ಬೆಳಗಾವಿ: ನಾಳೆ (ಭಾನುವಾರ) ಜಿಲ್ಲಾದ್ಯಂತ ಲಾಕ್ ಡೌನ್ ಜಾರಿ ಇರಲಿದೆ.
ಅಗತ್ಯ ಸೇವೆಗಳಾದ ಮೆಡಿಕಲ್ ಶಾಪ್, ಹಾಲು, ಆಸ್ಪತ್ರೆಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ.
ಹೋಟೆಲ್, ಬಸ್, ಆಟೋ ಸೇರಿದಂತೆ ಎಲ್ಲ ಅಂಗಡಿ ಮುಗ್ಗಟ್ಟು, ಎಲ್ಲವೂ ಬಂದ್ ಆಗಲಿವೆ.
ಅನಗತ್ಯವಾಗಿ ಬೀದಿಗಿಳಿಯುವವರ ವಿರುದ್ದ ಪೊಲೀಸರು ಕ್ರಮಕೈಗೊಳ್ಳಲಿದ್ದಾರೆ.
ಕಳೆದ ಎರಡು ದಿನಗಳ ಹಿಂದಷ್ಟೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳಲ್ಲಿ ಹೇರಲಾಗಿದ್ದ ಲಾಕ್ ಡೌನ್ ತೆರವುಗೊಳಿಸಿದ್ದಾರೆ. ಆದ್ರೆ ಭಾನುವಾರದ ಲಾಕ್ ಡೌನ್ ಮುಂದುವರೆಯಲಿದೆ.
Laxmi News 24×7