Breaking News

ಕೊರೊನಾ ಲಸಿಕೆ ಪಡೆದ ನಂತರ ನಟಿ ನಗ್ಮಾಗೆ ಪಾಸಿಟಿವ್

Spread the love

ನಟಿ-ರಾಜಕಾರಣಿ ನಗ್ಮಾ ಅವರಿಗೆ ಕೊರೊನಾ ವೈರಸ್ ತಗುಲಿದೆ ಎಂದು ವಿಚಾರ ಹೊರಬಿದ್ದಿದೆ. ಇತ್ತೀಚಿಗಷ್ಟೆ ನಗ್ಮಾ ಕೋವಿಡ್ ಲಸಿಕೆ ಪಡೆದುಕೊಂಡಿದ್ದರು. ಮೊದಲ ಲಸಿಕೆ ಪಡೆದ ನಂತರ ಸೋಂಕು ತಗುಲಿರುವುದು ಖಚಿತವಾಗಿದೆ.

ಈ ಕುರಿತು ಟ್ವೀಟ್ ಮಾಡಿರುವ ನಗ್ಮಾ ”ಕೊರೊನಾ ಮೊದಲ ಲಸಿಕೆ ಪಡೆದ ಬಳಿಕವೂ ನನಗೆ ಕೋವಿಡ್ ಸೋಂಕು ತಗುಲಿದೆ. ಲಸಿಕೆ ಪಡೆದ ನಂತರವೂ ಮುನ್ನೆಚ್ಚರಿಕೆ ವಹಿಸುವುದು ಅಗತ್ಯ. ಸದ್ಯ ನಾನು ಮನೆಯಲ್ಲಿ ಕ್ವಾರಂಟೈನ್ ಆಗಿದ್ದೇನೆ. ನೀವು ಸುರಕ್ಷತೆಯಿಂದಿರಿ” ಎಂದು ತಿಳಿಸಿದ್ದಾರೆ.

 

ಆಲಿಯಾ ಭಟ್ ಅವರ ತಾಯಿ, ಹಿರಿಯ ನಟಿ ಸೋನಿ ರಜ್ದಾನ್ ಅವರು ನಗ್ಮಾ ಅವರ ಆರೋಗ್ಯದ ಬಗ್ಗೆ ಕಾಳಜಿ ತೋರಿದ್ದಾರೆ. ನಗ್ಮಾ ಪೋಸ್ಟ್ ಬಗ್ಗೆ ಪ್ರತಿಕ್ರಿಯಿಸಿರುವ ಸೋನಿ, ‘ನಗ್ಮಾ ದಯವಿಟ್ಟು ಕಾಳಜಿ ವಹಿಸಿ. ಸಾಧ್ಯವಾದರೆ ಇನ್ನೊಮ್ಮೆ ಪರೀಕ್ಷೆಗೆ ಒಳಗಾಗಿ. ಏಕಂದ್ರೆ, ನಿಮಗೆ ಯಾವುದೇ ರೋಗಲಕ್ಷಣಗಳಿಲ್ಲದಿದ್ದರೆ ಅದು ತಪ್ಪು ಫಲಿತಾಂಶವಾಗಿರಬಹುದು. ಅಥವಾ ಸೌಮ್ಯ ರೋಗಲಕ್ಷಣ ಆಗಿರಬಹುದು” ಎಂದಿದ್ದಾರೆ.

ಲಸಿಕೆ ಪಡೆದ ನಂತರ ಹಲವರಿಗೆ ಕೋವಿಡ್ ಸೋಂಕು ತಗುಲಿರುವ ಬಗ್ಗೆ ವರದಿಯಾಗಿದೆ. ಬಾಲಿವುಡ್ ನಟ ಪರೇಶ ರಾವಲ್ ಅವರಿಗೂ ಲಸಿಕೆ ಪಡೆದ ಬಳಿಕವೇ ಸೋಂಕು ಖಚಿತವಾಗಿತ್ತು.

ಕೊರೊನಾ ವೈರಸ್ ಎರಡನೇ ಅಲೆ ಉಂಟಾಗಿದೆ ಎಂದು ವಿಶ್ಲೇಷಿಸಲಾಗುತ್ತಿದ್ದು, ಅದರಲ್ಲಿ ಬಾಲಿವುಡ್‌ ಇಂಡಸ್ಟ್ರಿಯ ಹೆಚ್ಚು ಮಂದಿ ಸೋಂಕಿಗೆ ತುತ್ತಾಗಿದ್ದಾರೆ. ಅಮೀರ್ ಖಾನ್, ಅಕ್ಷಯ್ ಕುಮಾರ್, ಆಲಿಯಾ ಭಟ್, ವಿಕ್ಕಿ ಕೌಶಲ್, ಕತ್ರಿನಾ ಕೈಫ್, ಭೂಮಿ ಪಡ್ನೆಕರ್, ಗೋವಿಂದ ಸೇರಿದಂತೆ ಹಲವರಿಗೆ ಸೋಂಕು ತಗುಲಿದೆ.


Spread the love

About Laxminews 24x7

Check Also

ಸೆಟ್ಟೇರಿತು ಮನೋರಂಜನ್ ರವಿಚಂದ್ರನ್ ಐದನೇ ಸಿನಿಮಾ..ಹೊಸ ನಿರ್ದೇಶಕರ ಜೊತೆ ಕೈ ಜೋಡಿಸಿದ ಕ್ರೇಜಿಸ್ಟಾರ್ ಪುತ್ರ

Spread the love ಸೆಟ್ಟೇರಿತು ಮನೋರಂಜನ್ ರವಿಚಂದ್ರನ್ ಐದನೇ ಸಿನಿಮಾ..ಹೊಸ ನಿರ್ದೇಶಕರ ಜೊತೆ ಕೈ ಜೋಡಿಸಿದ ಕ್ರೇಜಿಸ್ಟಾರ್ ಪುತ್ರ ಲಕ್ಷ್ಮಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ