ಬೆಂಗಳೂರು: ರಾಜಕೀಯ ನಾಯಕರು, ಸಿನಿಮಾ ನಟರೇ ಕೊರೊನಾ ಮಾರ್ಗಸೂಚಿ, ನಿಯಮ ಉಲ್ಲಂಘಿಸುತ್ತಿದ್ದಾರೆ. ಆದರೂ ಯಾಕೆ ಕ್ರಮ ಕೈಗೊಂಡಿಲ್ಲ ಅಂತ ರಾಜ್ಯ ಸರ್ಕಾರವನ್ನು ಹೈಕೋರ್ಟ್ ತರಾಟೆ ತೆಗೆದುಕೊಂಡಿದೆ.
ಚಾಮುಂಡಿ ಬೆಟ್ಟಕ್ಕೆ ಭಕ್ತರಿಗೆ ಪ್ರವೇಶ ನಿರಾಕರಿಸಿದ್ದು, ಸಂಸದೆ ಶೋಭಾ ಕರಂದ್ಲಾಜೆ, ನಟ ದರ್ಶನ್‍ಗೆ ಯಾಕೆ ಅವಕಾಶ ಕೊಟ್ರಿ. ಸೆಲೆಬ್ರಿಟಿಗಳು, ರಾಜಕಾರಣಿಗಳಿಗೆ ಪ್ರತ್ಯೇಕ ಕಾನೂನು ಇದೆಯಾ ಎಂದು ಮುಜರಾಯಿ ಇಲಾಖೆಗೆ ಮುಖ್ಯ ನ್ಯಾಯಮೂರ್ತಿಗಳು ಪ್ರಶ್ನಿಸಿದ್ದಾರೆಕೆಂಪೇಗೌಡ ಪುತ್ಥಳಿ ಶಿಲಾನ್ಯಾಸ ಕಾರ್ಯಕ್ರಮ, ಡಿಕೆಶಿ ಪುತ್ರಿ ವಿವಾಹ ನಿಶ್ಚಿತಾರ್ಥ ವೇಳೆಯೂ ರೂಲ್ಸ್ ಬ್ರೇಕ್ ಆಗಿದೆ.
ಈ ಬಗ್ಗೆಯೂ ಆಗಸ್ಟ್ 21ರ ಒಳಗೆ ವಿಚಾರಣಾ ವರದಿ ನೀಡಿ ಎಂದು ಸೂಚಿಸಿದೆ. ಇದರ ಮಧ್ಯೆ ಕಾಂಗ್ರೆಸ್ ನಾಯಕರ ಇಂದಿನ ಪ್ರತಿಭಟನೆಯಲ್ಲೂ ಸಾಮಾಜಿಕ ಅಂತರ ಕಾಣಲಿಲ್ಲ. ಬಿಜೆಪಿ ಮುಖಂಡ ರುದ್ರೇಶ್ ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ಕೋವಿಡ್ ನಿಯಮಗಳ ಉಲ್ಲಂಘನೆಯಾಗಿದೆ
Laxmi News 24×7