ಬೆಂಗಳೂರು: ಕೆಲ ಹಿರಿಯ ಶಾಸಕರು ನಿಗಮ ಸ್ಥಾನಕ್ಕೆ ವಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ನಾಲ್ವರು ಶಾಸಕರ ಅಧ್ಯಕ್ಷ ಸ್ಥಾನವನ್ನು ವಾಪಸ್ ಪಡೆದು ಆದೇಶ ಹೊರಡಿಸಿದೆ.
ಶಾಸಕರಾದ ಜಿ.ಎಚ್. ತಿಪ್ಪಾರಡ್ಡಿ, ಲಾಲನ್ ಮಂಡೆನ್, ಬಸವರಾಜ ದಡೆಸಗೂರು, ಪರಣ್ಣ ಮುನವಳ್ಳಿ ಅವರಿಗೆ ನೀಡಲಾದ ನಿಗಮ ಮಂಡಳಿ ಸ್ಥಾನವನ್ನು ವಾಪಸ್ ಪಡೆಯಲಾಗಿದೆ.
ಇಂದು ಮುಂಜಾನೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು 24 ಶಾಸಕರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಿದ್ದರು.
ಸಚಿವ ಸ್ಥಾನದ ಆಕಾಂಕ್ಷಿಯಲ್ಲಿದ್ದ ಹಿರಿಯ ಶಾಸಕರಿಗೆ ನಿಗಮ ಮಂಡಳಿ ನೀಡಿದ ಹಿನ್ನೆಲೆಯಲ್ಲಿ ಅಸಮಧಾನ ಮೂಡಿತ್ತು. ಅಸಮಾಧನ ತಣಿಸಲು ನಿಗಮ ಮಂಡಳಿ ವಾಪಸ್ ಪಡೆಯಲಾಗಿದೆ ಎಂದು ಬಿಜೆಪಿ ಮೂಲಗಳಿಂದ ತಿಳಿದು ಬಂದಿದೆ.
ಲಾಲಜಿ. ಆರ್. ಮಂಡೆನ್- ಕರ್ನಾಟಕ ರಾಜ್ಯ ಹಿಂದುಳಿದ ಆಯೋಗ ಬೆಂಗಳೂರು
ಬಸವರಾಜ ದಡೆಸಗೂರ್- ಕರ್ನಾಟಕ ರಾಜ್ಯ ಸಮಜ ಕಲ್ಯಾಣ ಮಂಡಳಿ, ಬೆಂಗಳೂರು
ಜಿ.ಹೆಚ್. ತಿಪ್ಪಾರೆಡ್ಡಿ- ಡಿ. ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮ ನಿಯಮಿತ ಬೆಂಗಳೂರು
ಪರಣ್ಣ ಈಶ್ವರಪ್ಪ ಮುನವಳ್ಳಿ- ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ, ಬೆಂಗಳೂರು ಮಂಡಳಿಯನ್ನು ನೀಡಲಾಗಿತ್ತು
https://youtu.be/9s1RvST8WGI
Laxmi News 24×7