ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ಎರಡನೇ ಅಲೆ ರಣಕೇಕೆ ಹಾಕುತ್ತಿದೆ. ಬೆಡ್ ಇಲ್ಲ, ಆಕ್ಸಿಜನ್ ಕೊರತೆ ಮುಂತಾದ ಸಮಸ್ಯೆಗಳಿಂದ ಕೊರೊನಾ ವಾರಿಯರ್ಸ್ ಪರದಾಡುವಂತಾಗಿದೆ. ಇದೀಗ ಸ್ವತಃ ಐಪಿಎಸ್ ಅಧಿಕಾರಿ ಇಶಾ ಪಂತ್ ಅವರಿಗೂ ಸೂಕ್ತ ಪ್ಲಾಸ್ಮಾ ದಾನಿಗಳು ಸಿಗುತ್ತಿಲ್ಲ.
ಕಮಾಂಡ್ ಸೆಂಟರ್ ಡಿಸಿಪಿ ಇಶಾ ಪಂತ್ ಕಳೆದ ಎರಡು ದಿನಗಳಿಂದ B-(ಬಿ ನೆಗೆಟಿವ್) ಪ್ಲಾಸ್ಮಾಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಆದ್ರೆ ಎಲ್ಲಿಯೂ ಕೂಡ ಸಿಕ್ತಿಲ್ಲವಂತೆ. ಈ ಬಗ್ಗೆ ಸ್ವತಃ ಅವರೇ ಟ್ವೀಟ್ ಮಾಡಿ ಸಹಾಯಕ್ಕಾಗಿ ಮನವಿ ಮಾಡಿದ್ದಾರೆ.
ಎರಡು ದಿನದಿಂದ B- plasma ಹುಡುಕಾಟ ನಡೆಸುತ್ತಿದ್ದೇವೆ. ಯಾವುದೇ ಪ್ರಯೋಜನವಾಗಿಲ್ಲ. ಯಾರಾದ್ರು ಸಹಾಯ ಮಾಡಬಹುದಾ ಎಂದು ಮನವಿ ಮಾಡಿದ್ದಾರೆ. ಹಾಗೇ ಪೇಷಂಟ್ ಹೆಸರು, ಆಸ್ಪತ್ರೆ ಮಾಹಿತಿ ಹಂಚಿಕೊಂಡು ಸಹಾಯ ಕೋರಿದ್ದಾರೆ.