಂದ್ರದ ಮಾಜಿ ಹಣಕಾಸು ಸಚಿವ ಹಿರುಭಾಯಿ ಎಂ. ಪಟೇಲ್ ಅವ್ರು ಸಹಿ ಮಾಡಿದ, 123456 ಸಂಖ್ಯೆಯ ನೋಟಿಗೆ ಭಾರೀ ಬೆಲೆ ಸಿಕ್ಕಿದೆ. ಇದು ಕಾಯಿನ್ ಬಾಜಾರ್ ಅನ್ನೋ ವೆಬ್ಸೈಟ್ʼನಲ್ಲಿ 44,999 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ.

ಆದ್ರೆ, ಹಳೆಯ 1 ರೂಪಾಯಿ ಬಂಡಲ್ ಮೂಲ ಬೆಲೆ 49,999 ರೂ. ರಿಯಾಯಿತಿಯ ನಂತ್ರ, ವೆಬ್ ಸೈಟ್ ಬೆಲೆಯನ್ನ ರೂ 44,999 ಕ್ಕೆ ನಿಗದಿಪಡಿಸಿದೆ.

ಅದ್ರಂತೆ, ನಿಮ್ಮಲ್ಲಿಯೂ ಈ ಒಂದು ರೂಪಾಯಿ ನೋಟಿದ್ರೆ ನೀವು ಮಾಡಬೇಕಿರೋದಯ ಇಷ್ಟೇ. ಕಾಯಿನ್ ಬಾಜಾರ್ ವೆಬ್ಸೈಟ್ʼಗೆ ತೆರಳಿ, ಶಾಪಿಂಗ್ ವಿಭಾಗಕ್ಕೆ ಹೋಗಬೇಕು. ಅಂಗಡಿ ವಿಭಾಗಕ್ಕೆ ಭೇಟಿ ನೀಡಿದ ನಂತರ, ನೀವು ‘ನೋಟ್ ಬಂಡಲ್ಸ್’ ವರ್ಗಕ್ಕೆ ಹೋಗಬೇಕು. ನೀವು ವಿವರಗಳನ್ನು ನೋಡುತ್ತೀರಿ.

ಹಳೆಯ ನಾಣ್ಯಗಳು, ನೋಟುಗಳು ಲಭ್ಯ..!
ಖರೀದಿದಾರರು ವಿಶೇಷವಾಗಿ ದೇಶದ ಹಳೆಯ ಕರೆನ್ಸಿಯನ್ನ ಇಟ್ಟುಕೊಳ್ಳಲು ಇಷ್ಟಪಡುವವರು, ರೂ 10, ರೂ 5 ರೂ 2,999, ರೂ 2 ರೂ 4,999 ಮತ್ತು ರೂ 100 ಹಳೆಯ ನೋಟುಗಳನ್ನ ಖರೀದಿಸಬಹುದು.

ನೀವು ವೆಬ್ ಸೈಟ್ ಮೂಲಕ ನಿಮ್ಮ ವಸ್ತುಗಳನ್ನ ಮಾರಾಟ ಮಾಡಬಹುದು ಮತ್ತು ಸ್ವಲ್ಪ ಹಣವನ್ನು ಗಳಿಸಬಹುದು. ನೀವು ಕಾಯಿನ್ ಬಾಜಾರ್ ವೆಬ್ ಸೈಟ್ ಗೆ ಹೋಗಬೇಕು ಮತ್ತು ‘ನಮ್ಮೊಂದಿಗೆ ಮಾರಾಟ ಮಾಡಲು ಪ್ರಾರಂಭಿಸಬೇಕು’ ವಿಭಾಗದಲ್ಲಿ ತೆರಳಿ, ನೀವು ಕೆಲವು ವಿವರಗಳನ್ನ ನಮೂದಿಸುವ ಮೂಲಕ ನೋಂದಣಿಯನ್ನು ಮಾಡಿಕೊಳ್ಳಿ.

ಈ ವಿವರಗಳು ಬಳಕೆದಾರ ಹೆಸರು, ಇಮೇಲ್, ಪರಿಶೀಲನೆ ಕೋಡ್, ಮೊದಲ ಹೆಸರು, ಕೊನೆಯ ಹೆಸರು, ಸ್ಟೋರ್ ಹೆಸರು, ವಿಳಾಸ 1, ವಿಳಾಸ 2, ದೇಶ, ನಗರ ಅಥವಾ ಪಟ್ಟಣ, ರಾಜ್ಯ, ಪಿನ್ ಕೋಡ್ ಮತ್ತು ಇತರ ವಿವರಗಳನ್ನ ಕೇಳಲಾಗುತ್ತೆ.


Spread the love

About Laxminews 24x7

Check Also

ಚಾಮುಂಡಿ ಬೆಟ್ಟಕ್ಕೆ ಎಲ್ಲಾ ಧರ್ಮದವರಿಗೂ ಪ್ರವೇಶವಿದೆ: ಡಿಸಿಎಂ

Spread the loveಬೆಂಗಳೂರು : ಚಾಮುಂಡಿ ಬೆಟ್ಟಕ್ಕೆ ಎಲ್ಲ ಧರ್ಮದವರಿಗೂ ಪ್ರವೇಶವಿದೆ. ಎಲ್ಲಾ ಸಮಾಜದವರು ಚಾಮುಂಡಿ ಬೆಟ್ಟಕ್ಕೆ ಹೋಗುತ್ತಾರೆ, ದೇವರ ಬಳಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ