Breaking News

.ಈಶ್ವರಪ್ಪನವರೇ ತೇಜಸ್ವಿ ಸೂರ್ಯಗೆ ಎಚ್ಚರಿಕೆ ನೀಡಿದ ಜಮೀರ್ ಅಹ್ಮದ್

Spread the love

ಬೆಂಗಳೂರು: ಸಚಿವ ಕೆ.ಎಸ್.ಈಶ್ವರಪ್ಪನವರೇ ಮುಸಲ್ಮಾನ್, ಮುಸಲ್ಮಾನ್ ಅಂತ ಸಾಯಬೇಡಿ. ಸಂಸದ ತೇಜಸ್ವಿ ಸೂರ್ಯ ಅವರೇ ನಿಮ್ಮ ಕಣ್ಣಿಗೆ ಕೇವಲ ಮುಸಲ್ಮಾನರು ಕಾಣಿಸ್ತಾರಾ ಎಂದು ಕಾಂಗ್ರೆಸ್ ಶಾಸಕ, ಮಾಜಿ ಸಚಿವ ಜಮೀರ್ ಅಹ್ಮದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಸಲ್ಮಾನರೇ ಕಾಣೋದಾ ನಿಮ್ಮ ಕಣ್ಣಿಗೆ?:
ಸಂಸದ ತೇಜಸ್ವಿ ಸೂರ್ಯ ಆರೋಪಿಸಿದ್ದ 17 ಮುಸ್ಲಿಂ ಯುವಕರನ್ನ ಜೊತೆಗೆ ಕರೆದುಕೊಂಡು ಶಾಸಕ ಜಮೀರ್ ಅಹ್ಮದ್ ಸುದ್ದಿಗೋಷ್ಠಿ ನಡೆಸಿದರು. ಮಾನ್ಯ ಗ್ರೇಟ್ ಎಂಪಿಯವರು ಒಳ್ಳೆ ಕೆಲಸ ಮಾಡಿದ್ದೀರಿ. ಕಾಂಗ್ರೆಸ್ ಸರ್ಕಾರ ಇದೆ ಅದರ ವಿರುದ್ಧ ಆರೋಪ ಮಾಡಿದ್ದೀನಿ ಅನ್ನೋ ರೀತಿ ನಿಮ್ಮದೇ ಸರ್ಕಾರದ ವಿರುದ್ಧ ಕೆಲಸ ಮಾಡಿದ್ದೀರಿ. ನಿಮ್ಮ ಸಿಎಂ, ಬಿಜೆಪಿ ಸರ್ಕಾರ ಇರೋದು ಯಾಕೆ ರಾಜೀನಾಮೆ ಕೇಳಿಲ್ಲ. ಕೇವಲ ಮುಸಲ್ಮಾನರೇ ಕಾಣೋದಾ ನಿಮ್ಮ ಕಣ್ಣಿಗೆ? ಕ್ರಿಸ್ಟಲ್ ಅನ್ನೋ ಕಂಪನಿ 205 ಜನರನ್ನ ನೇಮಕ ಮಾಡಿದೆ. ಅದರಲ್ಲಿ ಮಹಮ್ಮದ್ ಜಯಿದ್ ಅನ್ನೋ ಒಬ್ಬ ಮಾತ್ರ ಬೆಡ್ ಹಂಚಿಕೆಯಲ್ಲಿರೋದು. ಉಳಿದವರು ಹೆಲ್ಪ್ ಲೈನ್ ಬೇರೆ ಕಡೆ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ಶವ ಸಂಸ್ಕಾರ ಮಾಡಿದ್ದು ನಾವು:
2020ರಲ್ಲೂ 500ಕ್ಕೂ ಹೆಚ್ಚು ಶವ ಸಂಸ್ಕಾರ ಮಾಡಿದ್ದು ನಾವು. ಈಗಲು ಮಾಡುತ್ತಿದ್ದೇವೆ. ನೀವು ಈ ರೀತಿ ಚೀಫ್ ರಾಜಕೀಯ ಮಾಡೋದು ಬೇಡ. ಸತೀಶ್ ರೆಡ್ಡಿ ಅವರೇ ಮದರಸ ಮಾಡೋಕೆ ಹೊರಟಿದ್ದಾರೆ ಅಂತಾರೆ. ತಿಳಿದು ಮಾತಾಡಿ 205ರಲ್ಲಿ 16 ಜನ ಮಾತ್ರ ಮುಸಲ್ಮಾನರು. ಪಂಚರ್ ಹಾಕೋರು ನಾವು. ಅನ್ ಎಜ್ಯುಕೆಟೆಡ್ ಹೌದು ಸ್ವಾಮಿ ಆದರೆ ನಿಮ್ಮ ಕಾರು ಪಂಚರ್ ಆದರು ನಮ್ಮ ಹತ್ರನೆ ಬರಬೇಕು ಎಂದು ವ್ಯಂಗ್ಯ ಮಾಡಿದರು.

ಹುಷಾರ್ ಎಷ್ಟು ಅಂತ ಸಹಿಸಿಕೊಳ್ಳಬೇಕು:
ಮುಸಲ್ಮಾನರು ಈ ದೇಶದ ಸ್ವಾತಂತ್ರಕ್ಕೆ ಹೋರಾಡಿದ್ದಾರೆ. ಇಂಡಿಯ ಗೇಟಲ್ಲಿ ಹೆಸರಿದೆ ಹೋಗಿ ನೋಡಿ. ಇಸ್ಲಾಂ ಧರ್ಮದಲ್ಲಿ ಜಾತಿ ಅಂತ ಇಲ್ಲಾ. 400 ಜನ ಹಿಂದೂಗಳು ಇದ್ದರೆ ನಾವು ಹೋಗಿ ವಾಸ ಮಾಡೋ ಹಾಗಿಲ್ಲ. ನಾವು ನಾನ್ ವೆಜ್ ತಿಂತಿವಿ ಅಂತ ಪರ್ಮಿಷನ್ ತಗೊಂಡು ವಾಸ ಮಾಡಬೇಕು. ಇನ್ನೊಮ್ಮೆ ಜಾತಿ ಮಾಡಿದರೆ ಹುಷಾರ್ ಎಷ್ಟು ಅಂತ ಸಹಿಸಿಕೊಳ್ಳಬೇಕು ಎಂದು ಸಂಸದ ತೇಜಸ್ವಿ ಸೂರ್ಯಗೆ ಎಚ್ಚರಿಕೆ ನೀಡಿದರು.


Spread the love

About Laxminews 24x7

Check Also

ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಇಲ್ಲಿನ ತಾಲೂಕು ಆಡಳಿತಗಳು ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಿವೆ.

Spread the loveಶಿವಮೊಗ್ಗ/ಉತ್ತರಕನ್ನಡ: ರಾಜ್ಯದ ಮಲೆನಾಡು ಭಾಗದ ಹಲವೆಡೆ ಮತ್ತೆ ಮಳೆಯ ಆರ್ಭಟ ಮುಂದುವರೆದಿದೆ. ಭಾರಿ ವರ್ಷಧಾರೆ ಹಿನ್ನೆಲೆಯಲ್ಲಿ ಶಿವಮೊಗ್ಗ ಹಾಗೂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ