ಹುಬ್ಬಳ್ಳಿ, ಏ24: ಧಾರವಾಡ ಜಿಲ್ಲೆಯಲ್ಲಿ ಆಕ್ಸಿಜನ್ ಹಾಗೂ ವೆಂಟಿಲೇಟರ್ ಕೊರತೆಯಿಲ್ಲವೆಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ತಿಳಿಸಿದರು. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಜಿಲ್ಲಾಡಳಿತ ತುರ್ತು ಪರಿಸ್ಥಿತಿಯಿದ್ದರೆ ದಿನದ 24 ತಾಸು ಕಾರ್ಯ ನಿರ್ವಹಿಸುತ್ತಿದೆ.
ಸದ್ಯ ಧಾರವಾಡ ಜಿಲ್ಲೆಯಲ್ಲಿ 2ಸಾವಿರ ಬೆಡ್ ಸಂಖ್ಯೆ ಹೆಚ್ಚಿಸಲು ಕ್ರಮ ಕೈಗೊಂಡಿದ್ದು, ಆಕ್ಸಿಜನ್ ಜೊತೆಗೆ 2 ಸಾವಿರ ಬೆಡ್‍ಗಳನ್ನು ಸಿದ್ಧಪಡಿಸಲಾಗುತ್ತಿದೆ ಎಂದ ಅವರು ಕಿಮ್ಸನಲ್ಲಿ 500 ಬೆಡ್ ಬದಲಿಗೆ 1 ಸಾವಿರ ಹೆಚ್ಚಳಕ್ಕೆ ನಿರ್ಧಾರ ಕೈಗೊಂಡಿದೆ ಎಂದರು.
ಕಳೆದ ಬಾರಿ ಖಾಸಗಿ ಆಸ್ಪತ್ರೆಗಳು ತೋರಿದ ಅಸಹಕಾರ ಈ ಬಾರಿಯಿಲ್ಲ. ಒಂದುವೇಳೆ ಅಸಹಕಾರ ತೋರಿದರೆ ಕಠಿಣ ಕ್ರಮ ಕೈಗೊಳ್ಳುವುದು ಅನಿವಾರ್ಯವೆಂದು ಸಚಿವ ಶೆಟ್ಟರ ತಿಳಿಸಿದರು.