Breaking News

ಕೊರೊನಾ ಸಾವುಗಳಿಗೆ ಸರ್ಕಾರಗಳ ಚುನಾವಣೆ ಕಾಳಜಿಯೇ ಕಾರಣ: ಮುತಾಲಿಕ್

Spread the love

ಧಾರವಾಡ: ಕೊರೊನಾ ಸಾವುಗಳಿಗೆ ಸರ್ಕಾರಗಳ ಚುನಾವಣೆ ಕಾಳಜಿಯೇ ಕಾರಣ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆರೋಪಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಹೇಳದೇ ಶೇ.90ರಷ್ಟು ಲಾಕ್‍ಡೌನ್ ಮಾಡಿದ್ದಾರೆ, ಜನ ಸಾಮಾನ್ಯರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ಪ್ರಕ್ರಿಯೆ ಆಗಬೇಕು. ಎರಡನೇ ಅಲೆ ಬರುವುದು ಮೊದಲೇ ಗೊತ್ತಿತ್ತು, ಆದರೂ ಆಸ್ಪತ್ರೆ, ಆಕ್ಸಿಜನ್, ಬೆಡ್ ವ್ಯವಸ್ಥೆ ಪೂರ್ವ ಸಿದ್ಧತೆ ಮಾಡಿಲ್ಲ. ಇದರಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ತಪ್ಪು ಎದ್ದು ಕಾಣುತ್ತಿದೆ ಎಂದರು.

ಲಾಕ್‍ಡೌನ್‍ದಿಂದ ಜನರಿಗೆ ದುಸ್ಥಿತಿ ಬರುತ್ತದೆ, ಒಂದು ಕಡೆ ಚುನಾವಣೆಗಳಲ್ಲಿ ಲಕ್ಷಾಂತರ ಜನ ಸೇರಿಸಿ ರ್ಯಾಲಿ ಮಾಡಿದರು. ಆಗಲೇ ಚುನಾವಣೆಗಳಿಗೆ ತಡೆಯೊಡ್ಡಿ ಕೊರೊನಾ ಕಡೆ ಗಮನ ಕೊಡಬೇಕಿತ್ತು. ಹಾಗೆ ಮಾಡಿದ್ದರೆ ಕೊರೊನಾದಿಂದ ಯಾರೂ ಸಾಯುತ್ತಿರಲಿಲ್ಲ. ಚುನಾವಣೆ ಬಿಟ್ಟು ಕೊರೊನಾ ನೋಡಿದ್ದರೆ, ನೂರಕ್ಕೇ ನೂರರಷ್ಟು ಯಾರೂ ಸಾಯುತ್ತಿರಲಿಲ್ಲ ಎಂದರು.

ಕೊರೊನಾ ನಿರ್ಲಕ್ಷಿಸಿ, ಚುನಾವಣೆ ಕಡೆ ಗಮನ ಕೊಟ್ಟರು. ಇವರಿಗೆ ಅಧಿಕಾರ ಬೇಕು, ಜನರ ಸಾವು, ನೋವಿನ ವಿಷಯ ಬೇಡವಾಗಿದೆ. ಜನ ಬಹಳ ಬೇಸರ ಮತ್ತು ಆಕ್ರೋಶಿತರಾಗಿದ್ದಾರೆ, ಇನ್ನಾದರೂ ಸಾವು ಹೆಚ್ಚಾಗದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.


Spread the love

About Laxminews 24x7

Check Also

ಇನ್ಮುಂದೆ ಆನ್​ಲೈನ್ ಬೆಟ್ಟಿಂಗ್ ನಿಷೇಧ:

Spread the loveಬೆಂಗಳೂರು: ಆನ್​ಲೈನ್ ಬೆಟ್ಟಿಂಗ್ ಹಾಗೂ ಗ್ಯಾಂಬ್ಲಿಂಗ್​ಗೆ ಅಂಕುಶ ಹಾಕಲು ರಾಜ್ಯ ಸರ್ಕಾರ ಹೊಸ ಮಸೂದೆಯನ್ನು ರೂಪಿಸಿದೆ.‌ ಕರ್ನಾಟಕ ಪೊಲೀಸ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ