ಚಿಕ್ಕಬಳ್ಳಾಪುರ: ಕೋವಿಡ್ ಸೋಂಕಿನಿಂದ ಮೃತಳಾದ ಮಹಿಳೆಯ ಮಾಂಗಲ್ಯ ಸರಕಳವು ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲಾ ಕೋವಿಡ್-19 ಆಸ್ಪತ್ರೆಯಲ್ಲಿ ನಡೆದಿದೆ. ಅಂದಾರ್ಲಹಳ್ಳಿ ಗ್ರಾಮದ ಲಕ್ಷ್ಮಮ್ಮ ಕೊರೊನಾ ದಿಂದ ಮೃತಪಟ್ಟಿದ್ದರು. ಮೃತದೇಹ ಪಡೆಯಲು ಬಂದ ಸಂಬಂಧಿಕರು ಮೃತ ಮಹಿಳೆಯ ಮೈಮೇಲೆ ಇದ್ದ ಆಭರಣಗಳನ್ನು ಕೇಳಿದ್ದಾರೆ. ಈ ವೇಳೆ ಮೊದಲು ಬೆಳ್ಳಿ ಕಾಲು ಚೈನ್ ತದನಂತರ ಬಂಗಾರದ ಕಿವಿ ಒಲೆ ತಂದುಕೊಟ್ಟಿದ್ದಾರೆ. ಆದರೆ ಮಾಂಗಲ್ಯ ಸರ ಎಲ್ಲಿ ಅಂತ ಕೇಳಿದ್ರ ಯಾರ ಬಳಿಯೂ ಉತ್ತರ ಇರಲಿಲ್ಲ.
ಇದರಿಂದ ಮೃತಳ ಸಂಬಂಧಿಕರು ಆಸ್ಪತ್ರೆ ಸಿಬ್ಬಂದಿ ವಿರುದ್ದ ಆಸಮಾಧಾನ ಹೊರ ಹಾಕಿ ಸದ್ಯ ಎಸ್ಪಿ, ಡಿವೈಎಸ್ಪಿ ಗಮನಕ್ಕೆ ತಂದು ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಎಸ್ಪಿ ವಿಚಾರಣೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
Laxmi News 24×7