Breaking News

ವಿಶೇಷ ಪ್ಯಾಕೇಜ್ ಇಲ್ಲದೇ ಲಾಕ್‍ಡೌನ್ – ಸರ್ಕಾರದ ನಿಲುವೇನು? ಕೆಲವು ದುಡಿಯುವ ವರ್ಗಗಳಿಗೆ ದೊಡ್ಡ ಪ್ರಮಾಣದಲ್ಲಿಯೇ ಆರ್ಥಿಕ ಹೊಡೆತ ಬೀಳಲಿದೆ

Spread the love

ಬೆಂಗಳೂರು: ಯಾವುದೇ ವಿಶೇಷ ಪ್ಯಾಕೇಜ್ ಘೋಷಣೆ ಮಾಡದೇ ರಾಜ್ಯದಲ್ಲಿ ಸರ್ಕಾರ 16 ದಿನ ಲಾಕ್‍ಡೌನ್ ಮಾಡಿದೆ. ಕೊರೊನಾ ನಿಯಂತ್ರಣಕ್ಕಾಗಿ ಸರ್ಕಾರಕ್ಕೆ ಲಾಕ್‍ಡೌನ್ ಅನಿವಾರ್ಯವಾಗಿತ್ತು. ಆದ್ರೆ ಆರ್ಥಿಕ ಹೊಡೆತಕ್ಕೆ ಸಿಲುಕುವ ವಲಯಗಳಿಗೆ ಸರ್ಕಾರ ಯಾವುದೇ ಪ್ಯಾಕೇಜ್ ಘೋಷಣೆ ಮಾಡಿಲ್ಲ.

16 ದಿನದ ಜನತಾ ಲಾಕ್‍ಡೌನ್ ನಲ್ಲಿ ಕೆಲವು ದುಡಿಯುವ ವರ್ಗಗಳಿಗೆ ದೊಡ್ಡ ಪ್ರಮಾಣದಲ್ಲಿಯೇ ಆರ್ಥಿಕ ಹೊಡೆತ ಬೀಳಲಿದೆ. ಕಳೆದ ವರ್ಷದ ಲಾಕ್‍ಡೌನ್ ನಿಂದ ಚೇತರಿಸಿಕೊಳ್ಳುವಷ್ಟರಲ್ಲಿ ಮತ್ತೊಂದು ಲಾಕ್‍ಡೌನ್ ಘೋಷಣೆಯಾಗಿದೆ. ಗಾರ್ಮೆಂಟ್ಸ್ ಉದ್ಯೋಗಿಗಳು, ಆಟೋ ಚಾಲಕರು, ಕ್ಯಾಬ್ ಚಾಲಕರು, ದಿನಗೂಲಿ ನೌಕರರು, ಕ್ಷೌರಿಕರು, ಹಮಾಲಿಗಳು, ಟೈಲರ್ ಗಳು, ಬೀದಿ ಬದಿಯ ಚಾಟ್ಸ್ ವ್ಯಾಪಾರಿಗಳು ಸೇರಿದಂತೆ ಬಹುತೇಕರು ಆರ್ಥಿಕ ಸಂಕಷ್ಟದಲ್ಲಿ ಸಿಲುಕಲಿದ್ದಾರೆ.

ಕಳೆದ ವರ್ಷ 1610 ಕೋಟಿ ರೂ ಮೊತ್ತದ ವಿಶೇಷ ಪ್ಯಾಕೇಜ್ ಘೋಷಿಸಿತ್ತು. ಕಳೆದ ಸಲ ಹಲವರಿಗೆ ವಿಶೇಷ ಪ್ಯಾಕೇಜ್ ಸಿಕ್ಕೇ ಇರಲಿಲ್ಲ. ಈ ಬಾರಿ ಕನಿಷ್ಠ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ಆರ್ಥಿಕ ಸಂಕಷ್ಟದಲ್ಲಿ ಸಿಲುಕಿರುವ ಜನರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ರಾಜ್ಯ ಸರ್ಕಾರ ಆರ್ಥಿಕ ಸಂಕಷ್ಟಕ್ಕೊಳಗಾಗುವ ವಲಯಗಳಿಗೆ ಪರಿಹಾರ ಕೊಡುತ್ತಾ ಅಥವಾ ಇಲ್ಲವಾ ಅನ್ನೋದರ ಬಗ್ಗೆ ಹೇಳಿಲ್ಲ. ಪರಿಹಾರ ಕೊಡಲು ಸ್ವಲ್ಪ ಸಮಯ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗುತ್ತಾ ಅನ್ನೋ ಅನುಮಾನ ಮೂಡಿದೆ.


Spread the love

About Laxminews 24x7

Check Also

ಅಥಣಿ ನಗರದಲ್ಲಿ ಇಂದು ರೋಟರಿ ಸಂಸ್ಥೆ ಅಧೀನದಲ್ಲಿ ಶ್ರೀ ಜ್ಯೋತಿಬಾ ದೇವಸ್ಥಾನ ಆವರಣದಲ್ಲಿ ನೂತನವಾಗಿ ನಿರ್ಮಿಸಿದ ರೋಟರಿ ಉದ್ಯಾನವನ

Spread the loveಅಥಣಿ ನಗರದಲ್ಲಿ ಇಂದು ರೋಟರಿ ಸಂಸ್ಥೆ ಅಧೀನದಲ್ಲಿ ಶ್ರೀ ಜ್ಯೋತಿಬಾ ದೇವಸ್ಥಾನ ಆವರಣದಲ್ಲಿ ನೂತನವಾಗಿ ನಿರ್ಮಿಸಿದ ರೋಟರಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ