ಗೋಕಾಕ : ನಗರದ ಸರಕಾರಿ ಆಸ್ಪತ್ರೆಯ ಹಳೆಯ ಕಟ್ಟಡವನ್ನು ಆಕ್ಸಿಜನ್ ಪೂರೈಕೆಯ ನೂರು (100)ಬೆಡ್‍ಗಳ ಕರೋನಾ ಆರೈಕೆ ಕೇಂದ್ರವನ್ನಾಗಿ ಪರಿವರ್ತಿಸುವದರ ಜೊತೆಗೆ ಎಲ್ಲ ಕರೋನಾ ಖಾಸಗಿ ಆಸ್ಪತ್ರೆಗಳಿಗೆ ಸಮರ್ಪಕ ಆಕ್ಸಿಜನ್ ಮತ್ತು ಜೀವ ರಕ್ಷಕ ರೆಮಡಿಸಿವಿಯರ್ ಇಂಜೇಕ್ಷನಗಳನ್ನು ಕೂಡಲೇ ಪೂರೈಸಬೇಕೆಂದು ರಾಜಕೀಯ ಧುರೀಣ ಅಶೋಕ ಪೂಜಾರಿ ಯವರು ಸರಕಾರವನ್ನು ಆಗ್ರಹಿಸಿದ್ದಾರೆ.
ನಗರದ ‘ಜ್ಞಾನ ಮಂದಿರ’ ಆಧ್ಯಾತ್ಮ ಕೇಂದ್ರದಲ್ಲಿ ಇಂದು ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ನಗರದ ಸರಕಾರಿ ಆಸ್ಪತ್ರೆ ಹಳೇಯ ಮತ್ತು ಹೊಸದಾದ ಎರಡು ದೊಡ್ಡ ಕಟ್ಟಡವನ್ನು ಹೊಂದಿದ್ದು, ಈಗ ಹಳೇ ಕಟ್ಟಡದಲ್ಲಿರುವ ಉಳಿದ ಎಲ್ಲ ವೈಧ್ಯಕೀಯ ಸೌಲಭ್ಯಗಳನ್ನು ಹೊಸ ಕಟ್ಟಡಕ್ಕೆ ವರ್ಗಾಯಿಸಿ ಹಳೇಯ ಕಟ್ಟಡವನ್ನು ಸಂಪೂರ್ಣವಾಗಿ ಕರೋನಾ ಶುಶ್ರೂೀಷೆಗೆ ಮೀಸಲಿಡಬೇಕೆಂದು ಹಾಗೂ ಇಲ್ಲಿ ಆಕ್ಸಿಜನ್ ಪೂರೈಕೆಯ ನೂರು ಬೆಡ್‍ಗಳನ್ನು ಕೂಡಲೇ ಒದಗಿಸಬೇಕೆಂದು ಅವರು ಒತ್ತಾಯಿಸಿದ್ದಾರೆ. ಈಗಾಗಲೇ ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್‍ಗಳಿಲ್ಲದೇ ಪರಿತಪ್ಪಿಸುತ್ತಿರುವ ಬಡ ಕರೋನಾ ರೋಗಿಗಳಿಗೆ ಈ ಕ್ರಮ ಆಸರೆಯಾಗಲಿದೆ ಎಂದು ಹೇಳಿದ್ದಾರೆ.
ತಾಲೂಕಿನ ಬಹುತೇಕ ಆಸ್ಪತ್ರೆಗಳು ಸಮರ್ಪಕ ಆಕ್ಸಿಜನ ಪೂರೈಕೆ ಇಲ್ಲದೆ ಕರೋನಾ ರೋಗಿಗಳನ್ನು ಆಸ್ಪತ್ರೆಗೆ ಸೇರಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ.
ಆಕ್ಸಿಜನ್ ದೊರೆಯದ ಕಾರಣ ಬೆಡ್ ಮೇಲೆ ಇರುವ ಆಕ್ಸಿಜನ್ ಅವಶ್ಯಕತೆಯ ರೋಗಿಗಳನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸುವ ಅನಿವಾರ್ಯತೆಗೆ ಒಳಗಾಗುತ್ತಿದ್ದಾರೆ. ಅಲ್ಲದೇ ಈಗಾಗಲೇ ಎಲ್ಲ ಖಾಸಗಿ ಆಸ್ಪತ್ರೆಯ ಬೆಡ್‍ಗಳು ಸಹ ತುಂಬಿದ್ದು, ನಾಲ್ಕಾರು ದಿನಗಳಿಂದ ಗಂಭೀರ ಸ್ವರೂಪದ ರೋಗಿಗಳು ತಮ್ಮ ಜೀವ ರಕ್ಷಣೆಗಾಗಿ ಬೆಡ್ ಖಾಲಿಯಾಗುವುದನ್ನು ಕಾಯುವಂತಾಗಿದೆ. ಒಂದು ವೇಳೆ ಬೆಡ್ ಸಿಕ್ಕರೂ ಜೀವ ರಕ್ಷಕ ರೆಮಡಿಸಿವಿಯರ್ ಇಂಜೇಕ್ಷನಗಳು ದೊರೆಯದೇ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಬದುಕುವ ದಯನೀಯ ಸ್ಥಿತಿ ಭಯಾಕನತೆಯನ್ನುಂಟು ಮಾಡಿದೆ. ಕಾರಣ ಸರಕಾರ, ಜಿಲ್ಲಾಡಳಿತ, ಜಿಲ್ಲಾ ವೈಧ್ಯಾದೀಕಾರಿಗಳು ಹಾಗೂ ಸ್ಥಳೀಯ ಶಾಸಕರು ಈ ಕೂಡಲೇ ಇಂತಹ ದಯನೀಯ ಸ್ಥಿತಿ ಹೊಗಲಾಡಿಸಲು ಕೂಡಲೇ ಪೂರಕ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಈಗಾಗಲೇ ದೊಡ್ಡ ಪ್ರಮಾಣದಲ್ಲಿ ಸಮುದಾಯ ಮಟ್ಟದಲ್ಲಿ ಹಬ್ಬಿರುವ ಕರೋನಾ ವೈರಸ್ ಹಬ್ಬುವಿಕೆಯನ್ನು ಲಾಕಡೌನ್ ಅಥವಾ ಇನ್ನಿತರ ಕ್ರಮಗಳಿಂದ ತೆಡೆಯುವದು ಸಹ ಅಸಾಧ್ಯವಾದ ಸನ್ನಿವೇಶ ನಿರ್ಮಾಣವಾಗಿದ್ದು, ಒಂದು ರೀತಿ ಇದು ಸರಕಾರದ ಅಸಮರ್ಪಕ ಕಾರ್ಯವೈಖರಿಗೆ ಸಾಕ್ಷಿಯಾಗಿದೆ. ಇಂದೇನಾದರೂ ಕರೋನಾದಿಂದಾಗಿ ಸಾವುನೋವುಗಳು ಹೆಚ್ಚಾಗುತ್ತಿದ್ದರೇ ಅದಕ್ಕೆ ಸರಕಾರದ ಅಸಮರ್ಪಕ ಕಾರ್ಯವೈಖರಿಯೇ ಕಾರಣವಾಗಿದೆ ಎಂದು ಅವರು ಆಪಾಧಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಎಲ್ಲ ನಾಗರೀಕರಿಗೂ ಉಚಿತ ಲಸಿಕೆ ನೀಡುವಿಕೆ ಹಾಗೂ ಈಗಾಗಲೇ ಕರೋನಾ ಪೀಡಿತರನ್ನು ಸಮರ್ಪಕ ವೈಧ್ಯಕೀಯ ಸೌಲಭ್ಯಗಳ ಮೂಲಕ ಅವರ ಜೀವ ಹಾನಿಯಾಗದಂತೆ ರಕ್ಷಿಸುವದೊಂದೇ ಸರಕಾರದ ಆಧ್ಯತಾ ಕಾರ್ಯ ಮತ್ತು ಜವಾಬ್ದಾ.