ಬೆಂಗಳೂರು, ಏಪ್ರಿಲ್ 03: ವಿದೇಶದಿಂದ ಡ್ರಗ್ ತರಿಸಿ ಡೀಲಿಂಗ್ ಮಾಡುತ್ತಿದ್ದ ಇಬ್ಬರು ಡ್ರಗ್ ಡೀಲರ್ ಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬನಶಂಕರಿ ಮತ್ತು ಜಯನಗರ ಸುತ್ತಮುತ್ತ ಡ್ರಗ್ ವಹಿವಾಟು ನಡೆಸುತ್ತಿದ್ದ ಇಬ್ಬರು ಆರೋಪಿಗಳು ಸಿಸಿಬಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದು, ಹತ್ತು ಲಕ್ಷ ರೂ. ಮೌಲ್ಯದ ಎಕ್ಸ್ ಟಸಿ ಪಿಲ್ಸ್ ಮತ್ತು ಎಲ್‌ಎಸ್ ಡಿ ಸ್ಟ್ರಿಪ್ಸ್ ವಶಪಡಿಸಿಕೊಂಡಿದ್ದಾರೆ.
ಜಯನಗರದ ನಿವಾಸಿ ಜೇಡನ್ ಸೌದ್ ಮತ್ತು ಬನಶಂಕರಿ ನಿವಾಸಿ ನಾಗರಾಜ್ ರಾವ್ ಬಂಧಿತ ಅರೋಪಿಗಳು. ಅನೂಜ್ ಮತ್ತು ಹರ್ಷವರ್ಧನ್ ಇಬ್ಬರು ಕಿಂಗ್ ಪಿನ್ ಗಳಿಗಾಗಿ ಶೋಧ ನಡೆಸುತ್ತಿದ್ದಾರೆ. ಇವರ ವಿರುದ್ದ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಂಧಿತ ಜೇಡನ್ ಸೌದ್ ಮತ್ತು ನಾಗರಾಜ್ ರಾವ್ ಸಹಚರರಾದ ಅನೂಜ್ ಮತ್ತು ಹರ್ಷವರ್ಧನ್ ನಿಂದ ಎಕ್ಸಟಸಿ ಪಿಲ್ಸ್ ಮತ್ತು LSD ಸ್ಟ್ರಿಪ್ಸ್ ತರಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು.
ಕೆ.ಆರ್. ರಸ್ತೆಯ ಖಾಸಗಿ ಆಸ್ಪತ್ರೆ ಸಮೀಪ ಡ್ರಗ್ ಡೀಲಿಂಗ್ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಬಂದಿತ್ತು. ಇದರ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಅರೋಪಿಗಳಿಂದ 100 ಎಕ್ಸಟೆಸಿ ಪಿಲ್ಸ್ ಮತ್ತು 100 ಎಲ್ ಎಸ್ ಡಿ ಸ್ಟ್ರಿಪ್ಸ್ ಹಾಗೂ ಎರಡು ಮೊಬೈಲ್ ವಶಪಡಿಸಿಕೊಂಡಿದ್ದಾರೆ. ವಿಚಾರಣೆ ವೇಳೆ ಡಾರ್ಕ್ ವೆಬ್ ತಾಣದಲ್ಲಿ ಡ್ರಗ್ ಖರೀದಿಸಿ ಬೆಂಗಳೂರಿನಲ್ಲಿರುವ ಅಂತಾರಾಷ್ಟ್ರೀಯ ಅಂಚೆ ಕಚೇರಿ ಮೂಲಕ ತರಿಸುತ್ತಿದ್ದರು. ಆ ಬಳಿಕ ಇದನ್ನು ಹೈ ಫೈ ಪಾರ್ಟಿಗಳಿಗೆ ಸಪ್ಲೇ ಮಾಡುತ್ತಿದ್ದರು ಎಂದು ವಿಚಾರಣೆ ವೇಳೆ ತಿಳಿಸಿದ್ದಾರೆ.
Laxmi News 24×7