Breaking News

ಎಸ್‌ಐಟಿ ಪ್ರಶ್ನೆಗಳಿಗೆ ತಬ್ಬಿಬ್ಬಾದ ಸಂತ್ರಸ್ತ ಯುವತಿಯಿಂದ ಶಾಕಿಂಗ್ ಉತ್ತರ !

Spread the love

ಬೆಂಗಳೂರು, ಏಪ್ರಿಲ್ 03: ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಪ್ರಕರಣ ಸಂಬಂಧ ಸಂತ್ರಸ್ತ ಯುವತಿಯ ವಿಚಾರಣೆ ತಾರ್ಕಿಕ ಅಂತ್ಯಕ್ಕೆ ಬಂದು ನಿಂತಿದೆ. ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿಯ ಬಿಡುಗಡೆ ವೃತ್ತಾಂತದ ಬಗ್ಗೆ ಸಿಡಿಲೇಡಿಯನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ಸಿಡಿಲೇಡಿಯೂ ಶಾಕಿಂಗ್ ಉತ್ತರ ನೀಡಿದ್ದಾರೆ. ಕಳೆದ ನಾಲ್ಕು ದಿನ ಎಸ್‌ಐಟಿ ಅಧಿಕಾರಿಗಳ ವಿಚಾರಣೆ ಎದುರಿಸಿರುವ ಸಿಡಿ ಸಂತ್ರಸ್ತ ಯುವತಿಯ ಅಂತಿಮ ವಿಚಾರಣೆ ಇವತ್ತು ಮುಗಿಯಲಿದೆ. ಸೋಮವಾರ ರಮೇಶ್ ಜಾರಕಿಹೊಳಿಯನ್ನು ವಿಚಾರಣೆಗೆ ಒಳಪಡಿಸಲು ಎಸ್‌ಐಟಿ ಅಧಿಕಾರಿಗಳು ಮುಂದಾಗಿದ್ದಾರೆ. ಜಾರಕಿಹೊಳಿ ವಿಚಾರಣೆ ಬಳಿಕ ಪ್ರಕರಣದ ವಾಸ್ತವಾಂಶಗಳು ಬಯಲಿಗೆ ಬರಲಿವೆ.

ಅಶ್ಲೀಲ ಸಿಡಿ ಸ್ಫೋಟ ಪ್ರಕರಣ ಸಂಬಂಧ ಶನಿವಾರ ಕೂಡ ವಿಚಾರಣೆಗೆ ಸೂಚಿಸಿ ಸಿಡಿ ಸಂತ್ರಸ್ತ ಯುವತಿಗೆ ಎಸ್‌ಐಟಿ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ಎಸ್‌ಐಟಿ ತನಿಖಾಧಿಕಾರಿ ಕವಿತಾ ನಾನಾ ಪ್ರಶ್ನೆಗಳನ್ನು ಮುಂದಿಟ್ಟು ಯುವತಿಯಿಂದ ಹೇಳಿಕೆ ಪಡೆದಿದ್ದಾರೆ. ರಮೇಶ್ ಜಾರಕಿಹೊಳಿ ಪರಿಚಯ, ಆನಂತರ ನಡೆದ ಸಂಭಾಷಣೆ, ಜಾರಕಿಹೊಳಿ ಪ್ಲಾಟ್ ಗೆ ಹೋಗಿ ಭೇಟಿ ಮಾಡಿದ ಎಲ್ಲಾ ಘಟನಾವಳಿಗಳ ಬಗ್ಗೆ ಸಿಡಿಲೇಡಿ ವಿವರ ನೀಡಿದ್ದಾಳೆ. ಕೆಲಸದ ಅಮಿಷೆ ಒಡ್ಡಿ ತನ್ನನ್ನು ಲೈಂಗಿಕವಾಗಿ ಬಳಸಿಕೊಂಡರು ಎಂಬ ಉತ್ತರವನ್ನು ನೀಡಿದ್ದಾಳೆ. ಆದರೆ ಸಿಡಿ ಬಿಡುಗಡೆ ಹಿಂದಿನ ರಹಸ್ಯ ವನ್ನು ಸಿಡಿಲೇಡಿಯಿಂದ ಬಾಯಿ ಬಿಡಿಸುವ ಕಾರ್ಯ ಮುಂದುವರೆದಿದೆ.

ಸಿಡಿ ಬಿಡುಗಡೆ ಮಾಡಿದ ವ್ಯಕ್ತಿಗಳ ಕುರಿತಾಗಿ ಸಿಡಿ ಸಂತ್ರಸ್ತ ಯುವತಿಯನ್ನು ಇಂದು ಎಸ್‌ಐಟಿ ಅಧಿಕಾರಿಗಳು ಪ್ರಶ್ನಿಸಲಿದ್ದಾರೆ. ಸಿಡಿ ಬಿಡುಗಡೆ ಮಾಡಿದ್ದು ಯಾರು ? ಮೊದಲು ಸಿಡಿಯನ್ನು ಯಾರಿಗೆ ಕೊಡಿಸಿದಿರಿ ? ದಿನೇಶ್ ಕಲ್ಲಹಳ್ಳಿಗೆ ಸಿಡಿ ಹೇಗೆ ತಲುಪಿತು. ದಿನೇಶ್ ಕಲ್ಲಹಳ್ಳಿಯನ್ನು ನೀವು ಸಂಪರ್ಕಿಸಿದ್ದರೆ ? ಸಿಡಿ ಗ್ಯಾಂಗ್ ನಿಮಗೆ ಹೇಗೆ ಪರಿಚಯ ? ಸಿಡಿ ಬಿಡುಗಡೆಗೆ ಸ್ವತಃ ನೀವೇ ಹೇಳಿದ್ದರೇ ? ಹೀಗೆ ನಾನಾ ಪ್ರಶ್ನೆಗಳನ್ನು ಎಸ್‌ಐಟಿ ಮುಂದಿಟ್ಟಿದೆ. ಇದಕ್ಕೆ ಅಸ್ಪಷ್ಟ ಉತ್ತರ ನೀಡಿರುವ ಸಿಡಿ ಯುವತಿ, ತಲೆ ಮರೆಸಿಕೊಂಡಿರುವ ಶಂಕಿತರು ಪರಿಚಯವಿದ್ದು, ಅವರಿಗೆ ಸಿಡಿಯನ್ನು ನಾನೇ ನೀಡಿದ್ದಾಗಿ ಆಕೆ ಒಪ್ಪಿಕೊಂಡಿದ್ದಾಳೆ ಎಂದು ಹೇಳಲಾಗಿದೆ.

ಇನ್ನು ಬ್ಲಾಕ್ ಮೇಲ್ ವೃತ್ತಾಂತ, ಸಿಡಿ ಬಿಡುಗಡೆ ಬಳಿಕ ಪರಾರಿಯಾಗಿದ್ದು ಯಾಕೆ ? ಪರಾರಿಯಾದ ಬಳಿಕ ಸಿಡಿ ಗ್ಯಾಂಗ್ ಜತೆ ಗುರುತಿಸಿಕೊಂಡಿದ್ದು ಏಕೆ ? ಉದ್ದೇಶ ಪೂರ್ವಕವಾಗಿ ಸಂಚು ರೂಪಿಸಿ ಸಿಡಿ ಬಿಡುಗಡೆ ಮಾಡಿದರೇ ಎಂಬಿತ್ಯಾದಿ ಪ್ರಶ್ನೆಗಳಿಗೆ ಸಿಡಿಲೇಡಿಯಿಂದ ಉತ್ತರ ಕಂಡುಕೊಳ್ಳಲು ಎಸ್‌ಐಟಿ ಅಧಿಕಾರಿಗಳು ಮುಂದಾಗಿದ್ದಾರೆ. ಮಾತ್ರವಲ್ಲ, ಸಿಡಿಲೇಡಿ ವಿಚಾರಣೆಯನ್ನು ಇವತ್ತಿಗೆ ಅಂತ್ಯಗೊಳಿಸಿ ಸೋಮವಾರ ರಮೇಶ್ ಜಾರಕಿಹೊಳಿಯನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ.


Spread the love

About Laxminews 24x7

Check Also

ದಾನವೀರ ಶರಣ ಸಿರಸಂಗಿ ಲಿಂಗರಾಜ ದೇಸಾಯಿ ಅವರ 165ನೇ ವರ್ಷದ ಜಯಂತ್ಯೋತ್ಸವ ಆಚರಣೆ

Spread the loveಸವದತ್ತಿ; ದಾನವೀರ ಶರಣ ಸಿರಸಂಗಿ ಲಿಂಗರಾಜ ದೇಸಾಯಿ ಅವರ 165ನೇ ವರ್ಷದ ಜಯಂತ್ಯೋತ್ಸವ ಆಚರಣೆ ಧಾರವಾಡದ ಮುರುಗಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ