ದೆಹಲಿ : ನಗರ ಏಮ್ಸ್ ಆಸ್ಪತ್ರೆಯಲ್ಲಿ ಕೊರೋನಾ ಸೋಂಕಿನಿಂದಾಗಿ ಚಿಕಿತ್ಸೆ ಪಡೆಯುತ್ತಿದ್ದಂತ ಅಂಡರ್ ವರ್ಲ್ಡ್ ಡಾನ್ ಛೋಟಾ ರಾಜನ್, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಭೂಗತ ಪಾತಕಿ ಮತ್ತು ದರೋಡೆಕೋರ ಛೋಟಾ ರಾಜನ್ ಅವರು ಶುಕ್ರವಾರ ನವದೆಹಲಿಯ ಅಖಿಲ ಭಾರತ ವೈದ್ಯಕೀಯ ಸೇವೆಗಳ ಸಂಸ್ಥೆಯಲ್ಲಿ (ಏಮ್ಸ್) ಕೊರೊನಾ ವೈರಸ್ ಕಾಯಿಲೆ (ಕೋವಿಡ್-19) ಯಿಂದಾಗಿ ನಿಧನರಾದರು.
ರಾಜೇಂದ್ರ ನಿಕಾಲ್ಜೆ ಆಲಿಯಾಸ್ ಛೋಟಾ ರಾಜನ್ ಅವರನ್ನು ಏಪ್ರಿಲ್ 26 ರಂದು ಏಮ್ಸ್ ಗೆ ದಾಖಲಿಸಲಾಯಿತು. 2015ರಲ್ಲಿ ಇಂಡೋನೇಷ್ಯಾದಿಂದ ಬಂಧನಕ್ಕೊಳಗಾದ ನಂತರ ಅವರನ್ನು ನವದೆಹಲಿಯ ಉನ್ನತ ಭದ್ರತೆಯ ತಿಹಾರ್ ಜೈಲಿನಲ್ಲಿ ಇರಿಸಲಾಗಿತ್ತು.
Laxmi News 24×7