Breaking News

ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ’ಯಿಂದಲೇ ‘ಕೊರೋನಾ ರೂಲ್ಸ್’ ಬ್ರೇಕ್ : ‘ಮಾಸ್ಕ್ ಧರಿಸದೇ’ ಮದುವೆ ಕಾರ್ಯಕ್ರಮದಲ್ಲಿ ಭಾಗಿ

Spread the love

ಕಾರವಾರ : ಕೊರೋನಾ ಸೋಂಕಿನ ನಿಯಂತ್ರಣಕ್ಕಾಗಿ ರಾಜ್ಯದಲ್ಲಿ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಡ್ಡಾಯವಾಗಿದೆ. ಆದ್ರೇ.. ಈ ನಿಯಮ ಮೀರಿ ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರೇ, ಮಾಸ್ಕ್ ಧರಿಸದೇ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿ, ಕೊರೋನಾ ರೂಲ್ಸ್ ಬ್ರೇಕ್ ಮಾಡಿದ್ದಾರೆ ಎಂಬುದಾಗಿ ಸೋಷಿಯಲ್ ಮೀಡಿಯಾದಲ್ಲಿ ಪೋಟೋ ಶೇರ್ ಮಾಡಿ, ಸಾರ್ವಜನಿಕರು ಕಿಡಿಕಾರಿದ್ದಾರೆ.

ವಿಧಾನಸಭೆಯ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರು, ನಿನ್ನೆಯ ಭಾನುವಾರದಂದು ಸಿದ್ದಾಪುರದಲ್ಲಿ ನಡೆದಂತ ಆಪ್ತರ ಮದುವೆಯ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಕೊರೋನಾ ಹಾಟ್ ಸ್ಪಾಟ್ ಆಗಿರುವಂತ ಬೆಂಗಳೂರಿನಿಂದ ಆಗಮಿಸಿದ್ದಂತ ಅವರು, ಸಮಾರಂಭದಲ್ಲಿ ಮಾಸ್ಕ್ ಧರಿಸದೇ, ಹಾಜರಾಗಿ, ಮದು ಮಕ್ಕಳನ್ನು ಹಾರೈಸಿದ್ದಾರೆ.

ಇಂತಹ ಪೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ರಾಜಕಾರಣಿಗಳು ಮದುವೆ, ಸಭೆ-ಸಮಾರಂಭಗಳಲ್ಲಿ ಹೇಗ್ ಬೇಕಾದ್ರೂ ಭಾಗವಹಿಸಬಹುದು. ಹೇಗ್ ಬೇಕಾದ್ರೂ ಓಡಾಡಬಹುದು. ಆದ್ರೇ ಜನಸಾಮಾನ್ಯರು ಮಾಸ್ಕ್ ಇಲ್ಲದೇ ಓಡಾಡಿದ್ರೇ.. ಪೊಲೀಸರು ಲಾಠಿ ಏಟ್ ನೀಡುತ್ತಾರೆ. ಜನಸಾಮಾನ್ಯರಿಗೊಂದು ಕಾನೂನು, ರಾಜಕಾರಣಿಗಳಿಗೆ ಒಂದು ಕಾನೂನಾ ಎಂಬುದಾಗಿ ಕಿಡಿ ಕಾರಿದ್ದಾರೆ.


Spread the love

About Laxminews 24x7

Check Also

ದಾವಣಗೆರೆ, ಬಾಗಲಕೋಟೆ ವಿಧಾನಸಭೆ ಬೈಎಲೆಕ್ಷನ್: ಉಸ್ತುವಾರಿ ಸಮಿತಿ ರಚನೆ; 31 ಜನರಿಗೆ ಜವಾಬ್ದಾರಿ

Spread the loveಬೆಂಗಳೂರು: ದಾವಣಗೆರೆ ಮತ್ತು ಬಾಗಲಕೋಟೆ ವಿಧಾನಸಭೆ ಉಪ ಚುನಾವಣೆ  ಹಿನ್ನೆಲೆ  ಎರಡೂ ಕ್ಷೇತ್ರಕ್ಕೆ ಕಾಂಗ್ರೆಸ್ ಉಸ್ತುವಾರಿ ವೀಕ್ಷಕರ ನೇಮಿಸಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ