Breaking News

ಒಂದು ಬೆಡ್‍ಗೆ 50 ಸಾವಿರ ಲಂಚ..!

Spread the love

ಬೆಂಗಳೂರು,ಮೇ.6- ಬೆಡ್ ಬ್ಲಾಕಿಂಗ್ ದಂಧೆಯಲ್ಲಿ ಪಾಲ್ಗೊಂಡವರು ಅಮಾಯಕರಿಂದ ಒಂದು ಬೆಡ್‍ಗೆ 40 ರಿಂದ 50 ಸಾವಿರ ಹಣ ಪೀಕುತ್ತಿದ್ದರೂ ಎಂಬ ಬೆಳಕಿಗೆ ಬಂದಿದೆ.ಒಂದು ಬೆಡ್‍ನಿಂದ ಸಿಗುತ್ತಿದ್ದ ಹಣದಲ್ಲಿ ಮಧ್ಯವರ್ತಿಗಳಿಗೆ ಶೇ.10 ರಷ್ಟು ಕಮಿಷನ್ ಸಿಗುತಿತ್ತು. ಉಳಿದ ಹಣವನ್ನು ವಾರ್ ರೂಮ್‍ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕೆಲ ವೈದ್ಯರು ಪಡೆದುಕೊಳ್ಳುತ್ತಿದ್ದರು ಎನ್ನಲಾಗಿದೆ.

ಈ ದಂಧೆಯಲ್ಲಿ ಕೆಲ ವೈದ್ಯರೇ ಕಿಂಗ್‍ಪಿನ್‍ಗಳಾಗಿದ್ದುಅವರ ಸೂಚನೆಯಂತೆ ಕೆಲವು ವಾರ್ ರೂಮ್ ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ವಾರ್ ರೂಮಿನಲ್ಲಿ ಕೆಲಸ ಮಾಡುವ ಸಿಬ್ಬಂದಿಗಳು ಆಸ್ಪತ್ರೆ ಅವಶ್ಯವಿರುವವರಿಗೆ ಬೆಡ್ ಸಿಗುವುದಿಲ್ಲ ಎಂದು ನಂಬಿಸುತ್ತಿದ್ದರೂ ಏನಾದರೂ ಮಾಡಿ ಬೆಡ್ ವ್ಯವಸ್ಥೆ ಮಾಡಿಕೊಡಿ ಎಂದರೆ 50 ಸಾವಿರ ನೀಡಿದರೆ ನೋಡಬಹುದು ಎಂದು ನಂಬಿಸುತ್ತಿದ್ದರು.

ಇವರ ಮಾತು ನಂಬಿ ಹಣ ನೀಡಲು ಸಮ್ಮತಿಸಿದವರಿಗೆ ಅನಾಯಾಸವಾಗಿ ಬೆಡ್ ಅಲಾಟ್ ಮಾಡಿಸಿಕೊಡುತ್ತಿದ್ದರು. ಇಲ್ಲದಿದ್ದರೆ ನಿಮ್ಮ ದಾರಿ ನೀವು ನೋಡಿಕೊಳ್ಳಿ ಎಂದು ಸಾಗಹಾಕುತ್ತಿದ್ದರು. ಈ ರೀತಿ ಬೆಡ್ ಸಿಗದೆ ಅದೆಷ್ಟೋ ಅಮಾಯಕ ಜೀವಗಳು ರಸ್ತೆಗಳಲ್ಲಿ ಶವಗಳಾಗಿ ಹೋದ ಉದಾಹರಣೆಗಳಿವೆ.

ಆದರೆ, ದಂಧೆಯಲ್ಲಿ ತೊಡಗಿಸಿಕೊಂಡಿದ್ದವರಿಗೆ ಅಮಾಯಕ ಜೀವಗಳ ಬಗ್ಗೆ ಯಾವುದೆ ಕನಿಕರವಿರಲಿಲ್ಲ. ಅವರದು ಒನ್‍ಲೈನ್ ಅಜೆಂಡಾ. ಹೇಗಾದರೂ ಮಾಡಿ ಅವಕಾಶ ಸಿಕ್ಕಾಗ ಕೈತುಂಬಾ ಹಣ ಮಾಡಿಕೊಳ್ಳಬೇಕು ಎಂಬುದು. ಅಮಾಯಕ ಜೀವಗಳೊಂದಿಗೆ ಚೆಲ್ಲಾಟವಾಡಿರುವ ಬೆಡ್‍ಬ್ಲಾಕಿಂಗ್ ದಂಧೆ ಕೇವಲ ದಕ್ಷಿಣ ವಲಯದಲ್ಲಿ ಮಾತ್ರ ನಡೆದಿರುವುದಲ್ಲ.ಎಲ್ಲಾ ಎಂಟು ವಲಯಗಳಲ್ಲೂ ನಡೆದಿದೆ.

ಇದೀಗ ತನಿಖೆ ತೀವ್ರಗೊಳಿಸಿರುವ ಸಿಸಿಬಿ ಪೊಲೀಸರಿಗೆ ಬೆಡ್ ಬ್ಲಾಕಿಂಗ್ ದಂಧೆಯಲ್ಲಿ ಪಾಲ್ಗೊಂಡಿರುವ ವೈದ್ಯರು, ಮತ್ತಿತರ ಜಾತಕ ಲಭ್ಯವಾಗಿದ್ದು ಅವರಿಗೆಲ್ಲಾ ಶೀಘ್ರದಲ್ಲೇ ಹೆಡೆಮುರಿ ಕಟ್ಟುವ ಸಾಧ್ಯತೆಗಳಿವೆ.


Spread the love

About Laxminews 24x7

Check Also

ಅಪಘಾತದ ಕಥೆ ಕಟ್ಟಿ ಹಣ ಸುಲಿಗೆ; ವಯೋವೃದ್ಧ ಕಾರು ಚಾಲಕರೇ ಈತನ ಟಾರ್ಗೆಟ್!

Spread the loveಅಪಘಾತದ ಕಥೆ ಕಟ್ಟಿ ಹಣ ಸುಲಿಗೆ; ವಯೋವೃದ್ಧ ಕಾರು ಚಾಲಕರೇ ಈತನ ಟಾರ್ಗೆಟ್! ಬೆಂಗಳೂರು: ವಯೋವೃದ್ಧ ಕಾರು ಚಾಲಕರನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ