ರಾಯಚೂರು: ನಿರಂತರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆ ದೇವದುರ್ಗ ಪಟ್ಟಣದ ಗೌರಂಪೇಟೆ ಕಾಲೋನಿ ಬಳಿ ಗುಡ್ಡ ಕುಸಿದು ಇಬ್ಬರು ಬಾಲಕರು ಸಾವನ್ನಪ್ಪಿದ್ದಾರೆ.
ಇನ್ನೋರ್ವ ಬಾಲಕನ ಕಾಲು ಮುರಿದಿದೆ. 13 ವರ್ಷದ ವಿರೇಶ್, 10 ವರ್ಷದ ರಮೇಶ್ ಮೃತ ಬಾಲಕರು. ಇನ್ನೋರ್ವ ಬಾಲಕ ಮೌನೇಶ್‍ಗೆ ಕಾಲು ಮುರಿದಿದ್ದು, ದೇವದುರ್ಗ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.ನಿರಂತರ ಮಳೆಯಿಂದಾಗಿ ಗುಡ್ಡದ ಮಣ್ಣು ಸಡಿಲವಾಗಿದ್ದು, ಬಂಡೆ ಕೆಳೆಗೆ ಉರುಳಿದೆ. ಗುಡ್ಡದ ಪಕ್ಕದಲ್ಲೇ ಮನೆಗಳಿದ್ದು, ಬಾಲಕರು ಆಟವಾಡುತ್ತಿದ್ದ ವೇಳೆ ಬಂಡೆ ಉರುಳಿ ಬಾಲಕರ ಮೇಲೆ ಬಿದ್ದಿದೆ.
ಇದರಿಂದ ಇಬ್ಬರು ಬಾಲಕರು ಸಾವನ್ನಪ್ಪಿದ್ದು, ಓರ್ವ ಬಾಲಕನ ಕಾಲು ಮುರಿದಿದೆ. ದೇವದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ. ಗಾಯಾಳು ಮೌನೇಶ್ ದೇವದುರ್ಗ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
Laxmi News 24×7