ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಸೋಂಕಿನ ಪ್ರಕರಣಗಳ ಹೆಚ್ಚಳದ ಹಿನ್ನಲೆಯಲ್ಲಿ, ಮದುವೆ, ಧಾರ್ಮಿಕ ಕಾರ್ಯಕ್ರಮಗಳಿಗೆ ಬ್ರೇಕ್ ಬಿದ್ದಿದೆ. ಇದರಿಂದಾಗಿ ಕಲ್ಯಾಣ ಮಂಟಪದ ಬದಲಾಗಿ ಸರಳ ವಿವಾಹಕ್ಕೆ ಅನೇಕರು ಮೊರೆ ಹೋಗಿದ್ದಾರೆ. ಹೀಗೆ ದೇವಸ್ಥಾನದಲ್ಲೇ ಮದುವೆ ಆಗೋದಕ್ಕೆ ತಂದೆಯ ಜೊತೆಗೆ ಹೋಗುತ್ತಿದ್ದಂತ ಮಧು ಮಗನಿಗೂ, ವೀಕ್ ಎಂಡ್ ಕರ್ಪ್ಯೂ ಬಿಸಿ, ಬೆಂಗಳೂರಿನಲ್ಲಿ ತಟ್ಟಿದೆ.
ಇಂದು ವೀಕ್ ಎಂಡ್ ಕರ್ಪ್ಯೂ ಹಿನ್ನಲೆಯಲ್ಲಿ, ಕಲ್ಯಾಣ ಮಂಟಪದಲ್ಲಿ ನಡೆಯಬೇಕಿದ್ದಂತ ವಿವಾಹದ ಬದಲಾಗಿ, ದೇವಸ್ಥಾನದಲ್ಲೇ ವಿವಾಹ ಆಗೋದಕ್ಕೆ ಮಾಗಡಿ ರಸ್ತೆಯಲ್ಲಿ ಮಧು ಮಗ, ತಂದೆಯ ಜೊತೆಗೆ ಬೈಕ್ ನಲ್ಲಿ ತೆರಳುತ್ತಿದ್ದನು. ಈ ವೇಳೆ ಮಾಗಡಿ ರಸ್ತೆ ಟ್ರಾಫಿಕ್ ಪೊಲೀಸರು ತಪಾಸಣೆ ನಡೆಸುತ್ತಿದ್ದ ವೇಳೆಯಲ್ಲಿ ತಂದೆ-ಮಗನನ್ನು ತಡೆದಿದ್ದಾರೆ.
ಅನಗತ್ಯವಾಗಿ ವೀಕ್ ಎಂಡ್ ಕರ್ಪ್ಯೂ ಇದ್ದರೂ ಓಡಾಡುತ್ತಿದ್ದಕ್ಕೆ ಪ್ರಶ್ನಿಸಿದ್ದಾರೆ. ಈ ವೇಳೆ ಸಾರ್ ನಾನು ಮದುವೆ ಗಂಡು, ಇವರು ನನ್ನ ತಂದೆ. ಕರ್ಪ್ಯೂ ಹಿನ್ನಲೆಯಲ್ಲಿ ದೇವಸ್ಥಾನದಲ್ಲಿ ಮದುವೆ ಆಗ್ತಾ ಇದ್ದೇವೆ. ಹೀಗಾಗಿ ಮದುವೆಗೆ ತೆರಳುತ್ತಾ ಇದ್ದೇನೆ. ಮುಹೂರ್ತಕ್ಕೆ ಟೈಂ ಆಗುತ್ತದೆ ಬಿಡಿ ಸಾರ್ ಎಂಬುದಾಗಿ ಕೋರಿಕೊಂಡಿದ್ದಾರೆ.
ಇದರಿಂದಾಗಿ ಪೊಲೀಸರು ಖಚಿತ ಪಡಿಸಿಕೊಳ್ಳೋದಕ್ಕಾಗಿ ಮದುವೆ ಆಮಂತ್ರಣ ಪತ್ರಿಕೆ ತೋರಿಸಿ ಎಂದು ಕೇಳಿದ್ದಾರೆ. ಮದುವೆ ಆಮಂತ್ರಣ ಪತ್ರಿಕೆ ತೋರಿಸಿದ ನಂತ್ರ, ಮಧು ಮಗನ ಹೆಸರನ್ನು ಖಚಿತಪಡಿಸಿಕೊಂಡು, ಮದುವೆ ಆಗೋದಕ್ಕೆ ತೆರಳುತ್ತಿದ್ದಂತ ಮಧು ಮಗನಿಗೆ ವಿವಾಹಕ್ಕೆ ಶುಭಾಶಯ ಕೋರಿ ಬಿಟ್ಟು ಕಳುಹಿಸಿದ್ದಾರೆ.