ಲಖನೌ, ಜು.24- ಅಯೋಧ್ಯೆಯಲ್ಲಿನ ಪ್ರಾಚೀನ ಬಾಬರಿ ಮಸೀದಿ ಧ್ವಂಸ ಪ್ರಕರಣದ ಸಂಬಂಧ ಬಿಜೆಪಿ ಧುರೀಣ ಮತ್ತು ಮಾಜಿ ಉಪ ಪ್ರಧಾನಮಂತ್ರಿ ಲಾಲ್‍ಕೃಷ್ಣ ಅಡ್ವಾಣಿ ಅವರ ಹೇಳಿಕೆಗಳನ್ನು ಇಲ್ಲಿನ ಸಿಬಿಐ ವಿಶೇಷ ನ್ಯಾಯಾಲಯ ಇಂದು ದಾಖಲಿಸಿಕೊಂಡಿದೆ.
ಅಡ್ವಾಣಿ ಅವರು ವಿಡಿಯೋ ಲಿಂಕ್ ಮೂಲಕ ನೀಡಿದ ಹೇಳಿಕೆಯನ್ನು ವಿಶೇಷ ನ್ಯಾಯಮೂರ್ತಿ ಎಸ್.ಕೆ.ಯಾದವ್ ಅವರ ನೇತೃತ್ವದ ನ್ಯಾಯಾಲಯವು ದಾಖಲಿಸಿಕೊಂಡಿತ್ತು.
ನಿನ್ನೆ ಬಿಜೆಪಿ ಧುರೀಣ ಮತ್ತು ಕೇಂದ್ರದ ಮಾಜಿ ಸಚಿವ ಡಾ.ಮುರಳಿ ಮನೋಹರ್ ಜೋಷಿ ವಿಡಿಯೋ ಲಿಂಕ್ ಮೂಲಕ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ತಮ್ಮ ಹೇಳಿಕೆಗಳನ್ನು ನೀಡಿದ್ದರು.
ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಆರೋಪಿಗಳಾಗಿರುವ ಎಲ್ಲರ ಹೇಳಿಕೆಗಳನ್ನೂ ವಿಶೇಷ ನ್ಯಾಯಾಲಯ ದಾಖಲಿಸಿಕೊಳ್ಳುತ್ತಿದೆ.
Laxmi News 24×7